ಮನೋರಂಜನೆ

ಸೂಜಿದಾರ ಚಿತ್ರದಲ್ಲಿ ಹರಿಪ್ರಿಯಾ ಪಾತ್ರವೇನು ಗೊತ್ತಾ?

ರಂಗಭೂಮಿ ಮತ್ತು ಸಾಹಿತ್ಯದ ಹಿನ್ನೆಲೆ ಇರುವವರು ಚಿತ್ರವೊಂದನ್ನು ಮಾಡಲು ಮುಂದಾಗ ಸಹಜವಾಗಿಯೇ ಕುತೂಹಲವಿರುತ್ತದೆ. ಅಂಥಾದ್ದೇ ಒಂದು ಕ್ಯೂರಿಯಾಸಿಟಿಗೆ ಕಾರಣವಾಗಿರೋ `ಸೂಜಿದಾರ’ ಚಿತ್ರವೀಗ ಮುಕ್ತಾಯದ ಹಂತ ತಲುಪಿಕೊಂಡಿದೆ. ಎಡಿಟಿಂಗ್, ಸಾಂಗ್ ರೀರೆಕಾರ್ಡಿಗ್‌ಗಳನ್ನೆಲ್ಲ ಹಂತ ಹಂತವಾಗಿ ಮುಗಿಸಿಕೊಳ್ಳುತ್ತಿರೋ ಚಿತ್ರತಂಡ ಪ್ರಚಾರದ ಅಖಾಡಕ್ಕಿಳಿಯಲು ತಯಾರಿ ನಡೆಸಿಕೊಳ್ಳುತ್ತಿದೆ.

 

 

ಅಂದಹಾಗೆ ರಂಗಭೂಮಿಯಲ್ಲಿ ಗಣನೀಯವಾಗಿ ಗುರುತಿಸಿಕೊಂಡಿರುವ ಮೌನೇಶ್ ಬಡಿಗೇರ್ `ಸೂಜಿದಾರ’ ಚಿತ್ರದ ನಿರ್ದೇಶಕರು. ಕಥೆಗಾರರಾಗಿಯೂ ಗುರುತಿಸಿಕೊಂಡಿರೋ ಮೌನೇಶ್ ಬಡಿಗೇರ್ ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಸೂಜಿದಾರ ಚಿತ್ರವನ್ನು ರೂಪಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಇಂದ್ರಕುಮಾರ್ ಅವರ ಈ ಕಥೆಯನ್ನು ಓದಿ ಅವರಿಗೆ ಕೂಡಲೇ ಫೋನಾಯಿಸಿದ್ದ ಮೌನೇಶ್ ಈ ಕಥೆಯನ್ನು ಸಿನಿಮಾ ಮಾಡೋದಾಗಿ ಹೇಳಿಕೊಂಡಿದ್ದರಂತೆ. ಅದೀಗ ಕೈಗೂಡಿದೆ. ಹರಿಪ್ರಿಯಾ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ಜೊತೆಗೆ ಯಶವಂತ್ ಶೆಟ್ಟಿ, ಸುಚೇಂದ್ರಪ್ರಸಾದ್, ಅಚ್ಯುತ ಕುಮಾರ್, ಚೈತ್ರಾ ಹರೀಶ್, ನಾಗರಾಜ್ ಪತ್ತಾರ್ ಮುಂತಾದವರು ನಟಿಸಿದ್ದಾರೆ. ಅಶೋಕ್ ರಾಮನ್ ಛಾಯಾಗ್ರಹಣವಿರುವ ಈ ಚಿತ್ರ ಇದೀಗ ಡಬ್ಬಿಂಗ್ ಹಂತದಲ್ಲಿದೆ.

 

 

ಈ ಚಿತ್ರದಲ್ಲಿ ಭಿನ್ನವಾದ ಐದು ಹಾಡುಗಳಿವೆಯಂತೆ. ಇದಕ್ಕೆ ಭಿನ್ನಷಡ್ಜ ಸಂಗೀತ ನೀಡಿದ್ದಾರೆ. ಈ ಹಾಡುಗಳು ಮತ್ತು ಟ್ರೈಲರ್ ಅನ್ನು ಇಷ್ಟರಲ್ಲೇ ಚಿತ್ರ ತಂಡ ಲೋಕಾರ್ಪಣೆ ಮಾಡಲಿದೆ. ಇದುವರೆಗೂ ಹಲವಾರು ಚಿತ್ರಗಳ ಚಿತ್ರಕಥೆ, ನಟ ನಟಿಯರನ್ನು ತಯಾರು ಮಾಡುವಂಥಾ ಕೆಲಸ ಕಾರ್ಯಗಳ ಮೂಲಕ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದ ಮೌನೇಶ್ ಬಡಿಗೇರ್ ಚೊಚ್ಚಲ ಪ್ರಯತ್ನದಲ್ಲಿಯೇ ಒಂದೊಳ್ಳೆ ಕಥೆನ್ನು ಆರಿಸಿಕೊಂಡು ಚೆಂದದ ಚಿತ್ರ ಮಾಡಿದ ಖುಷಿಯಲ್ಲಿದ್ದಾರೆ. ಇದುವರೆಗೂ ಒಂದಷ್ಟು ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಮೌನೇಶ್ ಸಾಹಿತ್ಯಕ್ಕೆ ದೃಷ್ಯಗಳ ಮೂಲಕ ಹೊಸಾ ಪರಿಭಾಷೆ ಕೊಡುವ ಪ್ರಯತ್ನಗಳನ್ನೂ ಮಾಡಿದ್ದಾರೆ.

ಇಂಥಾ ಹಿನ್ನೆಲೆ ಹೊಂದಿರುವ ಮೌನೇಶ್ ಬಡಿಗೇರ್ ನಿರ್ದೇಶನದ ಸೂಜಿದಾರ ಪ್ರೇಕ್ಷಕರ ವಲಯದಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ಮೊದಲ ನೋಟದಲ್ಲಿಯೇ ಹರಿಪ್ರಿಯಾ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಸೆಳೆದಿದ್ದಾರೆ. ಅವರಿಲ್ಲಿ ಯಾವ ಥರದ ಪಾತ್ರ ನಿರ್ವಹಿಸಿದ್ದಾರೆಂಬ ಬಗೆಗೂ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top