ಭವಿಷ್ಯ

ನಿದ್ರೆ ಮಾಡುವಾಗ ಬೀಳುವ ಕನಸುಗಳು ಎಷ್ಟು ದಿನದೊಳಗೆ ನನಸಾಗುತ್ತೆ ಇವುಗಳ ಬಗ್ಗೆ ನಿಮಗೆಷ್ಟು ಗೊತ್ತು, ಇದರ ಬಗ್ಗೆ ಶಾಸ್ತ್ರಗಳು ಏನನ್ನುತ್ತವೆ

ನಾವು ನಿದ್ರೆ ಮಾಡುವಾಗ ಬೀಳುವ ಕನಸುಗಳು ಎಷ್ಟು ದಿನದೊಳಗೆ ನನಸಾಗುತ್ತವೆ ಎಂದು ನಿಮಗೆ ಗೊತ್ತಾ ? ಇವುಗಳ ಬಗ್ಗೆ ನಿಮಗೆಷ್ಟು ಗೊತ್ತು ? ನಿಮಗೆ ಏನು ಗೊತ್ತಿಲ್ಲವೇ ? ಹಾಗಾದರೆ ಯೋಚನೆ ಮಾಡಬೇಡಿ . ಇಲ್ಲಿದೆ ಬನ್ನಿ ಅದರ ಬಗ್ಗೆ ಸಂಪೂರ್ಣ ವಿವರ

 

 

ಶಾಸ್ತ್ರದಲ್ಲಿ ಸ್ವಪ್ನಗಳನ್ನು ಎರಡು ರೀತಿಯಲ್ಲಿ ವಿಗಂಡಿಸಲಾಗಿದೆ. ಒಂದು ಶುಭ ಸೂಚಕ ಇನ್ನೊಂದು ಅಶುಭ ಸೂಚಕ. ಇವು ಎರಡನ್ನು ಹೇಗೆ ಕಂಡು ಹಿಡಿಯುವುದು ?ಇವು ಎಷ್ಟು ದಿನಗಳಲ್ಲಿ ಫಲಿಸುತ್ತವೆ ?ಮತ್ತು ಹೇಗೆ ಫಲಿಸುತ್ತವೆ ಎಂಬುದನ್ನು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಮುಖ್ಯವಾಗಿ ರಾತ್ರಿಯನ್ನು 4 ಯಾಮಗಳಲ್ಲಿ ಅಂದರೆ ಭಾಗಗಳಾಗಿ  ವಿಂಗಡಿಸಲಾಗಿದೆ.4 ಯಾಮಗಳು ಅಂದರೆ ಒಟ್ಟು ಒಂದು ದಿನವನ್ನು 8 ಯಾಮಗಳಾಗಿ ವಿಂಗಡಿಸಲಾಗಿದೆ. ಆ 8 ಯಾಮಗಳಲ್ಲಿ ಹಗಲು ನಾಲ್ಕು ಯಾಮಗಳು, ರಾತ್ರಿ ನಾಲ್ಕು ಯಾಮಗಳು.

ಮೊದಲ ಯಾಮದಲ್ಲಿ ಸ್ವಪ್ನ ಬಂದರೆ ಒಂದು ವರ್ಷದಲ್ಲಿ ನಮಗೆ ಈಡೇರುತ್ತದೆ.

ಎರಡನೇ ಯಾಮದಲ್ಲಿ ಸ್ವಪ್ನ ಬಂದರೆ 8 ತಿಂಗಳೊಳಗೆ ಈಡೇರುತ್ತದೆ.

ಮೂರನೇ ಯಾಮದಲ್ಲಿ ಸ್ವಪ್ನ ಬಂದರೆ 3 ತಿಂಗಳುಗಳ ಒಳಗಾಗಿ ಈಡೇರುತ್ತದೆ.

ನಾಲ್ಕನೇ ಯಾಮದಲ್ಲಿ ಬರುವ ಸ್ವಪ್ನಗಳು ಕೇವಲ 8 ರಿಂದ 10 ದಿನಗಳಲ್ಲಿ ಈಡೇರುತ್ತದೆ.

ಸೂರ್ಯೋದಯದ ಸಮಯದಲ್ಲಿ ಏನಾದರೂ ಸ್ವಪ್ನ ಬಂದರೆ  ಆ ದಿನವೇ ನೆರವೇರುತ್ತದೆ ಅಥವಾ ಹಿಂದೆ ಮುಂದೆ ಒಂದೆರಡು ಮೂರು ದಿನಗಳ ಒಳಗಾಗಿ ಸ್ವಪ್ನ ಈಡೇರುತ್ತದೆ.

 

 

ಈ ಯಾಮ ಅಂದರೆ ಏನು ?

ಅದು ಎಷ್ಟರಿಂದ ಎಷ್ಟು ಗಂಟೆಗಳವರೆಗೆ ಇರುತ್ತದೆ ? ಯಾಮ ಅಂದರೆ ಹೇಗೆ ? ಏನೂ ? ಎಷ್ಟು ಗಂಟೆಗಳು ? ಎಂದು ತಿಳಿದುಕೊಳ್ಳೋಣ ಬನ್ನಿ

ಹಗಲು 4 ಯಾಮಗಳು ಅಂದರೆ ಮುಂಜಾನೆ ಸೂರ್ಯೋದಯದ ಸಮಯದಿಂದ ಹಿಡಿದು ಸೂರ್ಯಾಸ್ತದವರೆಗೆ .ರಾತ್ರಿಯ ಯಾಮಗಳು ಅಂದರೆ ಸೂರ್ಯಾಸ್ತದ ನಂತರದಿಂದ ಹಿಡಿದು ಸೂರ್ಯೋದಯದವರೆಗೆ . ರಾತ್ರಿಯ 4 ಯಾಮಗಳು ಎಂದು ವಿಂಗಡಿಸಲಾಗಿದೆ. ಅಂದರೆ 3 ಗಂಟೆಗೆ ಒಂದು ಯಾಮ ಎಂದರ್ಥ.

 

 

ಸೂರ್ಯಾಸ್ತದ ನಂತರ ಅಂದರೆ ರಾತ್ರಿಯ ಯಾಮಗಳು ಹೀಗಿವೆ

ಸಂಜೆ 6 ಗಂಟೆಯಿಂದ – 9 ಗಂಟೆಯವರೆಗೆ ಒಂದು ಯಾಮ .

ರಾತ್ರಿ 9 ಗಂಟೆಯಿಂದ – 12 ಗಂಟೆಯವರೆಗೆ ಎರಡನೇ ಯಾಮ.

ಮಧ್ಯರಾತ್ರಿ 12 ಗಂಟೆಯಿಂದ – 3 ಗಂಟೆಯವರೆಗೆ ಮೂರನೇ ಯಾಮ.

ಮುಂಜಾನೆ 3 ಗಂಟೆಯಿಂದ – ಬೆಳಗಿನ ಜಾವ 6 ಗಂಟೆಯವರೆಗೆ ನಾಲ್ಕನೇ ಯಾಮ.

 

 

ಹೀಗೆ ರಾತ್ರಿಯ  ಯಾಮಗಳನ್ನು ವಿಂಗಡಿಸಲಾಗಿದೆ. ಈಗ ಮೊದಲನೇ ಯಾಮದಲ್ಲಿ ಅಂತೂ ಯಾರೂ ಸಾಮಾನ್ಯವಾಗಿ ಮಲಗುವುದಿಲ್ಲ. ಹಿಂದಿನ ಕಾಲದಲ್ಲಿ ಆದರೆ 6 ಗಂಟೆಗಳಿಗೆಲ್ಲ ಊಟ ಮಾಡಿ 8 ಗಂಟೆಗೆಲ್ಲ ಮಲಗಿ ಬಿಡುತ್ತಿದ್ದರು. ಈಗ ಆತರ ಇಲ್ಲ ಮೊಬೈಲ್, ಟಿ.ವಿ ನೋಡಿಕೊಂಡು ಲೇಟಾಗಿ ಮಲಗಿಕೊಳ್ಳುತ್ತಾರೆ.

ಹೀಗೆ ನಿಮಗೆ ಒಂದು ವೇಳೆ ಕನಸು ಬಿದ್ದರೆ, ನಿಮಗೆ ಅದು ನೆನಪಿದ್ದರೆ ಎಷ್ಟು ಗಂಟೆ ಎಂದು ನಿಮಗೆ ಎಚ್ಚರ ಇದ್ದರೆ ನೋಡಿಕೊಂಡು ನಿಮ್ಮ ಕನಸು ಎಷ್ಟು ದಿನಗಳ ಒಳಗಾಗಿ ನನಸಾಗುತ್ತದೆ ಎಂದು ತಿಳಿದುಕೊಳ್ಳಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top