ಮನೋರಂಜನೆ

ಭಾರತೀಯ ಸಿನಿರಂಗದಲ್ಲಿ ಅಮಿತಾಬ್ ಬಚ್ಚನ್ ಬಿಟ್ರೆ ಕಿಚ್ಚನದ್ದೇ ಅತ್ಯುತ್ತಮ ಧ್ವನಿ! ಹೀಗಂತ ಹೇಳಿದ್ಯಾರು?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸುದೀಪ್! ಭಾರತೀಯ ಸಿನಿಮಾರಂಗದಲ್ಲಿ ಈ ತಲೆಮಾರಿನ ನಾಯಕನಟರನ್ನು ಪ್ರತಿನಿಧಿಸುವ ಕನ್ನಡ ಚಿತ್ರರಂಗದ ಮುಂಚೂಣಿಯ ನಟ. ತಮ್ಮ ವಿಭಿನ್ನ ಕಂಠ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಕಿಚ್ಚಾ ಸುದೀಪ್ ಈಗಂತೂ ದೇಶ ವಿದೇಶಗಳಲ್ಲಿಯೂ ಸಖತ್ ಫೇಮಸ್. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿರುವ ಸುದೀಪ್ ಅವರಿಗೆ ಕರ್ನಾಟಕ,ತಮಿಳುನಾಡು, ಆಂಧ್ರ ಸೇರಿದಂತೆ ಇಡೀ ಭಾರತದಾದ್ಯಂತ ಅಭಿಮಾನಿಗಳು ಇದ್ದಾರೆ.

 

 

ಇಂಥಾ ಸುದೀಪ್ ಅವರಿಗೆ ಟ್ವಿಟರ್ ನಲ್ಲಿ ಹೊರ ರಾಜ್ಯದ ಸಾಕಷ್ಟು ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಕಿಚ್ಚನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚಿಗಷ್ಟೆ ತಮಿಳು ಅಭಿಮಾನಿಯೊಬ್ಬರು ಸುದೀಪ್ ಸಿನಿಮಾಗಳನ್ನ ನೋಡಲು ಕನ್ನಡ ಕಲಿಯುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದಕ್ಕೆ ಕಿಚ್ಚ ಖುಷಿಯಿಂದ ಮೆಚ್ಚಿಕೊಂಡಿದ್ದರು. ಈಗ ಮತ್ತೊಬ್ಬ ತಮಿಳು ಅಭಿಮಾನಿಯೇ ಟ್ವೀಟ್ ಕಿಚ್ಚನ ಅಭಿಮಾನಿಗಳಲ್ಲಿ ವೈರಲ್ ಆಗ ತೊಡಗಿದೆ.

 

 

ಹೌದು ತಮಿಳುನಾಡಿನ ವ್ಯಕ್ತಿಯೊಬ್ಬ ಕಿಚ್ಚನಿಗೆ ಅತ್ಯತ್ತಮವಾದ ಕಾಂಪ್ಲಿಮೆಂಟ್ ಕೊಟ್ಟಿದ್ದು ಅಮಿತಾಬ್ ಬಚ್ಚನ್ ಬಿಟ್ರೆ ನಿಮ್ದೇ ಉತ್ತಮವಾದ ವಾಯ್ಸ್ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆ ವ್ಯಕ್ತಿಯು “ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ಬಿಟ್ರೆ ನಿಮ್ಮ ಧ್ವನಿ ಮಾತ್ರ ಗಡುಸಾಗಿದೆ, ನಿಮ್ಮ ಕನ್ನಡ ಚಿತ್ರಗಳು ತಮಿಳಿನಲ್ಲಿ ಡಬ್ ಆಗುತ್ತವೆ ಆದರೆ ನಿಮ್ಮ ಅಭಿನಯಕ್ಕೆ ಬೇರೆಯವರು ಧ್ವನಿ ನೀಡಿದರೆ ಅದು ಚೆನ್ನಾಗಿರಲ್ಲ. ದಯವಿಟ್ಟು ನಿಮ್ಮ ನೈಜ ಧ್ವನಿಯಲ್ಲೇ ಸಿನಿಮಾ ಮಾಡಿ. ನಿಮ್ಮ ಧ್ವನಿ ಕೇಳಲು ನಾನು ಕಾಯುತ್ತಿದ್ದೇನೆ.” ಎಂದು ಕಿಚ್ಚನಿಗೆ ಸಂದೇಶವನ್ನು ರವಾನಿಸಿದ್ದಾರೆ.

ಈ ಟ್ವೀಟ್ ಉತ್ತರ ನೀಡಿರುವ ಕಿಚ್ಚ “ನಿಮ್ಮ ಪ್ರೀತಿಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ನಿಮ್ಮ ಆಸೆಯನ್ನು ಪೂರೈಸುವ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top