ಸಮಾಚಾರ

ವಿಡಿಯೋದಲ್ಲಿ ಬಯಲಾದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರನ ಕಳ್ಳಾಟ , ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವ್ ಸ್ಮಿತ್ ಐಪಿಎಲ್ ನಿಂದ ಕಿಕ್ ಔಟ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವ್ ಸ್ಮಿತ್ ಐಪಿಎಲ್ ನ ರಾಜಸ್ತಾನ್ ರಾಯಲ್ಸ್ ಕ್ರಿಕೆಟ್ ತಂಡದ ನಾಯಕರಾಗಿದ್ದ ಸ್ಟಿವ್ ಸ್ಮಿತ್ ರನ್ನು ಚೆಂಡು ವಿರೂಪ ಪ್ರಕರಣ ದ ಆರೋಪ ಮೇರೆಗೆ ರಾಜಸ್ತಾನ್ ರಾಯಲ್ಸ್ ಕ್ರಿಕೆಟ್ ತಂಡದಿಂದ ಕಿಕ್ ಔಟ್ ಮಾಡಲಾಗಿದೆ.

 

ಏನಿದು ಚೆಂಡು ವಿರೂಪ ಪ್ರಕರಣ

ಎದುರಾಳಿ ತಂಡದ ಆಟಗಾರರನ್ನು ಮೈದಾನದಲ್ಲಿಯೇ ಸ್ಲೆಡ್ಜಿಂಗ್ ಮಾಡುತ್ತಾರೆಂದು ಕುಖ್ಯಾತಿ ಪಡೆದುಕೊಂಡಿರುವ ಆಸ್ಟ್ರೇಲಿಯಾ ಆಟಗಾರರು, ಇದೀಗ ಮೈದಾನದಲ್ಲೇ ಚೆಂಡು ವಿರೂಪ ಮಾಡಿದ ಅಪಮಾನಕ್ಕೆ ಸಿಲುಕಿದ್ದಾರೆ. ಚೆಂಡು ವಿರೂಪಗೊಳಿಸಿದ ವಿವಾದದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್.

 

 

ಹಳದಿ ಬಣ್ಣದ ವಸ್ತುವಿನಿಂದ ಚೆಂಡಿನ ರೂಪ ಬದಲಿಸಿ ರಿವರ್ಸ್ ಸ್ವಿಂಗ್ ಲಾಾಭ ಪಡೆಯಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 43ನೇ ಓವರ್ ಮುಗಿದ ನಂತರ ಚೆಂಡನ್ನು ಎತ್ತಿಕೊಂಡು ಪ್ಯಾಂಟ್‌ನ ಒಳ ಜೇಬಿನಿಂದ ವಸ್ತುವೊಂದನ್ನು ತೆಗೆದು ಅದರ ಮೂಲಕ ಚೆಂಡನ್ನು ತಿಕ್ಕಿದ್ದಾರೆ. ಇದರಿಂದಾಗಿ ಐಸಿಸಿ ಆತನನ್ನು ಒಂದು ಪಂದ್ಯದಿಂದ ನಿರ್ಬಂಧಿಸಿ, ಪಂದ್ಯದ ಶುಲ್ಕದಲ್ಲಿ ಶೇ.100 ರಷ್ಟು ದಂಡ ವಿಧಿಸಿದೆ. ಟಿವಿ ನೇರಪ್ರಸಾರದಲ್ಲಿ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪ ಮಾಡುತ್ತಿರುವ ಯತ್ನ ದಾಖಲಾಗಿದ್ದು, ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿದೆ.

 

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವ್ ಸ್ಮಿತ್ ಅವರಿಗೆ ತಮ್ಮ ನಾಯಕತ್ವ ತ್ಯಜಿಸುವಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸೂಚಿಸಿದೆ. ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸೀಸ್ ನಾಯಕ ಸ್ಟೀವನ್ ಸ್ಮಿತ್, ” ಈ ಘಟನೆಯಲ್ಲಿ ತಂಡದ ಕೋಚ್​ಗಳ ತಾವುದೇ ಪಾತ್ರವಿಲ್ಲ. ಆಟಗಾರರು ಮಾತ್ರವೇ ಇದರಲ್ಲಿದ್ದಾರೆ. ಬ್ಯಾಂಕ್ರಾಫ್ಟ್ ವರ್ತನೆಗೆ ವಿಷಾದವಿದೆ ಎಂದು ಹೇಳಿದ್ದಾರೆ.

 

ವಿಡಿಯೋ ನೋಡಿ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top