ಅರೋಗ್ಯ

ರಾಗಿ ತಿನ್ನಿ ಆರೋಗ್ಯವಾಗಿರಿ , ರಾಗಿಲಿರೋ 12 ಅದ್ಬುತ ಆರೋಗ್ಯಕಾರಿ ಗುಣಗಳು ತಿಳ್ಕೊಳ್ಳಿ ..

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

 

 

ಪೋಷಕಾಂಶಗಳ ವಿವರ :

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

 

೧೦೦ ಗ್ರಾಮ್ ರಾಗಿಯಲ್ಲಿನ ಪೋಷಕಾಂಶಗಳ ವಿವರ ಈ‌ ಕೆಳಕಂಡಂತಿದೆ:

ಪೋಷಕಾಂಶ – ಪ್ರತಿಶತ

ಪ್ರೋಟಿನ್ – ೭.೩ ಗ್ರಾಂ

ಕೊಬ್ಬು – ೧.೩ ಗ್ರಾಂ

ಪಿಷ್ಟ – ೭೨ ಗ್ರಾಂ

ಖನಿಜಾಂಶ – ೨.೭ ಗ್ರಾಂ

ಸುಣ್ಣದಂಶ – ೩.೪೪ ಗ್ರಾಂ

ನಾರಿನಂಶ – ೩.೬ ಗ್ರಾಂ

ಶಕ್ತಿ – ೩೨೮ ಕಿ.ಕ್ಯಾ.

 

ನಿಮಗೆ ರಾಗಿಯ ಬಗ್ಗೆ ತಿಳಿದಿದೆಯೇ?

ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ. ಆದರೆ ರಾಗಿ ನಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ.

ಕ್ಯಾಲ್ಸಿಯಂ , ಖನಿಜಾಂಶಗಳು , ಪ್ರೊಟೀನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ

 

1. ದೇಹ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ.

 

2. ಮೂಳೆಗಳಿಗೆ ಉತ್ತಮ:

 

ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವೃದ್ಧರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.

 

3. ಮಧುಮೇಹಿಗಳಿಗೆ ಸೂಕ್ತ:

 

ಆಧುನಿಕ ಜೀವನದಲ್ಲಿ ಒತ್ತಡದಲ್ಲೆ ಬದುಕಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮಧುಮೇಹಿಗಳಿಗೆ ರಾಗಿ ಉತ್ಪನ್ನಗಳು ರಾಮಬಾಣವಿದ್ದಂತೆ. ಮಧುಮೇಹದಿಂದ ನೀವು ಬಳಲುತ್ತಿದ್ದೀರಾ? ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.

 

4. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ: 

 

ರಾಗಿಯಲ್ಲಿರುವ ಅಮೀನೊ ಏಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ನಿಮ್ಮ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ

 

5. ನೀವು ಒಬ್ಬ ಅನೀಮಿಕ್ ಆಗಿದ್ದರೆ:

 

ನೀವು ಅನಿಮೀಯಾದಿಂದ ಬಳಲುತ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್‌ನ ಮೂಲ ರಾಗಿ ಗಿಡವಾಗಿದೆ.

 

6. ನಿಮಗೆ ರಿಲ್ಯಾಕ್ಸ್ ಆಗಲು ಸಹಕಾರಿ:

ರಾಗಿಗಿರುವ ಇನ್ನೊಂದು ಮಹತ್ವದ ಗುಣವೆಂದರೆ ಅದು ನಿಮಗೆ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಒತ್ತಡಪೂರ್ಣ ಜೀವನದಿಂದ ಮುಕ್ತಿ ಸಿಗಲು ನಿಮ್ಮ ಪಥ್ಯದಲ್ಲಿ ಸೇರಿಸಬೇಕಾದ ಒಂದು ಉತ್ತಮ ಸಾಮಾಗ್ರಿ ರಾಗಿ ಮುದ್ದೆಯಾಗಿದೆ.

 

7. ದೇಹವನ್ನು ತಂಪುಗೊಳಿಸುತ್ತದೆ: 

 

ಬೇಸಿಗೆ ಸಮಯದಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.

 

8. ಸದೃಢತೆಗೆ:

ನಿಮ್ಮ ಸಾಮರ್ಥ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು, ರಾಗಿ ಮುದ್ದೆಯನ್ನು ನಿಮ್ಮ ಆಯ್ಕೆಯಾಗಿಸಿಕೊಳ್ಳಿ. ಇದರಲ್ಲಿರುವ ಪ್ರೊಟೀನ್ ವಿಟಮಿನ್‌ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ.

 

9. ಮಲಬದ್ಧತೆಗೆ ಉಪಯೋಗಕಾರಿ:

 

ರಾಗಿ ಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆಗೆ ಸಹಾಯಕಾರಿ. ನೀವು ಸುಲಭವಾದ ಮಲಬದ್ಧತೆಯನ್ನು ಹೊಂದಲು ನಿತ್ಯವೂ ರಾಗಿಮುದ್ದೆ ಸೇವಿಸಿ.

 

10. ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ:

 

ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್‌ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.

 

11. ನೂತನ ತಾಯಂದಿರಿಗೆ:

 

ನೂತನ ತಾಯಂದಿರಿಗೆ, ಹಿಮೋಗ್ಲೋಬೀನ್ ಮಟ್ಟಗಳನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.

 

12. ರಾಗಿ ತಂಪು ಗುಣ ಹೊಂದಿರುವ ಸಾತ್ವಿಕ ಆಹಾರ:

ಮುಖ್ಯವಾಗಿ ಇದು ಪಿತ್ತಹರ. ರಾಗಿಯ ಗಂಜಿಯನ್ನು ನಿತ್ಯವೂ ಸೇವಿಸಿದರೆ ದೇಹ ತಂಪಾಗುತ್ತದೆ. ರಕ್ತವೃದ್ದಿಯಾಗುತ್ತದೆ.

ರಾಗಿ ಅಂಬ್ಲಿಗೆ ಬೇಕಾಗುವ ಸಾಮಗ್ರಿಗಳು:

*4 ಚಮಚ ರಾಗಿ ಹಿಟ್ಟು

*4 ಚಮಚ ಬೆಲ್ಲದ ಪುಡಿ

*ಏಲಕ್ಕಿ ಪುಡಿ 2 ಚಿಟಕಿ

*ಹಾಲು

 

 

ರಾಗಿ ಹಿಟ್ಟನ್ನು ಸಣ್ಣ ಉರಿಯಲ್ಲಿ ಹುರಿದು ಕೊಳ್ಳಿ, ಒಂದು ಪಾತ್ರೆಯಲ್ಲಿ ಎರಡು ಲೋಟ ನೀರಿನಲ್ಲಿ ಹುರಿದ ರಾಗಿ ಹಿಟ್ಟು ಹಾಕಿ ಗಂಟಿಲ್ಲದ ಹಾಗೆ ಕಲಸಿ ನಂತರ ಸಣ್ಣ ಉರಿಯಲ್ಲಿ ಅಂಬಲಿಯನ್ನು ಹದಕ್ಕೆ ಕುದುಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೆಳಗಿಳಿಸಿ, ನಂತರ ಹಾರಲು ಬಿಡಿ ನಂತರ ತಿಳಿಯಾದ ಮಜ್ಜಿಗೆ, ಜೀರಿಗೆ, ಪುಡಿ, ಸಣ್ಣಗೆ ಹಚ್ಚಿದ ಕೊತ್ತಂಬರಿ, ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ ಕುಡಿದರೆ ಬೇಸಿಗೆಯಲ್ಲಿ ತಂಪಾದ ಅನುಭವ ಬರುತ್ತದೆ. ಈ ರಾಗಿ ಅಂಬಲಿಯನ್ನು ಮಣ್ಣಿನ ಪಾತ್ರೆಯಲ್ಲಿ ಬಳಸಿದರೆ ಬಹಳ ರುಚಿಯಾಗಿ ಮತ್ತು ತಂಪಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top