ಸಮಾಚಾರ

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ತಲೆಯನ್ನು ಕತ್ತರಿಸಿಕೊಳ್ಳುತ್ತಾರಂತೆ ಶಾಸಕ ಜಮೀರ್ ಅಹ್ಮದ್

ತಿಂಗಳುಗಳಿಂದ ನಡೆಯುತ್ತಿದ್ದ ರಾಜಕೀಯ ದೊಂಬರಾಟಕ್ಕೆ ಇಂದು ತೆರೆ ಬಿದ್ದಿದ್ದು ಜೆಡಿಎಸ್’ನಿಂದ ಬಂಡಾಯ ಎದ್ದು ಕಾಂಗ್ರೆಸ್ ಕದ ತಟ್ಟಿರುವ ರೆಬೆಲ್ ಶಾಸಕ ಜಮೀರ್ ಅಹಮದ್ ತಮ್ಮ ಸ್ಥಾನಕ್ಕೆ ನೆನ್ನೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಸ್ಪೀಕರ್ ಕೋಳಿವಾಡ ಅವರ ಮನೆಗೆ ಆಗಮಿಸಿ ರಾಜೀನಾಮೆ ನೀಡಿದ್ದಾರೆ.

 

 

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಮೀರ್ ಅಹಮದ್ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದರೆ. “ತಾನೊಬ್ಬನೇ ನಾಯಕನಾಗಿ ಇರಬೇಕು ಎಂಬುದು ಕುಮಾರಸ್ವಾಮಿಯವರ ಮನಸ್ಸಿನಲ್ಲಿದೆ. ಅವರು ಯಾರ ಬೆಳವಣಿಗೆಯನ್ನು ಸಹಿಸುವುದಿಲ್ಲ ಹಾಗಾಗಿ ತನ್ನ ಸ್ವಂತ ಅಣ್ಣನ ಮಗನನ್ನೇ ಬೆಳೆಯಲು ಬಿಡುತ್ತಿಲ್ಲ.”

ಪ್ರಜ್ವಲ್ ರೇವಣ್ಣನನ್ನ ನಾನು ಹತ್ತಿರದಿಂದ ನೋಡಿದ್ದೇನೆ ಆತ ಒಬ್ಬ ಒಳ್ಳೆಯ ನಾಯಕ.ಈಗಲೂ ಆತ ರಾಜರಾಜೇಶ್ವರಿ ನಗರದಲ್ಲಿ​ ಸ್ಪರ್ಧಿಸಿದರೆ ಗೆಲ್ಲುವುದು ಖಚಿತ. ಆದರೆ ಗೆಲ್ಲುವ ಸಾಮರ್ಥ್ಯ ಇರುವ ಪ್ರಜ್ವಲ್​ ಅವರನ್ನು ಕುಮಾರಸ್ವಾಮಿ ತುಳಿಯುತ್ತಿದ್ದಾರೆ. ಪ್ರಜ್ವಲ್’ಗೆ ತಮ್ಮ್ ತಾತ ಪ್ರಧಾನಿಯಾಗಿದ್ದರು ಎನ್ನುವ ಯಾವುದೇ ಅಹಂಕಾರವಿಲ್ಲಾ ಜನರ ಜೊತೆ ಅವರ ಮನೆಯ ಮಗನಂತೆ ಬೆರೆಯುತ್ತಾನೆ. ಭವಿಷ್ಯದಲ್ಲಿ ರಾಜ್ಯಕ್ಕೆ ಆತ ಪ್ರಭಾವಿ ರಾಜಕಾರಣಿಯಾಗಿ ಬೆಳೆದೇ ಬೆಳೆಯುತ್ತಾನೆ ಆತನ ಬೆಳವಣಿಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಜ್ವಲ್ ಮೇಲೆ ನನಗೆ ಒಂದು ನಂಬಿಕೆ ಮತ್ತು ಪ್ರೀತಿ ಇದ್ದೇ ಇರುತ್ತದೆ ನಾನು ಕೂಡ ಆತ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ” ಎಂದು ಜಮೀರ್ ಅಹಮದ್ ಪ್ರಜ್ವಲ್ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

 

ಇದೇ ವೇಳೆ ಚಾಮರಾಜಪೇಟೆ ಚುನಾವಣೆಯ ಬಗ್ಗೆ ಮಾತನಾಡಿದ ಜಮೀರ್ “ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ. ಗೆಲ್ಲುವುದಿರಲಿ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗಲ್ಲ. ಒಂದು ವೇಳೆ ಜೆಡಿಎಸ್ ಅಭ್ಯರ್ಥಿಯನ್ನು ಕುಮಾರಸ್ವಾಮಿ ಗೆಲ್ಲಿಸಿಬಿಟ್ಟರೆ ಅವತ್ತೇ ನನ್ನ ತಲೆಯನ್ನು ಕತ್ತರಿಸಿಕೊಳ್ಳುತ್ತೇನೆ” ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top