ಮನೋರಂಜನೆ

ಟ್ರಾಫಿಕ್ ಪೊಲೀಸರ ಜಾಹೀರಾತಿಗೂ ಕಾಲಿಟ್ಟಳು ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್.

ಹುಬ್ಬು ಹಾರಿಸೋ ವೀಡಿಯೋ ಮೂಲಕ ದೇಶಾದಂತ ಪಡ್ಡೆಗಳನ್ನು ಬಿಸಿಯೇರಿಸುತ್ತಲೇ ಏಕಾ ಏಕಿ ಸ್ಟಾರ್ ಆದವಳು ಪ್ರಿಯಾ ವಾರಿಯರ್. ಒಂದೇ ದಿನದಲ್ಲಿ ಭಾರೀ ಪ್ರಚಾರ ಪಡೆದು ನ್ಯಾಷನಲ್ ಕ್ರಶ್ ಅಂತ ಬಿಂಬಿತಳಾಗಿರೋ ಈ ಹುಡುಗಿಯೀಗ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾಳೆ ಎನ್ನುವ ಸುದ್ದಿಗಳು ಕೇಳುತ್ತಿದ್ದರೂ ಯಾವ ಸುದ್ದಿಯೂ ವಾಸ್ತವಕ್ಕೆ ಬಂದಿಲ್ಲ..

 

 

ಈಗತಾನೇ ಒಂದು ಚಿತ್ರದ ಮಲೆಯಾಳಂ ಚಿತ್ರರಂಗಕ್ಕೆ ಅಡಿಯಿರಿಸಿರುವ ಪ್ರಿಯಾ ವಾರಿಯರ್ ಎಂಬ ಹುಡುಗಿ ಇಪ್ಪತೈದು ಚಿತ್ರಗಳಲ್ಲಿ ನಟಿಸಿದರೂ ಸಿಗಲಾರದ ಪ್ರಚಾರವನ್ನು ಇಪ್ಪತ್ತು ಸೆಕೆಂಡುಗಳ ವೀಡಿಯೋ ಮೂಲಕವೇ ಪಡೆದುಕೊಂಡಿದ್ದಾಳೆ. ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಈ ಹುಡುಗಿ ಪಡೆದ ಪಬ್ಲಿಸಿಟಿ ಕಂಡು ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳೆಲ್ಲರೂ ದಂಗೆದ್ದು ಹೋಗಿರೋದಂತೂ ಸತ್ಯ! ಆದರೆ ವಿಷಯ ಅದಲ್ಲ, ಪ್ರಿಯಾ ಸ್ಟೈಲ್ ಅನುಸರಿಸಿ ವಿಡಿಯೋಗಳನ್ನು ಮಾಡುತ್ತಿರುವವರ ಸಂಖ್ಯೆ ಈಗಲೂ ಕಡಿಮೆಯಾಗಿಲ್ಲ ಎನ್ನುವುದೇ ಸೋಜಿಗ.

 

 

ಈಕೆಯ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಸೋಷಿಯಲ್ ಮೀಡಿಯಾ, ದೃಶ್ಯ ಮೀಡಿಯವನ್ನು ದಾಟಿಕೊಂಡು ಈಗ ಟ್ರಾಫಿಕ್ ಪೋಲೀಸರ ಜಾಹೀರಾತಿಗೂ ಆವರಿಸಿಕೊಂಡಿದೆ. ಈಕೆಯ ಜನಪ್ರಿಯತೆಯನ್ನು ಅನೇಕರು ತಮ್ಮ ಅನುಕೂಲಗಳಿಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಅದರ ಸಾಲಿಗೆ ವಡೋದರಾ ಟ್ರಾಫಿಕ್ ಪೊಲೀಸರು ಸೇರಿಕೊಂಡಿದ್ದಾರೆ.

ದಿನೇ ದಿನೇ ಜಾಸ್ತಿಯಾಗುತ್ತಿರುವ ಆಕ್ಸಿಡೆಂಟ್, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ಹೊಸ ಹೊಸ ರೀತಿಯ ವಿಧಾನಗಳ ಪ್ರಯೋಗವನ್ನು ಮಾಡುತ್ತಿದ್ದು ಈಗ ಪ್ರಿಯಾ ವಾರಿಯರ್ ಮೂಲಕ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸಲು ಹೊರಟಿದ್ದಾರೆ . ಅದರಂತೆ “ಟ್ರಾಫಿಕ್ ಹೋರ್ಡಿಂಗ್ಸ್ ಗಳಲ್ಲಿ ಪ್ರಿಯಾಳ ಕಣ್ಸನ್ನೆಯ ಫೋಟೋ ಹಾಕಿ, ಅದರ ಕೆಳಗೆ ‘ಕಣ್ಮುಚ್ಚಿ ತೆರೆಯುವುದರಲ್ಲಿ ಅಪಘಾತಗಳು ಸಂಭವಿಸಬಹುದು, ಹಾಗಾಗಿ ಪ್ರತಿ ಕ್ಷಣವೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ’ ಎಂದು ಬರೆದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top