ಮನೋರಂಜನೆ

ಜೈಲು ಪಾಲಾಗಲಿದ್ದಾನೆ ನಟ ರಣಬೀರ್ ಕಪೂರ್!

ಸತತ ಸೋಲಿನಿಂದ ಕಂಗೆಟ್ಟಿರುವ ಬಿಟೌನ್ ಚಾರ್ಮಿಂಗ್ ಆ್ಯಕ್ಟರ್ ರಣಬೀರ್ ಕಪೂರ್ ಶೀಘ್ರದಲ್ಲೇ ಜೈಲು ಸೇರಲಿದ್ದಾರೆ. ಒಂದೈದಾರು ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಈ ಚಾಕೊಲೇಟ್ ಹೀರೊ ಮಾಡಿದ್ದ ತಪ್ಪಾದರೂ ಏನು ಎಂದು ಯೋಚಿಸ್ತಿದ್ದೀರಾ? ಈ ಪ್ರಶ್ನೆಗೆ ಬಾಲಿವುಡ್ ಕಡೆಯಿಂದ ಸಿಗುವ ಉತ್ತರ… ಡೆಡಿಕೇಷನ್.

 

 

ಹೌದು “ಪಿಕೆ” ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ನಿರ್ದೇಶಿಸುತ್ತಿರುವ ನಟ ಸಂಜಯ್ ದತ್ ಆತ್ಮಕಥಾ ಚಿತ್ರದಲ್ಲಿ ರಣಬೀರ್ ನಾಯಕನಾಗಿ ಸಂಜು ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೆ ಇದೆ. ಈಗಾಗಲೇ ಚಿತ್ರಕ್ಕಾಗಿ ಮೈದಂಡಿಸಿ ಮಸಲ್ ಮ್ಯಾನ್ ಲುಕ್’ನಲ್ಲಿ ಮಿಂಚುತ್ತಿರುವ ರಣಬೀರ್ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಜೈಲು ಸೇರಲಿದ್ದಾರೆ. ಆದರೆ ರಣಬೀರ್ ಕಂಬಿ ಎಣಿಸಲು ತೀರ್ಮಾನಿಸಿರುವುದು ಶೂಟಿಂಗಾಗಿ ಅಲ್ಲ ಎಂಬುದು ಅಚ್ಚರಿ.

 

 

ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಿಯಾಗಿ ನಟ ಸಂಜುಬಾಬ ನಿಜ ಜೀವನದಲ್ಲಿ ಜೈಲೂಟ ಮಾಡಿದ್ದರು. ಈ ರಿಯಲಿಸ್ಟಿಕ್ ಕಹಾನಿಯ ಅನುಭವ ಪಡೆಯಲು ರಣಬೀರ್ ಕಪೂರ್ ಬೋಪಾಲ್ ಜೈಲಿನ ಖೈದಿಗಳೊಂದಿಗೆ ವಾರ ಕಳೆಯಲು ನಿರ್ಧರಿಸಿದ್ದಾರೆ. ಇದರಿಂದಾಗಿ ಪಾತ್ರದಲ್ಲಿ ತಲ್ಲೀನತೆ ಮತ್ತು ನೈಜ್ಯತೆ ಮೂಡಲು ಸಹಾಯಕವಾಗುವುದು ಎಂಬುದು ಈ ಬಾಲಿವುಡ್ ಯಂಗ್ ನಟನ ವಾದ. ಇನ್ನೂ ಹೆಸರಿಡದ ಈ ಸಂಜು ಕಹಾನಿ ಚಿತ್ರದಲ್ಲಿ ಸೋನಮ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಪರೇಶ್ ರಾವಲ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಚಿತ್ರದ ನಿರೂಪಣೆಯನ್ನು ಮಿಸ್ಟರ್ ಫರ್ಫೇಕ್ಸನಿಷ್ಟ್ ಅಮೀರ್ ಖಾನ್ ಮಾಡಲಿದ್ದಾರೆ. ಪಿಕೆ ಚಿತ್ರದ ಮೂಲಕ ಐತಿಹಾಸಿಕ ಕಲೆಕ್ಷನ್ ರೆಕಾರ್ಡ್ ನಿರ್ಮಿಸಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಂಜಯ್ ದತ್ ಜೀವನದ ಏರಿಳಿತದ ಕಥಾ ಚಿತ್ರದ ಮೇಲೆ ಬಿಟೌನಲ್ಲಿ ಬಹುದೊಡ್ಡ ನಿರೀಕ್ಷೆಯಿದೆ.

ಇದೀಗ ಕಳೆದೊಂದು ವರ್ಷದಿಂದ ಚಿತ್ರಕ್ಕಾಗಿ ಸಂಪೂರ್ಣ ಅರ್ಪಿಸಿ ಕೊಂಡಿರುವ ನಟ ರಣಬೀರ್ ಕಪೂರ್’ರ ಡೆಡಿಕೇಷನ್ ಕೂಡ ಚಿತ್ರದ ಮೇಲೆ ಸಿನಿಪ್ರಿಯರ ನಿರೀಕ್ಷೆಯನ್ನು ಇಮ್ಮಡಿಗೊಳಿಸುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top