ಅರೋಗ್ಯ

ಋತುಚಕ್ರದ ಯಮಯಾತನೆಯ ನೋವಿಗೆ ಸರಳವಾದ ಮನೆಮದ್ದುಗಳು !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಋತುಚಕ್ರದ ನೋವಿಗೆ ಸರಳ ಉಪಾಯಗಳು.

 

 

ನೀರು :

 

ಋತುಚಕ್ರದ ಅವಧಿಯಲ್ಲಿ ಆದಷ್ಟು ಹೆಚ್ಚಾಗಿ ನೀರು ಕುಡಿಯ ಬೇಕು .ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರು ಕುಡಿದರೆ ಕಳೆದುಕೊಂಡಿರುವ ಚೈತನ್ಯವನ್ನು ಪುನಃ ಪಡೆಯಬಹುದು.

 

ಜೀರಿಗೆ :

 

ಒಂದು ಲೋಟ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ ಕೊಂಡು ಕುಡಿಯುವುದರಿಂದ ಮುಟ್ಟಿನ ಸೆಳೆತ, ನೋವು, ಆಯಾಸ ಕಡಿಮೆ ಯಾಗುತ್ತದೆ.ಈ ನೀರನ್ನು ಐದು ನಿಮಿಷಗಳ ಕಾಲ ಕುದಿಸಬೇಕು ತಣ್ಣಗಾದ ಬಳಿಕ ಕುಡಿಯ ಬೇಕು.

 

ಶುಂಠಿ :

 

ಶುಂಠಿ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು .ಕೆಲವು ನಿಮಿಷಗಳ ವರೆಗೆ ಹಾಗೆಯೇ ಕಾಯಿಸಿದ ನಂತರ ಸೋಸಿ ಹಾರಿಸಿ ಕುಡಿಯ ಬೇಕು.ಹಾಗೆಯೇ ಕುಡಿಯಲು ಸಾಧ್ಯವಾಗದಿದ್ದರೆ ಜೇನುತುಪ್ಪ, ಸಕ್ಕರೆ, ಅಥವಾ ಬೆಲ್ಲ ವನ್ನು ಸೇರಿಸಿ ಯೂ ಕುಡಿಯ ಬಹುದು. ಋತುಚಕ್ರ ಅವಧಿಯಲ್ಲಿ ಅತಿಯಾಗಿ ಕಾಡುವ ರಕ್ತಸ್ರಾವ ದ ಸಮಸ್ಯೆಗೂ ಕೂಡ ಇದು ಉತ್ತಮ ಪರಿಹಾರ ನೀಡುತ್ತದೆ.

 

ಪರಂಗಿ ಹಣ್ಣು :

 

ಋತುಚಕ್ರ ಕ್ಕೂ ನಾಲ್ಕು ಐದು ದಿನ ಮುಂಚೆ ಪರಂಗಿ ಹಣ್ಣನ್ನು ಸೇವಿಸುವುದು ಒಳ್ಳೆಯದು.ಪರಂಗಿ ಹಣ್ಣಿನಲ್ಲಿ ಮುಟ್ಟಿನ ನೋವಿನ ವಿರುದ್ಧ ಹೊರಾಡುವ ಕಿಣ್ವ ಪಪಿಯನ್ ಗಳು ಇವೆ.ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿ ವನ್ನು ಸರಾಗವಾಗಿ ಆಗುವಂತೆ ಕೂಡ ಮಾಡುತ್ತದೆ.

 

ಕಾಫಿ :

 

ಕೆಲವರಿಗೆ ಕಾಫಿ ಕುಡಿಯುವುದರಿಂದ ನೋವೂ ಹೆಚ್ಚಾಗಬಹುದು .ಒಂದು ವೇಳೆ ನಿಮಗೆ ಕಾಫಿ ಕಡಿಯುವ ಅಭ್ಯಾಸ ಅತಿಯಾಗಿದ್ದರೆ ಋತುಚಕ್ರ ದ ಅವಧಿಯಲ್ಲಿ ಕಾಫಿ ಕುಡಿಯ ಬಾರದು.

 

ಬಿಸಿ ನೀರಿನ ಸ್ನಾನ :

 

ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ. ಮತ್ತು ದೇಹಕ್ಕೂ ಆರಾಮದಾಯಕವಾಗಿ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top