ಮನೋರಂಜನೆ

ಸೋನಂ ಕಪೂರ್ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್:ದೂರದ ಜಿನೇವಾದಲ್ಲಿ ಮದುವೆ.

ಬಾಲಿವುಡ್‌ನ ಬಹುತೇಕ ನಟಿಯರು ಸಿನಿಮಾಗಳಿಗಿಂತಲೂ ಅಫೇರುಗಳ ಮೂಲಕ ಸದ್ದು ಮಾಡೋದೇ ಹೆಚ್ಚು. ಅದೇ ಬಾಲಿವುಡ್‌ನಲ್ಲಿ ಸದ್ಯ ಬಹು ಬೇಡಿಕೆಯಲ್ಲಿರೋ ನಟಿ ಸೋನಮ್ ಕಪೂರ್‌ಳನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ?

 

 

ಹಿಟ್ ಸಿನಿಮಾಗಳ ಮೂಲಕವೇ ಸದ್ದು ಮಾಡುತ್ತಿರೋ ಸೋನಮ್ ಕಪೂರ್ ತನ್ನ ಪ್ರಣಯ ಪ್ರಸಂಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿ ಬಿಡುತ್ತಾ ಸದಾ ಚಾಲ್ತಿಯಲ್ಲಿರುತ್ತಾಳೆ. ಬಾಯ್‌ಫ್ರೆಂಡ್ ಜೊತೆಗಿನ ನಾನಾ ಭಂಗಿಗಳ ಫೋಟೋ ಹಾಕೋ ಮೂಲಕ ಚರ್ಚೆಗೆ ಗ್ರಾಸವಾಗಿರೋ ಸೋನಮ್ ಇದೀಗ ತನ್ನ ಬಾಯ್‌ಫ್ರೆಂಡ್ ಆನಂದ್ ಅಹುಜಾ ಜೊತೆಗಿನ ಮಿರರ್ ಸೆಲ್ಫಿ ಮೂಲಕ ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದ್ದಾಳೆ.

ಈಗ ಕೇಳಿ ಬರುತ್ತಿರುವ ವಿಷಯವೇನೆಂದರೆ ಈ ಜೋಡಿ ಮೇನಲ್ಲಿ ಜಿನೇವಾದಲ್ಲಿ ಮದುವೆಯಾಗಲು ನಿರ್ಧರಿಸಿದೆಯಂತೆ! ಇಷ್ಟು ದಿನ ಆನಂದ್ ಅಹುಜಾ ಜೊತೆ ಹಾಯಾಗಿ ಡೇಟಿಂಗ್ ನಡೆಸುತ್ತಾ ಕಾಲ ಕಳೆಯುತ್ತಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಜಿನೇವಾದಲ್ಲಿ ಮೇ 11 ಮತ್ತು 12ರಂದು ಎರಡು ದಿನಗಳ ಕಾಲ ಮದುವೆ ನಡೆಯಲಿದ್ದು, ಕೇವಲ ಕುಟುಂಬದದ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗುತ್ತಿದೆ.

 

 

ಈ ಮೊದಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮಾಧ್ಯದಮದವರ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ದೂರದ ಇಟಲಿಯಲ್ಲಿ ಮದುವೆಯಾಗಿದ್ದರು. ಈಗ ಸೋನಮ್ ಕೂಡ ಮಾಧ್ಯಮದವರ ಕಾಟವನ್ನು ತಪ್ಪಿಸಿಕೊಳ್ಳಲು ದೂರದ ದೇಶದಲ್ಲಿ ಮದುವೆಯಾಗುತ್ತಿದ್ದಾರೆ.

ಈ ಆನಂದ್ ಅಹುಜಾ ಜೊತೆ ಸೋನಮ್‌ಳ ಪ್ರೇಮ್ ಕಹಾನಿ ಶುರುವಾಗಿ ವರ್ಷಗಳೇ ಕಳೆದಿವೆ. ವಿದೇಶಗಳಲ್ಲಿ ಎಲ್ಲೇ ಶೂಟಿಂಗ್ ನಡೆದರೂ ಅಹುಜ ಹಾಜರಿರುತ್ತಾನಂತೆ. ಅಂದ ಹಾಗೆ ಈ ಜೋಡಿ ಇದೀಗ ಮದುವೆಯಾಗಲೂ ನಿರ್ಧರಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top