ದೇವರು

ಮನೆ ವಾಸ್ತು ಬಗ್ಗೆ ನಿಮಗೆ ಗೊತ್ತಿರಲೇಬೇಕಾದ 14 ವಿಷಯಗಳು, ಹೀಗಿದ್ರೆ ಮನೇಲಿ ಕಷ್ಟಗಳು ಬರೋದೇ ಇಲ್ವಂತೆ !

1. ಪೂರ್ವ ಮತ್ತು ಉತ್ತರ ದಿಕ್ಕಿಗೆ ನಿಂತುಕೊಂಡು ಅಡುಗೆ ಮಾಡಬೇಕು..

 

 

2. ದಕ್ಷಿಣ ದಿಕ್ಕಿಗೆ ಮುಖವಾಗಿ ಪಾತ್ರೆ ತೊಳೆಯಬೇಕು.

 

3. ಮಕ್ಕಳು ಮಲಗುವ ಕೋಣೆ ಉತ್ತರ ಪೂರ್ವಕ್ಕೆ ಇರಬೇಕು.

 

4. ಅಪ್ಪ ಅಮ್ಮ ಮಲಗುವ ಕೋಣೆ ದಕ್ಷಿಣ-ಪಶ್ಚಿಮ ದಿಕ್ಕಿಗೆ ಇರಬೇಕು.

 

5. ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು ಯಾಕೆಂದರೆ ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಮ್ಮ ಮುಖವನ್ನು ನಾವೇ ನೋಡಿಕೊಳ್ಳಬಾರದು.ಹಾಗೇನಾದರೂ ಕನ್ನಡಿ ಇದ್ದರೆ ಅದನ್ನು ಬಟ್ಟೆಯಿಂದ ಮುಚ್ಚಿಬಿಡಿ.

 

6. ಊಟದ ಕೋಣೆಯಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಆರೋಗ್ಯ ವೃದ್ಧಿಸುತ್ತದೆ.

 

7. ಊಟ ಮಾಡುವಾಗ ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಬೇಕು ಅಂದರೆ ಸೂರ್ಯ ಉದಯಿಸುವ ದಿಕ್ಕು.

 

8. ಅನ್ನ ಮಾಡಿದ ಪಾತ್ರೆ ಮತ್ತು ಅಡುಗೆಯನ್ನು ಮಾಡಲು ಬಳಸಿದ ಪಾತ್ರೆಗಳನ್ನು ತೊಳೆದ ನಂತರ ಮಗುಚಿ ಇಡಬಾರದು. ಅದೇ ರೀತಿ ಊಟ ಮಾಡಲು ಬಳಸುವ ತಟ್ಟೆ ಹಾಗೂ ಲೋಟಗಳನ್ನು ಮಗುಚಿ ಇಡಬಾರದು ಹೇಗೆ ಮಾಡಿದರೆ ಮನೆಗೆ ದರಿದ್ರ ಆವರಿಸುತ್ತದೆ ಅನ್ನಕ್ಕೆ ಕೊರತೆ ಉಂಟಾಗುತ್ತದೆ.

 

 

9. ಅಡುಗೆ ಕೋಣೆಯಲ್ಲಿ ದೇವರ ಚಿತ್ರಗಳನ್ನ ಇಡಬಾರದು ಹಾಗೂ ದೇವರ ಕೋಣೆಯ ಪಕ್ಕದಲ್ಲಿಯೇ ಅಡುಗೆ ಅಥವಾ ಸ್ನಾನ ಮತ್ತು ಶೌಚಾಲಯ ದ ಕೋಣೆಗಳು ಇರಬಾರದು.ಹೀಗೆ ಇದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿಗಿಂತ ಹೆಚ್ಚಾಗಿ ಋಣಾತ್ಮಕ ಶಕ್ತಿಯು ಅಧಿಕವಾಗಿ ಉಂಟಾಗುತ್ತದೆ.

 

 

10. ಯಾವುದೇ ಔಷಧಿಗಳೂ, ಮಾತ್ರೆಗಳನ್ನು ಆಡುಗೆ ಕೋಣೆಯಲ್ಲಿ ಇಡಬಾರದು.

 

11. ದೇವರ ಫೋಟೋಗಳನ್ನು ಪೂರ್ವ ಉತ್ತರ ದಿಕ್ಕಿನಲ್ಲಿ ಇರಿಸಬೇಕು ಮತ್ತು ಪೂಜೆಯನ್ನು ಪೂರ್ವ ಹಾಗೂ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ಮಾಡಬೇಕು.

 

12. ಗಣೇಶ,ಹನುಮಂತ,ದುರ್ಗಾ ದೇವಿಯ ಫೋಟೋಗಳನ್ನು ದಕ್ಷಿಣ ದಿಕ್ಕಿನ ಕಡೆಗೆ ಇಡಬೇಕು.

 

13. ಆಮೆ ಹಾಗೂ ಗರುಡವನ್ನು ಬೆಳ್ಳಿಯಿಂದ ಮಾಡಿಸಿ ಮನೆಯ ಪೂಜಾ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು, ಲಕ್ಷ್ಮಿಯ ಅನುಗ್ರಹದಿಂದ ಧನಪ್ರಾಪ್ತಿ ಯಾಗುತ್ತದೆ.

 

14. ಹಸುವಿನ ಚಿತ್ರಪಟ ಅಥವಾ ಗೋಮಾತೆಯನ್ನು ಬೆಳ್ಳಿಯಿಂದ ಮಾಡಿಸಿ ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿ ಪೂಜಿಸಿದರೆ ಒಳ್ಳೆಯದು ಯಾಕೆಂದರೆ ಗೋವಿನಲ್ಲಿ ಎಲ್ಲಾ ದೇವರುಗಳು ನೆಲೆಸಿದ್ದಾರೆ ಹಾಗೂ ಗೋಮಾತೆ ನಮ್ಮ ಮನೆಯಲ್ಲಿ ಇರುವ ಎಲ್ಲಾ ಕಷ್ಟಗಳ್ಳನ್ನು ನಾಶ ಮಾಡಿ ಸುಖ,ಶಾಂತಿ,ನೆಮ್ಮದಿಯು ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top