ಸಮಾಚಾರ

ಸಿಎಂ ಸಿದ್ದರಾಮಯ್ಯನಿಗೆ ಹೊಸ ಹೆಸರು ಕೊಟ್ಟ ಕಾಂಟ್ರವರ್ಸಿ ಕಿಂಗ್ ಅನಂತಕುಮಾರ್ ಹೆಗ್ಗಡೆ

ಸದಾ ಒಂದಿಲ್ಲ ಒಂದು ವಿವಾದಿತ ಹೇಳಿಕೆ ನೀಡುವ ಮೂಲಕ ಮಾಧ್ಯಮದಲ್ಲಿ ಸುದ್ದಿಯಲ್ಲಿರಬೇಕು ಎಂದು ಬಯಸುವ ಕಾಂಟ್ರವರ್ಸಿ ಕಿಂಗ್ ಅನಂತಕುಮಾರ್ ಹೆಗ್ಗಡೆ ಅವರು ಈಗ ಮತ್ತೊಂದು ಹೇಳಿಕೆ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸ ನಾಮಕರಣ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

 

 

ವಿರಾಟ್ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೊ ಕಾಲ್ಡ್ ಸಭ್ಯರಿಗೆ ಧರ್ಮ ಅಂದರೆ ಏನು ಅಂತ ಗೊತ್ತಿಲ್ಲ. ಹಿಂದೂ ಕಾರ್ಯಕರ್ತರ ಬಗ್ಗೆ ಚರ್ಚೆ ಮಾಡುತ್ತಾರೆ. ಪಾಪಿ‌ ಪಾಕಿಸ್ತಾನಕ್ಕೆ ಪಾಠ ಕಲಿಸುವುದು ದೊಡ್ಡ ಕೆಲಸವಲ್ಲ. ಆದರೆ ನಮಗೆ ಛಿದ್ರರಾಮಯ್ಯ (ಸಿದ್ದರಾಮಯ್ಯ) ಅವರಿಂದ ಸಮಸ್ಯೆ ಯಾಗಿದೆ ಎಂದು ಮುಖ್ಯಮಂತ್ರಿ ಅವರನ್ನು ಟೀಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

‘ಪಾಕಿಸ್ತಾನವನ್ನು ಮಣಿಸುವುದು ಭಾರತಕ್ಕೆ ಕಷ್ಟದ ಕೆಲಸವೇನಲ್ಲ. ಆದರೆ ಸಮಾಜ ಒಡೆಯುವಂತಹ ಛಿದ್ರರಾಮಯ್ಯರನ್ನು ಮೊದಲು ಸೋಲಿಸಬೇಕು’ ಎಂದು ಅನಂತಕುಮಾರ್ ಹೆಗ್ಗಡೆ ಅವರು ಕಿಡಿಕಾರಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಅವರು ಸಿಎಂ ಸಿದ್ದರಾಮಯ್ಯ ಎನ್ನುವ ಬದಲು ಛಿದ್ರರಾಮಯ್ಯ ಎಂದೇ ಕರೆದು ಕಿಡಿ ಕಾರಿದ್ದಾರೆ.

 

 

ಕರ್ನಾಟಕದಲ್ಲಿ 24 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಕಾಶ್ಮೀರ ರಾಜ್ಯದಲ್ಲಿ ಹಿಂದೂಗಳನ್ನು‌ ಕೊಲೆ ಮಾಡಲಾಗುತ್ತಿದೆ. ದೇಶ ಬದುಕುವುದು ವಿಚಾರದ ಆಧಾರದ ಮೇಲೆ ಎಂದ ಅವರು, ನಾನು ಗೌರಿ ಎಂದು‌ ಹೋರಾಟ ಮಾಡುವರು, ಹಿಂದೂಗಳ ಹತ್ಯೆಯಾದಾಗ ಎಲ್ಲಿಗೆ ಹೋಗಿದ್ದರು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮೋದಿ ಒಳ್ಳೆಯ ನಾಯಕ ಎಂದು ಹೇಳಿದ ಅವರು, 60 ವರ್ಷ ಭಾರತವನ್ನು ಆಳಿದವರು ಕೊಳ್ಳೆ ಹೊಡೆದಿದ್ದಾರೆ. ಕಾಂಗ್ರೆಸ್‌‌ಗೆ ನಾಚಿಕೆ ಆಗಬೇಕು, ಕಾಂಗ್ರೆಸ್ ದೇಶ ತುಂಡು ಮಾಡಿದೆ ಎಂದು ಹೇಳಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top