ದೇವರು

ರಾಮ ಎನ್ನುವ ಎರಡಕ್ಷರದ ಪದವು ಶ್ರೀ ರಾಮ ಹೇಗಾಯಿತು , ‘ಮರಾ’ ಪದದಿಂದ ‘ರಾಮ’ ಎಂಬ ಪದ ಹೇಗೆ ಬಂತು , ಯಾರು ಹೇಳಿಕೊಟ್ಟರು,ರಾಮ ಎಂಬ ಪದದ ಸಂಪೂರ್ಣ ಅರ್ಥ ತಿಳ್ಕೊಳ್ಳಿ

ರಾಮ ಎನ್ನುವ ಎರಡಕ್ಷರದ ಪದವು ಶ್ರೀ ರಾಮ ಹೇಗಾಯಿತು ? ‘ಮರಾ’ ಪದದಿಂದ ‘ರಾಮ’ ಎಂಬ ಪದ ಹೇಗೆ ಬಂತು ? ಯಾರು ಹೇಳಿಕೊಟ್ಟರು ?.ರಾಮ ಎಂಬ ಪದದ ಸಂಪೂರ್ಣ ಅರ್ಥವನ್ನು ತಿಳಿದುಕೊಳ್ಳಿ

 

ತ್ರೇತಾಯುಗದಲ್ಲಿ ದಶರಥ ಮಹಾರಾಜನಿಗೆ ಕುಮಾರನಾಗಿ ರಾಮನು ಜನಿಸಿದ್ದಾನೆ. ಆ ದಿನ ಗ್ರಹಚಾರವನ್ನು ಅನುಸರಿಸಿಯೇ, ಮಹರ್ಷಿಗಳ ಮಾತನ್ನು ಅನುಸರಿಸಿ “ರಾಮ” ಎನ್ನುವ ಎರಡು ಅಕ್ಷರಗಳ ಹೆಸರು ದಶರಥನ ಪುತ್ರನಿಗೆ ಇಟ್ಟಿದ್ದಾರೆ. ಆ ಹೆಸರಿಗೆ ಮುಂದೆ ಗೌರವಾರ್ಥವಾಗಿ, ಶುಭಪ್ರದವಾಗಿ “ಶ್ರೀ” ಎಂಬ ಅಕ್ಷರವನ್ನು ಸೇರಿಸಿ “ಶ್ರೀರಾಮ” ಎಂದು ಕೆಲವರು ಹೇಳಿದ್ದಾರೆ.

 

ಶ್ರೀ ಎನ್ನುವುದು ಮಧ್ಯದಲ್ಲಿ ಗೌರವಕ್ಕೆ ಸೇರಿಸುವುದೇ ಹೊರತು ಮೂಲ ಹೆಸರಿನಲ್ಲಿ ಇಲ್ಲವೆಂದು, ರಾಮ ಎನ್ನುವ ಎರಡು ಅಕ್ಷರಗಳ ಹೆಸರೇ ನಿಜವಾದ  ಹೆಸರೆಂದು ತಿಳಿಯಬೇಕಾಗಿದೆ. ಶ್ರೀರಾಮ ಎನ್ನುವ ಎರಡು ಅಕ್ಷರಗಳ ಹೆಸರು ಬಹಳ ದೊಡ್ಡ ಅರ್ಥ ಹೊಂದಿರುವುದಾಗಿದೆ. ಆದ್ದರಿಂದ ಕೆಲವರು ಜ್ಞಾನವನ್ನು ತಿಳಿದ ಹಿರಿಯರು ರಾಮ ಎನ್ನುವ ಪದವನ್ನು ಆಗ್ಗಾಗ್ಗೆ ನುಡಿಯಿರಿ ಎಂದು ಹೇಳುತ್ತಿದ್ದರು. ಹಿರಿಯರು ಹೇಳಿರುವುದರಿಂದ ಕೆಲವರು ಕುಳಿತುಕೊಂಡಾಗ, ಎದ್ದಾಗ ರಾಮ ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದರು .

ಹಿಂದಿನ ಕಾಲದಲ್ಲಿ ರಾಮ ಶಬ್ದವನ್ನು ಬಹಳ ಜನರು ಹೇಳುತ್ತಿದ್ದರು. ಈಗಿನ ಕಾಲದಲ್ಲಿ ಓದುಗರು ಹೆಚ್ಚಾಗಿ ವಿಜ್ಞಾನ ಬೆಳೆದಂತೆಲ್ಲ, ಹಿಂದಿನ ಕಾಲದಲ್ಲಿ ರಾಮ ಎನ್ನುವಂತೆ ಈಗ ಯಾರೂ ಹೇಳುತ್ತಿಲ್ಲ. ಇದರಲ್ಲಿ ವಿಶೇಷವೇನೆಂದರೆ ಹಿಂದಿನ ಕಾಲದ ಪದ್ಧತಿಯ ಪ್ರಕಾರ ಯಾರಾದರೂ ರಾಮ ಎನ್ನುವವರು ಇದ್ದಾರೋ, ಅವರು ರಾಮ ಎಂದು ಎರಡಕ್ಷರಗಳನ್ನು ನುಡಿಯುತ್ತಿದ್ದಾರೆ. ಆದರೆ ಶ್ರೀರಾಮ ಎಂದು ಮೂರು ಅಕ್ಷರಗಳ ಪದವನ್ನೂ ಹೇಳುವುದಿಲ್ಲ.

ಉತ್ತರ ಭಾರತ ದೇಶಗಳಲ್ಲಿ ಬಹಳ ಜನ ಈಗಿನ ಕಾಲದಲ್ಲಿಯೂ ಸಹ

 

 

ಪರಿಚಯ ಇರುವವರು ಎಲ್ಲಿಯಾದರೂ ಎದುರಾದರೆ ರಾಮ ರಾಮ ಎಂದು ಕರೆದು ಕೊಳ್ಳುವುದನ್ನು ನೋಡಬಹುದು. ಎದುರಿಗೆ ಬರುವ ವ್ಯಕ್ತಿಗೆ ಗೌರವವಾಗಿ ನಮಸ್ತೇ ಎಂದು ಹೇಳುವುದಕ್ಕೆ ಬದಲಾಗಿ ರಾಮರಾಮ ಎನ್ನುತ್ತಾರೆ. ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿನ ಪ್ರಜೆಗಳಲ್ಲಿ ರಾಮರಾಮ ಎನ್ನುವ ಅಭ್ಯಾಸ ಪೂರ್ತಿಯಾಗಿ ಕಾಣಿಸುತ್ತದೆ .ಹಿಂದಿನ ಕಾಲದಲ್ಲಿ ಅಂತಹ ಒಳ್ಳೆಯ ಪದ್ಧತಿಯನ್ನು ನಮ್ಮ ಹಿರಿಯರು ನಮಗೆ ಅಭ್ಯಾಸ ಮಾಡಿಸಿದ್ದಾರೆ. ರಾಮ ಎನ್ನುವ ಪದದಲ್ಲಿನ ವಿಶಿಷ್ಟತೆ ಅಂತಹದ್ದು. ಕಬೀರ್ ದಾಸ್ ಮೊದಲಾದ ಜ್ಞಾನಿಗಳು ಸಹ ರಾಮ ಶಬ್ದವನ್ನು ಬಿಡದೇ ಸ್ಮರಿಸುತ್ತಿದ್ದರು.

ಈಗಿನ ಕಾಲದಲ್ಲಿ ಕೆಲವರು ಹೇತುವಾದಿಗಳು ರಾಮನಲ್ಲಿ ಏನು ದೊಡ್ಡತನ ಇದೆ. ಎಂದು ಪ್ರಶ್ನಿಸುತ್ತಿದ್ದಾರೆ ? ರಾಮನು ದಶರಥ ಪುತ್ರನಾಗಿ ಜನಿಸಿ, ಅಸ್ತಿತ ಗಾದೆಗಳಲ್ಲಿ ಅರಣ್ಯಕ್ಕೆ ಹೋಗಿ ಅನೇಕ ಕಷ್ಟಗಳನ್ನು ಪಟ್ಟಿದ್ದಾನೆ. ಸೀತೆಯನ್ನು ಕಳೆದುಕೊಂಡು ಸುಳಿವು ತಿಳಿಯದೆ ಕೆಲವು ಸಂದರ್ಭಗಳಲ್ಲಿ ರೋದಿಸಿದ್ದಾನೆ. ಸಾಮಾಜಿಕ ನ್ಯಾಯವನ್ನು ಸಹ ಆಚರಿಸದೆ ಹೆಂಡತಿಯನ್ನು ಅದು ಗರ್ಭಿಣಿ ಸ್ತ್ರೀಯನ್ನು ಅರಣ್ಯಕ್ಕೆ ಕಳುಹಿಸಿದನು. ತಂದೆ ಎಂದು ತಿಳಿಯದ ಮೊದಲು ರಾಮನನ್ನು ಸ್ವಂತ ಮಕ್ಕಳೇ ನಿಂದಿಸಿದ್ದಾರೆ.

 

 

ಪತಿಯಾದ ರಾಮನು ಪುನಃ ಸೀತೆಯನ್ನು ಮನೆಗೆ ಕರೆದರೆ ಪತ್ನಿ ನಿರಾಕರಿಸಿದ್ದಾಳೆ. ಆತನ ಸ್ವಂತ ಜೀವನದಲ್ಲಿ ಆದೆಷ್ಟೋ ಕಷ್ಟಗಳನ್ನು ಎದುರಿಸಿದ ರಾಮನು ಯಾವುದರಲ್ಲಿ ಉತ್ತಮನು ? ಆತನಿಗೆ ಇಲ್ಲದ ವಿಶಿಷ್ಟತೆ ಆತನ ಹೆಸರಿಗೆ ಹೇಗೆ ಬಂದಿದೆ ? ಎಂದು ಕೆಲವರು ಹೇತುವಾದಿಗಳು ಪ್ರಶ್ನಿಸುತ್ತಿದ್ದಾರೆ ? ಜೀವನದಲ್ಲಿ ಒಂದು ವರ್ಷವೂ ಸಹ ಒಟ್ಟಾಗಿ ಸಂಸಾರ ಮಾಡದವರು ಆದರ್ಶ ದಂಪತಿಗಳೇ ? ಶೀಲಾವತಿಯಾದ ಪತ್ನಿಯನ್ನು ಅನುಮಾನಿಸಿ ಅರಣ್ಯಕ್ಕೆ ಕಳಿಸಿದವನು ಶ್ರೇಷ್ಠನೇ ? ಆತನು ದೇವರೇ ಅಲ್ಲ, ಎನ್ನುವ ನಾಸ್ತಿಕರೂ ಸಹ ಇದ್ದಾರೆ.  ಅಷ್ಟೇ ಅಲ್ಲದೆ ಆ ರಾಮನಿಗಿಂತ ನಮ್ಮ ರಾವಣನೇ ದೊಡ್ಡವನು. ಎನ್ನುವ ದಕ್ಷಿಣ ದೇಶದ ದ್ರಾವಿಡರು ಸಹ ಇದ್ದಾರೆ. ಇಂಥವರಿಗೆಲ್ಲಾ ನಾವು ಉತ್ತರ ಹೇಳಲು ಆಗುವುದಿಲ್ಲ. ಏಕೆಂದರೆ ಹೇಳಿದರೂ ಸಹ ಪೂರ್ತಿ ಕೇಳದೆ ಅವರು ಅಡ್ಡಮಾತು ಮಾತನಾಡುವವರಿಗೆ ಯಾರೂ ಉತ್ತರ ಹೇಳಲಾರರು.

ಪ್ರತಿ ಮನುಷ್ಯನಲ್ಲೂ ಮತ್ತೊಬ್ಬರನ್ನು ಕುರಿತು ಹೇಳುವುದರಲ್ಲಿ ಮೂರು ಭಾವಗಳು ಇರುತ್ತವೆ. ಈ ಮೂರನ್ನು ಪ್ರಪಂಚ ಭಾವನೆಗಳನ್ನುತ್ತೇವೆ. ಇವುಗಳಲ್ಲಿ ಒಂದು ತಟಸ್ಥ ಭಾವನೆ, ಎರಡು ವಿಮರ್ಶೆ ಭಾವನೆ, ಮೂರು ವಿಶ್ವಾಸ ಭಾವನೆ. ಈ ಮೂರು ಭಾವಗಳ ಪ್ರಕಾರ ಯಾವ ಮನುಷ್ಯನಾದರೂ ಮತ್ತೊಬ್ಬ ಮನುಷ್ಯನನ್ನು ಲೆಕ್ಕಿಸುತ್ತಿರುತ್ತಾನೆ. ಹಾಗೆಯೇ ರಾಮನನ್ನಾಗಲಿ, ಕೃಷ್ಣನನ್ನಾಗಲಿ ವಿಮರ್ಶಿಸುವವರು ಇದ್ದಾರೆ. ವಿಶ್ವಾಸಿಸುವವರು ಇದ್ದಾರೆ. ಮತ್ತೆ ಕೆಲವರು ವಿಮರ್ಶಿಸುವುದಾಗಲಿ, ವಿಶ್ವಾಶಿಸುವುದಾಗಲಿ ಏನು ಮಾಡದೆ , ಏನೂ ಮಾತನಾಡದೆ ತಟಸ್ಥವಾಗಿರುವವರು ಇದ್ದಾರೆ.

ಯಾರ ಭಾವನೆ ಅವರಿಗೆ ಇಷ್ಟವಾಗಬಹುದು ? ಇಷ್ಟವಿಲ್ಲದಿರಬಹುದು ? ಆದರೆ ಆಧ್ಯಾತ್ಮಿಕ ಭಾವನೆಯಲ್ಲಿ ವಿಮರ್ಶೆಯಾಗಲಿ ವಿಶ್ವಾಸಗಳೇ ಆಗಲಿ ತಟಸ್ಥವಾಗಿ ಇರುವುದಿಲ್ಲ. ಆಧ್ಯಾತ್ಮಿಕ ಭಾವ ಎಲ್ಲರಿಗೂ ಸಮಾನವಾಗಿ ಇರುತ್ತದೆ. ಈ ಭಾವನೆ ಎಲ್ಲರಿಗೂ ಸಂಬಂಧಿಸಿರುವುದಾಗಿ, ಎಲ್ಲರಲ್ಲಿ ಸಮಾನವಾಗಿರುವುದರಿಂದ, ಶ್ರದ್ಧೆ ಇರುವವರಿಗೆ ಅರ್ಥವಾಗುತ್ತದೆ. ಶ್ರದ್ಧೆ ಇಲ್ಲದವರಿಗೆ ಅರ್ಥವಾಗುವುದಿಲ್ಲ. ಈಗ ನಾವು ಹೇಳುವ ಆಧ್ಯಾತ್ಮಿಕ ಭಾವವನ್ನು ಶ್ರದ್ಧೆಯಿಂದ ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆಂಬ ಉದ್ದೇಶದಿಂದ ತಿಳಿಸುತ್ತಿದ್ದೇವೆ ಶ್ರದ್ಧೆಯಿಂದ ತಿಳಿದುಕೊಳ್ಳಿ

 

 

ದಶರಥ ಪುತ್ರನಾದ ಶ್ರೀರಾಮನ ಬಗ್ಗೆ ವಿಶ್ವಾಸ ಇರುವ ರಾಮನ ಭಕ್ತರಿಗೆ, ವಿಶ್ವಾಸವಿಲ್ಲದ ನಾಸ್ತಿಕ ಹೇತು ವಾದಿಗಳಿಗೆ ತಿಳಿಯದ ರಹಸ್ಯವೊಂದು ಇದೆ. ಅದೇನೆಂದರೆ ತ್ರೇತಾಯುಗದಲ್ಲಿ ದಶರಥ ರಾಮನಿಗಿಂತ ಮೊದಲು ಕೃತಯುಗದಲ್ಲಿ “ರಾಮ” ಎನ್ನುವ ಎರಡು ಅಕ್ಷರಗಳ ಪದ ಇದೆ. ಶ್ರೀ ರಾಮನಿಗಿಂತ ಮೊದಲೇ ರಾಮ ಎನ್ನುವ ಹೆಸರಿರುವುದು ಆಶ್ಚರ್ಯವೇ ಅಲ್ಲವೇ ? ಈಗ ಆ ಆಶ್ಚರ್ಯಕರವಾದ ವಿಷಯವನ್ನು ಕುರಿತು ತಿಳಿದುಕೊಳ್ಳೋಣ.

ರಾಮ ಎಂಬ ಎರಡಕ್ಷರದ  ಪದದ ಅರ್ಥ

“ರಾಮ” ಎನ್ನುವ ಎರಡು ಆಕ್ಷರಗಳ ಶಬ್ದವನ್ನು ಪ್ರಜೆಗಳಿಗೆ ಕೃತಯುಗದಲ್ಲಿ ಜ್ಞಾನಿಗಳೇ ಪರಿಚಯ ಮಾಡಿದ್ದಾರೆ. ರಾಮನು ಹುಟ್ಟಿದ ಆ ಕಾಲದಲ್ಲಿ ರಾಮ ಎನ್ನುವ ಎರಡು ಅಕ್ಷರಗಳಿಗೆ ಆಧ್ಯಾತ್ಮಿಕವಾಗಿ ವಿಶೇಷವಾದ ಅರ್ಥ ಇರುತ್ತಿತ್ತು. “ರ” ಎನ್ನುವುದರ ಅರ್ಥ ನಾಶ ಎಂದು ಮೊದಲೇ ತಿಳಿದುಕೊಂಡಿದ್ದೇವೆ. “ರ” ಎಂದರೂ “ರಾ” ಎಂದರು ಎರಡೂ ಒಂದೇ ಅರ್ಥ ಕೊಡುತ್ತವೆ.  “ಮ” ಎಂದರೆ ನಾನು ಇಲ್ಲವೇ ನಾ ಎಂಬ ಅರ್ಥ ಇರುವುದೆಂದು ಮಮ ಎಂದರೆ ನನ್ನೊಂದರ  ಎಂದು “ಸುಭೋಧ” ಗ್ರಂಥದಲ್ಲಿ “ಮಾಮ” ನನ್ನು ಕುರಿತು ಹೇಳಿಕೊಂಡಾಗ ತಿಳಿದುಕೊಂಡಿದ್ದೇವೆ. ಆ ಪ್ರಕಾರ ನೋಡಿದರೆ ರಾಮ ಎನ್ನುವ ಮಾತಿನಲ್ಲಿ ನಾ ಎನ್ನುವುದು ನಾಶ ಆಗಬೇಕೆಂದು ಅರ್ಥ ಇದೆ. ನಾನು ಎನ್ನುವವನಾದ ಜೀವಿಯೂ ನಾಶವಾಗಿ ಹೋಗಬೇಕೆಂಬ ಅರ್ಥವು ಆ ಎರಡಕ್ಷರಗಳ ಶಬ್ದದಲ್ಲಿ ಜೀವಿಯು ನಾಶವಾದರೆ ದೇವರಾಗಿ ಬದಲಾಗಿ ಹೋಗುತ್ತಾನೆ. ಅಂದರೆ ದೇವರಲ್ಲಿ ಬೆರೆತು ಹೋಗುತ್ತಾನೆ. ಅಂದರೆ ಒಬ್ಬ ಜೀವಿಯೂ  ಜನ್ಮರಾಹಿತ್ಯವನ್ನು ಕೋರಿಕೊಳ್ಳುತ್ತಾ ದೇವರಲ್ಲಿ ಐಕ್ಯವಾಗುವ ಅರ್ಥ “ರಾಮ” ಎಂಬ ಶಬ್ದದಲ್ಲಿ ಅಡಕವಾಗಿದೆ.

 

ನಾರದ ಮಹರ್ಷಿಗಳು ವಾಲ್ಮೀಕಿಗೆ ರಾಮ ಜನಿಸುವುದಕ್ಕೂ  ಮೊದಲೇ ಮರಾ ಎಂಬ ಶಬ್ದವನ್ನು ಹೇಳಿಕೊಟ್ಟಿದ್ದರು.

“ರಾಮ” ಎಂದರು ಅದೇ ಪದವನ್ನು ತಿರುಗಿಸಿ “ಮರಾ” ಎಂದರು ಅರ್ಥ ಮಾತ್ರ ಒಂದೇ. ಆದ್ದರಿಂದ ನಾರದ ಮಹರ್ಷಿಗಳು ವಾಲ್ಮೀಕಿಗೆ ಮೊದಲು “ಮರಾ” ಎಂಬ ಶಬ್ದವನ್ನೇ ಮಂತ್ರವಾಗಿ ಬೋಧಿಸಿದ್ದಾನಂತೆ. ವಾಲ್ಮೀಕಿಗೆ ನಾರದರು ದಶರಥ ರಾಮನು ಹುಟ್ಟುವುದಕ್ಕಿಂತ ಮೊದಲೇ “ಮರಾ” ಎಂಬ ಶಬ್ದವನ್ನು ಮಂತ್ರವಾಗಿ ಉಪದೇಶಿಸಿದ್ದಾರೆ. ಅದೇ “ಮರಾ” ಶಬ್ದವನ್ನೇ ಉಚ್ಚರಿಸುತ್ತಾ ವಾಲ್ಮೀಕಿ ಎಷ್ಟೋ ವರ್ಷಗಳು ಘೋರ ತಪಸ್ಸು ಮಾಡಿದ್ದಾನೆ.ಮರ ಶಬ್ದವನ್ನು ಉಚ್ಚರಿಸುತ್ತಾ ಎಷ್ಟೋ ವರ್ಷಗಳಾಗಿರುವುದರಿಂದ ಆತನು ಕುಳಿತುಕೊಂಡ ಸ್ಥಳದಲ್ಲೇ ಹುತ್ತ ಬೆಳೆದು ಹೋಗಿದೆ. ಹುತ್ತವನ್ನು “ವಾಲ್ಮೀಕ” ಎನ್ನುತ್ತಾರೆ.

ಬಹಳ ಕಾಲದ ನಂತರ ಹುತ್ತದಿಂದ ಹೊರಗೆ ಬಂದವನಾದ್ದರಿಂದ ಆತನನ್ನು ವಾಲ್ಮೀಕಿ ಎಂದಿದ್ದಾರೆ. ವಾಲ್ಮೀಕಿಯನ್ನು ಆದಿ ಕವಿ ಎಂದರೆ ಆತನು ಎಷ್ಟು ಮೊದಲಿನವನು ಎಂದು ನೀವೇ ಯೋಚಿಸಿ. ರಾಮ ಎಂಬ ಪದವೊಂದರ ಅರ್ಥ ತಿಳಿದ ವಾಲ್ಮೀಕಿ ಆ ಹೆಸರಿರುವ ರಾಮನ ಚರಿತ್ರೆಯಾದ ರಾಮಾಯಣವನ್ನು ಬರೆಯಲ್ಪಟ್ಟಿದ್ದಾನೆ. ರಾಮಾಯಣಕ್ಕಿಂತ ಮೊದಲೇ ಕೆಲವು ಚರಿತ್ರೆಗಳನ್ನು ಕವಿಗಳು ಬರೆದಿರುವುದು ಇದೆ. ಅಂದರೆ ವಾಲ್ಮೀಕಿ ಆದಿಕವಿ ಆದ್ದರಿಂದ ಆತನು ರಾಮನಿಗಿಂತ ಬಹಳ ಹಿಂದಿನ ಕಾಲದವನೆಂದು ಸುಲಭವಾಗಿ ಅರ್ಥವಾಗುತ್ತದೆ. ಸಾವಿರ ವರ್ಷಗಳು ಬದುಕಿದ್ದ ವಾಲ್ಮೀಕಿ ವೃದ್ಧಾಪ್ಯದಲ್ಲಿ ರಾಮನ ಚರಿತ್ರೆಯನ್ನು ರಾಮಾಯಣವಾಗಿ ಬರೆದಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top