ಭವಿಷ್ಯ

ವಾರ ಭವಿಷ್ಯ ಮಾರ್ಚ್ 26 ನೇ ತಾರೀಖಿನಿಂದ 31 ನೇ ತಾರೀಖಿನವರೆಗೆ.

ಮೇಷ (Mesha)

 

 

 

ಅಧಿಕಾರ ಪ್ರಾಪ್ತಿಯ ಯೋಗವಿದೆ, ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇದೆ,ವಾಹನ ಖರೀದಿಯ ಯೋಗವಿದೆ, ಮಾನಸಿಕ ನೆಮ್ಮದಿ ದೊರೆಯಲಿದೆ, ವಾರದ ಮಧ್ಯದಲ್ಲಿ ಮನಃಶಾಂತಿ ದೊರೆಯಲಿದೆ, ಹಿತ ಶತ್ರುಗಳಿಂದ ತೊಂದರೆ ಅನುಭವಿಸಲಿದ್ದೀರಿ, ಅನ್ಯರಲ್ಲಿ ವೈಮನಸ್ಯ ಉಂಟಾಗುವುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ.

ಪರಿಹಾರ.

ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ಲಲಿತಾ ಸಹಸ್ರನಾಮವನ್ನು ಪಾರಾಯಣ ಮಾಡುವುದು ಉತ್ತಮ.

 

ವೃಷಭ (Vrushabha)

ಮಿತ್ರರ ಭೇಟಿ ಮಾಡುವ ಯೋಗವಿದೆ , ದೇವತಾ ಕಾರ್ಯಗಳಲ್ಲಿ ಒಲವು ಹೆಚ್ಚಾಗಲಿದೆ, ಗುರು ಹಿರಿಯರಲ್ಲಿ ಭಕ್ತಿ, ಶ್ರದ್ಧೆ ಹೆಚ್ಚಾಗುತ್ತದೆ,ಯಾರು ಕಷ್ಟಪಟ್ಟು ಕೆಲಸ ಮಾಡುತ್ತಾರೋ ಅವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ,ಯಾರ್ಯಾರು ಷೇರು ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅವರಿಗೆ ವ್ಯವಹಾರಗಳಲ್ಲಿ ನಷ್ಟ ಉಂಟಾಗಲಿದೆ,ಇಲ್ಲ ಸಲ್ಲದ ಅಪವಾದ ಮತ್ತು ನಿಂದನೆಗಳು ನಿಮ್ಮ ಮೇಲೆ ಬರಲಿವೆ, ಆದ್ದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಲಿದೆ.

ಪರಿಹಾರ.

ಪ್ರತಿನಿತ್ಯ  “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಸೋಮವಾರ ಶಿವಾಲಯಕ್ಕೆ ಹೋಗಿ ಬಿಲ್ವಾರ್ಚನೆಯನ್ನು ಮಾಡಿ, ಶಿವನಿಗೆ ದಶ ಪ್ರದಕ್ಷಿಣ ನಮಸ್ಕಾರವನ್ನು ಮಾಡಿ.

 

ಮಿಥುನ (Mithuna)

 

 

ಮಕ್ಕಳಿಂದ ಸುಖ ಪ್ರಾಪ್ತಿಯಾಗುವುದು, ಆಹಾರ ಸೇವನೆಯಲ್ಲಿ  ಬಹಳಷ್ಟು ಎಚ್ಚರವನ್ನು ವಹಿಸಿ, ವಿದ್ಯಾರ್ಥಿಗಳಲ್ಲಿ ಆತಂಕ ಉಂಟು ಮಾಡಲಿದೆ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗಲಿದೆ, ಯತ್ನ ಕಾರ್ಯಗಳಲ್ಲಿ ಬಹಳಷ್ಟು ಅನುಕೂಲಗಳು ಲಭಿಸಲಿವೆ, ಸಕಾಲಕ್ಕೆ ಭೋಜನ ಇಲ್ಲದೇ ಇರುವಂತಹ ಸಮಸ್ಯೆ ಎದುರಾಗಲಿದೆ.

ಪರಿಹಾರ.

ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ಮಂಗಳವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

 

ಕರ್ಕ (Karka)

 

 

ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ, ಆಕಸ್ಮಿಕ ಧನಲಾಭವಾಗುವ ಯೋಗವಿದೆ, ಯಾರನ್ನೂ ಹೆಚ್ಚು ನಂಬಬೇಡಿ, ನಂಬಿದರೆ ನಾನಾ ರೀತಿಯ ಸಮಸ್ಯೆಗಳು ಉಂಟಾಗಲಿವೆ,ಕೆಲಸ ಕಾರ್ಯಗಳಲ್ಲಿ ವಿಳಂಬ  ಉಂಟಾಗಲಿದೆ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ಭೀತಿಯ ವಾತಾವರಣ ನಿವಾರಣೆಯಾಗಲಿದೆ.

ಪರಿಹಾರ.

ಪ್ರತಿನಿತ್ಯ ಹದಿನೆಂಟು ಬಾರಿ ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

 

ಸಿಂಹ (Simha)

ಸ್ತ್ರೀಯರಿಗೆ ಬಹಳಷ್ಟು ಶುಭ ಉಂಟಾಗಲಿದೆ, ಮಕ್ಕಳ ಅಗತ್ಯಕ್ಕೆ ಖರ್ಚು ಬಹಳಷ್ಟು ಹೆಚ್ಚಾಗಲಿದೆ, ಖರ್ಚಿನ ಮೇಲೆ ಹಿಡಿತವಿರಲಿ, ಪರರಿಗೆ ವಂಚನೆಯನ್ನು ಮಾಡುವ ಮನೋಭಾವ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ, ದಿನ ಬಳಕೆ ವಸ್ತುಗಳಿಂದ ಬಹಳಷ್ಟು ಲಾಭವಾಗಲಿದೆ, ಸಾಲ ಮರುಪಾವತಿಯನ್ನು ಮಾಡಲಿದ್ದೀರಿ, ತಾಳ್ಮೆ ಅಗತ್ಯ, ತೀರ್ಥ ಕ್ಷೇತ್ರಗಳ ದರ್ಶನ ಮಾಡಲಿದ್ದೀರಿ.

ಪರಿಹಾರ.

ಒಟು ಬ್ರಾಹ್ಮಣರಿಗೆ ಸ್ವಯಂ ಪಾಕವನ್ನು ದಾನ ಮಾಡಿ, ನಮಸ್ಕರಿಸಿ, ಆಶೀರ್ವಾದವನ್ನು ಪಡೆಯಿರಿ.

 

ಕನ್ಯಾರಾಶಿ (Kanya)

ಈ ವಾರ ಮಾನಸಿಕ ವ್ಯಥೆ ಉಂಟಾಗಲಿದೆ , ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟಾಗಲಿದೆ, ಆರೋಗ್ಯದಲ್ಲಿ ಏರು ಪೇರಾಗುವ ಸಂಭವ ಇದೆ, ಆರೋಗ್ಯದ ಕಡೆ ಗಮನ ಹರಿಸಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ,ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಉಂಟಾಗಲಿದೆ, ಶತ್ರು ನಾಶ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗಲಿದೆ, ಅಮೂಲ್ಯ ವಸ್ತುಗಳ ಖರೀದಿಯನ್ನು ಮಾಡುವಿರಿ.

ಪರಿಹಾರ.

ತಂದೆ ತಾಯಿಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯಿರಿ.

 

ತುಲಾ (Tula)

ಕಾರ್ಯ ಸಿದ್ಧಿ, ಪ್ರತಿಭೆಗೆ ತಕ್ಕ ಪ್ರತಿಫಲ, ಶೀತ ಸಂಬಂಧಿತ ರೋಗಗಳು ಬಾಧಿಸಲಿವೆ, ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇದೆ, ವೈಯಕ್ತಿಕ ವಿಚಾರಗಳ ಕಡೆ ಗಮನ ಹರಿಸಿ, ದ್ರವ್ಯ ಲಾಭ ಉಂಟಾಗಲಿದೆ, ಕೋರ್ಟ್ ಮತ್ತು ವ್ಯವಹಾರಗಳಲ್ಲಿ ಜಯ ಪ್ರಾಪ್ತಿಯಾಗಲಿದೆ.

ಪರಿಹಾರ.

ಪ್ರತಿ ದಿನವೂ “ ಓಂ ನಮೋ ನಾರಾಯಣ ನಮಃ” ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ನಲವತ್ತು ಎಂಟು ಬಾರಿ ಜಪಿಸಿ, ಬುಧವಾರ ವಿಷ್ಣು ದೇವಾಲಯಕ್ಕೆ ಹೋಗಿ ಕೈಲಾದ ಸೇವೆಯನ್ನು ಮಾಡಿ.

 

ವೃಶ್ಚಿಕ (Vrushchika)

ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ, ಹಿತಶತ್ರುಗಳ ಬಾಧೆ, ತೀರ್ಥಯಾತ್ರೆ ದರ್ಶನ  ಮಾಡುವ ಶುಭಯೋಗ, ಮಾನಸಿಕ ನೆಮ್ಮದಿ ದೊರೆಯಲಿದೆ, ಪರರಿಗೆ ಸಹಾಯ ಮಾಡುವ ಮನೋಭಾವ ನಿಮಗೆ ಈ ವಾರ ಮೂಡಲಿದೆ, ಸುಖ ಭೋಜನ ಪ್ರಾಪ್ತಿಯಾಗಲಿದೆ, ಸ್ಥಿರಾಸ್ತಿ ಮಾರಾಟದಿಂದ ಧನಲಾಭ ಉಂಟಾಗಲಿದೆ.

ಪರಿಹಾರ.

ಪ್ರತಿನಿತ್ಯ “ಓಂ ದುರ್ಗಾಯೇ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಮಂಗಳವಾರ ಕುಂಕುಮಾರ್ಚನೆಯನ್ನು ಮಾಡಿ.

 

ಧನು ರಾಶಿ (Dhanu)

ಈ ವಾರ ನಿಮ್ಮ ಮನೆಗೆ ಬಂದು ಮಿತ್ರರ ಆಗಮನವಾಗಲಿದೆ, ಆದ್ದರಿಂದ ವಿಪರೀತ ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ, ಶತ್ರು ಬಾಧೆ, ಪ್ರಿಯ ಜನರ ಭೇಟಿ ಮಾಡಲಿದ್ದೀರಿ, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ, ಆದ್ದರಿಂದ ಸ್ಥಳ ಬದಲಾವಣೆಯನ್ನು ಮಾಡುವ ಸಾಧ್ಯತೆಗಳು ಇವೆ .

ಪರಿಹಾರ.

ಪ್ರತಿ ದಿನ “ಓಂ ನಮೋ ಭಗವತೆ ವಾಸುದೇವಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಬಡ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

 

ಮಕರ (Makara)

ಪ್ರಯತ್ನದಿಂದ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ಥರಿಂದ ಅಶಾಂತಿ ಉಂಟಾಗಲಿದೆ,ಆಲಸ್ಯ ಮನೋಭಾವ, ನಾನಾ ರೀತಿಯ ಸಮಸ್ಯೆಗಳು ಈ ವಾರ ಎದುರಾಗಲಿವೆ, ಧನ ವ್ಯಯವಾಗುವುದು.

ಪರಿಹಾರ .

“ಓಂ ಚಂದ್ರಮೌಳೇಶ್ವರ ನಮಃ” ಈ ಮಂತ್ರವನ್ನು 48 ಬಾರಿ ಜಪಿಸಿ, ಸೋಮವಾರ ಶಿವಾಲಯಕ್ಕೆ ಹೋಗಿ, ಬಿಲ್ವಾರ್ಚನೆಯನ್ನು ಮಾಡಿಸಿ, ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

 

ಕುಂಭರಾಶಿ (Kumbha)

ಗುರುಗಳಿಂದ ಸಲಹೆಯನ್ನು ಪಡೆದುಕೊಳ್ಳಿ,ಅವಿವಾಹಿತರಿಗೆ ವಿವಾಹ ಯೋಗ ಭಾಗ್ಯ ದೊರೆಯಲಿದೆ, ಸ್ತ್ರೀಯರಿಗೆ ಹೆಚ್ಚಾಗಿ ಶುಭವಾಗಲಿದೆ, ಅನಗತ್ಯವಾಗಿ ಅನ್ಯರನ್ನು ದ್ವೇಷಿಸುವಿರಿ, ಹೀಗೆ ದ್ವೇಷಿಸಬೇಡಿ, ಉನ್ನತ ಸ್ಥಾನಮಾನ ದೊರೆಯಲಿದೆ, ಉದ್ಯೋಗದಲ್ಲಿ ಬಡ್ತಿ, ಅಧಿಕವಾಗಿ  ಕೋಪವನ್ನು ಮಾಡಿಕೊಳ್ಳುತ್ತೀರಾ, ಆದ್ದರಿಂದ ಶಾಂತಿಯ ಮಂತ್ರವನ್ನು ಜಪಿಸಿ ವಾರಾಂತ್ಯದಲ್ಲಿ ಧನ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಪರಿಹಾರ.

“ಓಂ ಸಾಯಿ ನಾಥಾಯ ನಮಃ” ಈ ಮಂತ್ರವನ್ನು ಪ್ರತಿದಿನ 48 ಬಾರಿ ಜಪಿಸಿ, ಗುರುವಾರ ಹಳದಿ ವಸ್ತ್ರವನ್ನು ಗುರು ಸಮಾನರಾಗಿ  ಇರುವವರಿಗೆ ದಾನ ಮಾಡಿ, ನಮಸ್ಕಾರ ಮಾಡಿ, ಆಶೀರ್ವಾದವನ್ನು ಪಡೆಯಿರಿ.

 

ಮೀನರಾಶಿ (Meena)

ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ, ಸಾಲಬಾಧೆ ಉಂಟಾಗಲಿದೆ, ಉತ್ತಮ ಬುದ್ಧಿಶಕ್ತಿ ಈ ವಾರ ನಿಮ್ಮಲ್ಲಿ ಕಾಣುತ್ತದೆ, ಸ್ವಂತ ಪರಿಶ್ರಮದಿಂದ ಯಶಸ್ಸನ್ನು ಗಳಿಸುವಿರಿ, ವ್ಯಾಪಾರಿಗಳಿಗೆ ಲಾಭ ಉಂಟಾಗಲಿದೆ, ಮಾನಸಿಕ ನೆಮ್ಮದಿ ದೊರೆಯಲಿದೆ. ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದನ್ನು ಮರೆಯಬೇಡಿ, ವ್ಯಾ ವಾರಾಂತ್ಯದಲ್ಲಿ ಮನಃಶಾಂತಿ ಲಭ್ಯವಾಗಲಿದೆ.

ಪರಿಹಾರ.

ಬಡ ಮಕ್ಕಳಿಗೆ ಅನ್ನ ದಾನ ಮಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top