ಉಪ್ಪಯುತ್ತ ಮಾಹಿತಿ

ಪುರಾಣಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಕೈ ಯಲ್ಲಿ ಊಟ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ನೀವು ತಿಳ್ಕೊಂಡ್ರೆ ಇನ್ಮೇಲೆ ಸ್ಪೂನ್ ಬಿಟ್ಟು ಕೈ ಯಲ್ಲೇ ಊಟ ಮಾಡುತ್ತೀರಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೈ ಯಲ್ಲಿ ಊಟ ಮಾಡುವುದರಿಂದ ಆಗುವ ಲಾಭಗಳು.

 

ಕುರ್ಚಿಯ ಮೇಲೆ ಕುಳಿತು ಮೇಜಿನ್ ಮೇಲೆ ತಟ್ಟೆ ಇಟ್ಟುಕೊಂಡು ತರಾವರಿ  ಚಮಚದಲ್ಲಿ ತಿನ್ನುವ ಈ ಕಾಲದಲ್ಲಿ.

ಕ್ಯೆಯಲ್ಲಿ ಊಟ ತಿನ್ನುವವರನ್ನುಅನಾಗರಿಕರಂತೆ ನೋಡುವ ಈಗಿನ  ಕಾಲದ  ಜನ.

 

ತಿಂಡಿ,ಊಟ ಏನೇ ಇದ್ದರೂ ಚಮಚ ಇರಬೇಕು ಎನ್ನುವ ಜನ.ಕೈ ಯಲ್ಲಿ ಯಾರಾದರೂ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ.

 

 

ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಚಿಕ್ಕಂದಿನಿಂದಲೇ ಚಮಚದಲ್ಲಿ ತ್ತಿನ್ನುವ ಅಭ್ಯಾಸ ಮಾಡುತ್ತಿದ್ದಾರೆ ಪೋಷಕರು,ಅದಕ್ಕೆ ಅವರು ಕೊಡುತ್ತಿರುವ ಕಾರಣ…….

 

ಮಕ್ಕಳು ಸರಿಯಾಗಿ ಕೈ ತೊಳೆಯುವುದಿಲ್ಲ,ಕ್ಯೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ,ಎಂದು

ಅಷ್ಟೇ ಅಲ್ಲ ಈಗಿನ ದೊಡ್ಡ ಕಂಪನಿ ಗಳಲ್ಲೂ ಚಮಚದಲ್ಲೇ ತಿನ್ನುತ್ತಾರೆ, ಅದು ಅವರಿಗೆ ಏನೋ ಒಂದು ಮೋಜಿನ ರೀತಿಯಾಗಿ ಬಿಟ್ಟಿದೆ.

ಬನ್ನಿ ಈಗ ಕೈ ಯಿಂದ ಊಟ ತಿನ್ನುವುದರಿಂದ  ಆಗುವ ಲಾಭಗಳೇನು ಎಂದು  ತಿಳಿದುಕೊಳ್ಳೋಣ…

 

ಪ್ರಯೋಜನಗಳು:

 

1.ಕೈ  ಸ್ಪರ್ಶದಿಂದ ನಮ್ಮ ದೇಹದಲ್ಲಿ ಶಕ್ತಿಯ ಸಂಚಲನ ಉಂಟಾಗುತ್ತದೆ.

 

2.ಕೈ ಯಲ್ಲಿ   ಆಹಾರ ತ್ತಿನ್ನುವುದರಿಂದ  ಕೆಲವು ಮಿಲಿಯನ್ ನರಗಳಿಗೆ  ನಮ್ಮ ಮೆದುಳಿಗೆ ಸಂದೇಶವನ್ನು ಕಳುಹಿಸುತ್ತವಂತೆ.

 

3.ಆಹಾರವನ್ನು ಕ್ಯೆಯಲ್ಲಿ ಸ್ಪರ್ಶಿಸುತ್ತಿದಂತೆ,ಆಹಾರ ತೆಗೆದುಕೊಳ್ಳುವ ವಿಷಯ  ಮೆದುಳು ಹೊಟ್ಟೆಗೆ ಸಂದೇಶ ರವಾನಿಸುತ್ತದೆ.ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು,ಕಿಣ್ವಗಳು ಬಿಡುಗಡೆಗೊಂದು ಜೀರ್ಣಕ್ರಿಯೆ ಯನ್ನು ಸರಾಗವಾಗಿ ಆಗುವಂತೆ ಮಾಡುತ್ತವೆ.

 

4.ಕೈ ಯಲ್ಲಿ ಆಹಾರ ತಿನ್ನುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೇ,ಯಾವುದೇ ಅಲೋಚನೆಗಳಿಲ್ಲದೆ ,ಒಂದೇ ಆಲೋಚನೆಯಲ್ಲಿ ಇರುತ್ತೇವೆ.

 

5.ನಮ್ಮ ಈಗಿನ ಕಾಲದ ಆಹಾರದಲ್ಲಿ,ಎಣ್ಣೆ,ತುಪ್ಪ, ಬೆಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ.ಹೀಗೆ ತಯಾರಿಸಿದ ಆಹಾರವನ್ನು ಚಮಚ,ಕಡ್ಡಿಯಂತಹ ಚಮಚ ಗಳಿಂದ ತಿನ್ನುವುದರಿಂದ  ಪ್ರತಿಕ್ರಿಯೆ ಏರಪಟ್ಟು  ಆಹಾರದ  ರುಚಿ ಕೆಡುತ್ತದೆ.

 

 

6.ಕೈ  ಬೆರಳಲ್ಲಿ,ಆಹಾರವನ್ನು ಕಲೆಸಿಕೊಂಡು  ಒಂದೊಂದೇ ತುತ್ತು ತಿನ್ನುವುದರಿಂದ ರಕ್ತ ಸಂಚಾರ ಚೆನ್ನಾಗಿ  ಆಗುತ್ತದೆ.

 

7.ಕೈ  ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ,ಬೆರಳು ತುಟಿಗೆ ತಾಗುತ್ತಿದಂತೆ,ಬಾಯಲ್ಲಿ  ಲಲಾರಸ ಉತ್ಪತ್ತಿಯಾಗುತ್ತದೆ.

 

8.ಇನ್ನು,ಕೈ  ಬೆರಳಲ್ಲಿ ಆಹಾರ ತಿನ್ನುವುದರಿಂದ,ನಮ್ಮ ದೇಹವು ಅನಾರೋಗ್ಯದ ಪಾಲಗದೆ,ಆರೋಗ್ಯವಾಗಿರುತ್ತೇವೆ.ಜೀರ್ಣ ಪ್ರಕ್ರಿಯೆ ಚೆನ್ನಾಗಿ ನೆಡೆಯುತ್ತದೆ. ಇದು ಕೈ  ಮತ್ತು ಕೈ  ಬೆರಳುಗಳಿಗೆ ಒಂದು ರೀತಿಯ ವ್ಯಯಾಮವಾಗಿದೆ.

 

 

ಪುರಾಣಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ  ಹೇಳಿರುವ ಪ್ರಕಾರ;

ಹಸ್ತ ಮುದ್ರೆ

 

 

ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ನಾವು ಮುದ್ರೆ ಗಳನ್ನೂ ಬಳಸುತ್ತೇವೆ ,ಅಷ್ಟೇ ಅಲ್ಲದೆ ಅನೇಕ ಯೋಗ ಕ್ರಮಗಳನ್ನು ಮಾಡುವಾಗಲೂ ಸಹ ಕೆಲವು ಮುದ್ರೆ ಗಳನ್ನೂ ಬಳಸುತ್ತೇವೆ .

 

 

ಈ ಮುದ್ರೆಗಳು ನಮ್ಮ ನಾಡಿಗಳಿಗೆ ಸಂಬಂಧ ಹೊಂದಿದ್ದು , ನಾವು ತಿನ್ನುವಾಗ ಬಳಸುವ ಹಸ್ತ ಮುದ್ರೆ ಜೀರ್ಣ ಕ್ರಿಯೆಯನ್ನು ಉತ್ತಮಪಡಿಸುತ್ತದೆ .

 

ಶ್ಲೋಕಗಳಲ್ಲಿ ಹೇಳಿರುವಂತೆ

“ಕರಾಗ್ರ ವಸತೇ ಲಕ್ಷ್ಮಿ ಕರಮೂಲ ಸರಸ್ವತಿ ಕರಮಾಧ್ಯ ತು ಗೋವಿಂದ ಪ್ರಭಾತ್ ಕರಣದರ್ಶನಂ”

 

 

ಬೆರಳುಗಳ ತುದಿಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ , ಬೆರಳುಗಳ ಮೂಲದಲ್ಲಿ ಸರಸ್ವತಿ ಹಾಗು ಬೆರಳುಗಳ ಮಧ್ಯದಲ್ಲಿ ಗೋವಿಂದ ನೆಲೆಸಿರುತ್ತಾನೆ ಎಂಬುದು ಈ ಶ್ಲೋಕದ ಭಾವಾರ್ಥ ,
ಆದ್ದರಿಂದ ಕೈಗಳಲ್ಲಿ ತಿಂದರೆ ದೇವರ ಅನುಗ್ರಹವಾಗುವುದು ಎಂದು ಹೇಳಲಾಗುತ್ತದೆ .

 

 

ಕೈ ಯಲ್ಲಿರುವ ಒಂದೊಂದು ಬೆರಳು ಕೂಡ  ಒಂದೊಂದು ತತ್ವಗಳನ್ನು ಹೊಂದಿದೆ.

 

ಹೆಬ್ಬೆರಳು:ಅಗ್ನಿ ತತ್ವ.

ತೋರು ಬೆರಳು:ವಾಯು ತತ್ವ.

ಮದ್ಯ ಬೆರಳು:ಆಕಾಶ

ಉಂಗುರ ಬೆರಳು:ಭೂಮಿ

ಕಿರು ಬೆರಳು:ಜಲ ತತ್ವ.

ಈ ಐದು ಬೆರಳುಗಳು ಆಹಾರಕ್ಕೆ ತಾಕಿದಾಗ  ಜೀವಶಕ್ತಿ  ಉತ್ತೇಜನ ಗೊಳ್ಳುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top