ಧರ್ಮ

ಮಾರ್ಚ್ 25 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೨೫ ಮಾರ್ಚ್ ೨೦೧೮
ಸೂರ್ಯೋದಯ : ೦೬:೨೪
ಸೂರ್ಯಾಸ್ತ : ೧೮:೨೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಚೈತ್ರ
ಪಕ್ಷ : ಶುಕ್ಲ ಪಕ್ಷ
ತಿಥಿ : ಅಷ್ಟಮೀ
ಬಿಟ್ಟುಹೋದ ತಿಥಿ : ನವಮೀ
ನಕ್ಷತ್ರ : ಆರಿದ್ರ
ಯೋಗ : ಶೋಭಾನ
ಪ್ರಥಮ ಕರಣ : ಬವ
ಸೂರ್ಯ ರಾಶಿ : ಮೀನ
ಅಭಿಜಿತ್ ಮುಹುರ್ತ : ೧೨:೦೧ – ೧೨:೪೯
ರಾಹು ಕಾಲ: ೧೬:೫೬ – ೧೮:೨೭
ಗುಳಿಕ ಕಾಲ: ೧೫:೨೬ – ೧೬:೫೬
ಯಮಗಂಡ: ೧೨:೨೫ – ೧೩:೫೬

ಮೇಷ (Mesha)

 

ನಿಮ್ಮ ಆದಾಯವು ಉತ್ತಮ ಹರಿವು ಕಾಣುತ್ತದೆ. ಯಾವುದೇ ಈಡೇರದ ಪ್ರಯಾಣ ಈ ಅವಧಿಯಲ್ಲಿ ನಡೆಯಬಹುದಾಗಿದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ , ಹಿರಿಯರು ನಿಮ್ಮನ್ನು ಮೆಚ್ಚುತ್ತಾರೆ. ನೀವು ಪುಣ್ಯದ ಕೆಲಸಗಳಲ್ಲಿ ತೊಡಗುತ್ತೀರಿ.

 

ವೃಷಭ (Vrushabha)

 

ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಮ್ಮ ತಂದೀತು. ಆರ್ಥಿಕ ವಿಚಾರದಲ್ಲಿ ಯಾರನ್ನೂ ನಂಬದಿರಿ.

ಮಿಥುನ (Mithuna)

ಜೀವನದಲ್ಲಿ ಉತ್ಸಾಹ ಹೆಚ್ಚುತ್ತದೆ. ಇದರಿಂದಾಗಿ ನಿಮ್ಮೊಳಗಿನ ಉತ್ತಮ ಕ್ರಿಯಾಶೀಲತೆಯನ್ನು ದುಡಿಸಿಕೊಳ್ಳಿ. ಬೇರೆಯವರ ಕಷ್ಟಸುಖಗಳಿಗೆ ಸ್ಪಂದಿಸುವ ನಿಮ್ಮ ಗುಣ ಮೆಚ್ಚುಗೆಗೆ ಪಾತ್ರವಾಗುವುದು.

ಕರ್ಕ (Karka)

ನಿಮ್ಮ ಬಾಳಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ, ನಿಮ್ಮ ನಿರ್ಧಾರಗಳು ಅಡಿಪಾಯ ಹಾಕುತ್ತವೆ, ನಿಮ್ಮ ಮೂಲ ಗಮನವು ಶ್ರೀಮಂತಿಕೆಯನ್ನು ಹೆಚ್ಚಿಸುವುದಾಗಿರುತ್ತದೆ.

ಸಿಂಹ (Simha)

ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ನೀವು ವೈಯಕ್ತಿಕ ಜೀವನವನ್ನು ಖುಷಿಪಡುತ್ತೀರಿ. ಸ್ವಜನರೊಂದಿಗೆ ವಾದ, ವಿವಾದಗಳ ಬಗ್ಗೆ ದೂರವಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಿದೆ.

 

ಕನ್ಯಾರಾಶಿ (Kanya)

ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಾರದು. ಹಾಗೆ ದೇವತಾಕಾರ್ಯಗಳಿಂದ ನೆಮ್ಮದಿ ತೃಪ್ತಿ ಸಿಕ್ಕೀತು.  ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನಿವೇಶನ ಲಾಭಕ್ಕೆ ಸದ್ಯದಲ್ಲೇ ಸಾಧ್ಯತೆ ತೋರಿ ಬರುತ್ತದೆ.

 

ತುಲಾ (Tula)

ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ.

 

ವೃಶ್ಚಿಕ (Vrushchika)

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.

 

ಧನು ರಾಶಿ (Dhanu)

ದೈವಬಲವು ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಪ್ರಭಾವ ಬೀರುತ್ತದೆ. ಹಾಗಾಗಿ ಕಠಿಣ ಕಾರ್ಯವೂ ಸುಲಲಿತವಾಗಿ ನೆರವೇರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮೊಳಗಿನ ಉತ್ತಮ ಕ್ರಿಯಾಶೀಲತೆಯನ್ನು ದುಡಿಸಿಕೊಳ್ಳಿ. ಬೇರೆಯವರ ಕಷ್ಟಸುಖಗಳಿಗೆ ಸ್ಪಂದಿಸುವ ನಿಮ್ಮ ಗುಣ ಮೆಚ್ಚುಗೆಗೆ ಪಾತ್ರವಾಗುವುದು.

 

ಮಕರ (Makara)

ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.ದುರ್ಗಾಮಾತೆಯನ್ನು ಮನಸಾ ಭಜಿಸಿ

 

ಕುಂಭರಾಶಿ (Kumbha)

ನಿಮ್ಮ ಮಾತುಗಳು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ.

 

ಮೀನರಾಶಿ (Meena)

ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿರುವಿರಿ. ನಿಮ್ಮ ಈದಿನದ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಗೆಳೆಯನೊಬ್ಬನ ಸಹಾಯವು ಇಂದು ನಿಮಗೆ ದೊರೆಯಲಿರುವುದು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top