ಉಪ್ಪಯುತ್ತ ಮಾಹಿತಿ

ಅಡುಗೆ ಮನೆ ಬಚ್ಚಲು ಮನೆ ನಲ್ಲಿ ಪಳ ಪಳ ಹೊಳೆಯೋಕೆ ಏನ್ ಮಾಡ್ಬೇಕು ? ಇಲ್ಲಿದೆ ನೋಡಿ ..

ಅಡುಗೆ ಮನೆ ಬಚ್ಚಲು ಮನೆ ನಲ್ಲಿ ಕ್ಲೀನ್ ಮಾಡೋಕೆ ಹೀಗೆ ಮಾಡಿ …

 

ಅಡುಗೆ ಮನೆ ಮತ್ತು ಸ್ನಾನದ ಗೃಹದಲ್ಲಿನ ನೀರಿನ ನಲ್ಲಿಗಳನ್ನು ಶುಚಿ ಗೊಳಿಸಲು ಇಲ್ಲಿದೆ ಸರಳವಾದ ಐದು ಸಲಹೆಗಳು.
ನಲ್ಲಿಗಳ ಸ್ವಚ್ಛತೆಗೆ ಆದ್ಯತೆ.

 

ಪ್ರತಿನಿತ್ಯ ಹಲವಾರು ಬಾರಿ ನೀರಿನ ನಲ್ಲಿ ಯನ್ನು ಪದೇ ಪದೇ ಬಳಸುವುದರಿಂದ ಸುತ್ತಲೂ ಗಲೀಜಾಗುವ ಸಂಭವ ಹೆಚ್ಚು.ಅಗಾಗ್ಗೆ ಸೂಕ್ತವಾದ ಕ್ರಮಗಳನ್ನು ಅನುಸರಿಸಿರಿ ದಲ್ಲಿ ನೀರಿನ ನಲ್ಲಿಯನ್ನು ಶುಚಿಯಾಗಿ ಹೊಳಪಾಗಿ ಇರಿಸಬಹುದು.

 

 

1.ಸ್ವಚ್ಛತೆಗೆ ನಿಂಬೆರಸ ಬಳಸಿ.

 

ಯಾವಾಗಲೂ ನೀರು ಬಳಸುವುದರಿಂದ ಅಲ್ಲಲ್ಲಿ ಕಲೆ ಯಾಗುವುದು ಸಾಮಾನ್ಯ ಸಂಗತಿ. ಆದರೂ ಅದನ್ನು ನೋಡಿದಾಗ ಅಸಹ್ಯ ವಾಗಿ ಕಾಣುತ್ತದೆ. ಆದ್ದರಿಂದ ವಾರಕ್ಕೊಮ್ಮೆ ನಿಂಬೆರಸ ವನ್ನು ಸುತ್ತಲೂ ಸಿಂಪಡಿಸಿ.5 ನಿಮಿಷ ನೆನೆಯಲು ಬಿಡಿ. ನಂತರ ಬ್ರಶ್ ನಿಂದ ಚೆನ್ನಾಗಿ ಉಜ್ಜಿ ತೊಳೆದರೆ ಎಲ್ಲಾ ಕಲೆ ಗಳು ಮಾಯವಾಗುತ್ತವೆ.

 

2.ತಕ್ಷಣ ಶುಚಿಗೊಳಿಸಿ.

 

ನಲ್ಲಿಯನ್ನು ಉಪಯೋಗಿಸಿ ದ ನಂತರ ಓಂದು ಹತ್ತಿಯ ಬಟ್ಟೆಯನ್ನು ತೆಗೆದುಕೊಂಡು ನೀರು ನಿಲ್ಲದಂತೆ ನೋಡಿಕೊಂಡು ತಕ್ಷಣ ಒರೆಸಿ. ಇದರಿಂದ ಕಲೆ ಆಗುವ ಸಾಧ್ಯತೆ ಕಡಿಮೆ. ಬಳಸಿದಾಗಲೆಲ್ಲ ಮನೆಯವರು ಹೀಗೆ ಮಾಡುವುದನ್ನು ಅಭ್ಯಾಸ ಮಾಡಿ ಕೊಂಡರೆ ಹೊಸದಾಗಿ ಕಾಣುತ್ತದೆ. ಹೊಳಪು ಹಾಗೆಯೇ ಉಳಿದಿರುತ್ತದೆ.ಜಾಸ್ತಿ ಸಮಯ ಬಿಟ್ಟರೆ ಕೊಳಕಾಗಿ ಕಾಣುತ್ತದೆ.

 

3.ವಿನೆಗರ್ ಉತ್ತಮ.

 

ನೀರಿನ ನಲ್ಲಿಯ ಮೂಲೆ ಸುತ್ತ ಪೂರ್ತಿಯಾಗಿ ಶುಚಿಗೊಳಿಸಲು ವಿನೆಗರ್ ಉತ್ತಮ. ವಿನೆಗರ್ ಹನಿ ಯನ್ನು ನಲ್ಲಿಯ ಸುತ್ತಲೂ ಹಾಕಿ.ಉಪಯೋಗಿಸಿ ಬಿಟ್ಟ ಟೂತ್ ಬ್ರಶ್ ನಿಂದ ಮೂಲೆ ಮೂಲೆ ಯನ್ನು ಉಜ್ಜಿದರೆ ಮತ್ತಷ್ಟು ಶುಚಿಗೊಳ್ಳುತ್ತದೆ. ಎಲ್ಲಾ ಬ್ರಶ್ ಗಳಿಗಿಂತ ಟೂತ್ ಬ್ರಶ್ ಬಳಸಿದರೆ ಉತ್ತಮ. ಸೋಪಿನ ಪುಡಿಯನ್ನು ಉಪಯೋಗಿಸಿಯು ಸ್ವಚ್ಛಗೊಳಿಸಬಹುದು.

 

4.ವಾರಕ್ಕೊಮ್ಮೆ ಶುಚಿಗೊಳಿಸಿ.

 

ನೀರಿನ ನಲ್ಲಿಯನ್ನು ದಿನದಲ್ಲಿ ಹಲವಾರು ಸಲ ಬಳಸುವುದರಿಂದ ಸಿಂಕ್ ಮತ್ತು ನಲ್ಲಿಯ ಸುತ್ತಲೂ ಕಲೆಗಳು ಇರುತ್ತವೆ. ಇದರಿಂದ ನೋಡಲು ಕೂಡ ಚೆನ್ನಾಗಿ ಕಾಣುವುದಿಲ್ಲ. ಅದರಿಂದ ವಾರಕ್ಕೊಮ್ಮೆ ಬಿಡುವು ಮಾಡಿಕೊಂಡು ಶುಚಿಗೊಳಿಸಿ. ಹೆಚ್ಚಿನ ದಿನ ಹಾಗೆಯೇ ಬಿಟ್ಟರೆ ಕಲೆಗಳು ಮಾಸದೆ ಉಳಿದುಬಿಡುತ್ತವೆ. ಮನೆಗೆ ಬಂದಂತಹ ಅತಿಥಿಗಳು ನಿಮ್ಮನ್ನು ಅಲ್ಲಗಳೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಯಾದರೂ ಸ್ವಚ್ಛಗೊಳಿಸಿ.

 

5.ಅಡುಗೆ ಸೋಡಾ ಸೂಕ್ತ.

 

ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತು ಅಡಿಗೆ ಸೋಡಾ. ಇದನ್ನು ನಲ್ಲಿ ಸುತ್ತ ಉದುರಿಸಿ .ಉದುರಿಸಿ ದ ಸಮಯದಲ್ಲಿ ನೀರನ್ನು ಬಳಸಬೇಡಿ. ಸ್ವಲ್ಪ ಪ್ರಮಾಣದಲ್ಲಿ ತೇವಾಂಶವಿದ್ದರೆ ಅಷ್ಟೇ ಸಾಕು.ಹತ್ತು ನಿಮಿಷ ಹಾಗೆಯೇ ವಣಗಲು ಬಿಡಿ ನಂತರ ಬ್ರಶ್ ತೆಗೆದುಕೊಂಡು ಶುಚಿಗೊಳಿಸಿದರೆ ಅದರಲ್ಲಿ ಅಂಟಿಕೊಂಡಿದ್ದ ಕಲೆಗಳು ಮಾಯವಾಗುತ್ತವೆ. ಸಿಂಕ್ ಕೂಡ ಮತ್ತೆ ಹೊಸ ಹೊಳಪನ್ನು ಪಡೆದುಕೊಳ್ಳುತ್ತದೆ.
ಹೀಗೆ ಆಡಿಗೆ ಮನೆ ಮತ್ತು ಸ್ನಾನದ ಮನೆಯಲ್ಲಿರುವುದು ನೀರಿನ ನಲ್ಲಿಗಳನ್ನು ಅಗಾಗ್ಗೆ ಸ್ವಚ್ಛಗೊಳಿಸುತ್ತಿದರೆ ಹೊಳಪಾಗಿ ಇರುತ್ತದೆ. ಮತ್ತೆ ಯಾವುದೇ ಸೋಂಕು ಕೂಡ ಹರಡುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top