ಮನೋರಂಜನೆ

ಡಿಜಿಟಲ್ ಕ್ರೈಂನೊಂದಿಗೆ ತೆರೆಗಾಣಲು ರೆಡಿಯಾದ ಗುಲ್ಟು!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಇದು ಹೇಳಿಕೇಳಿ ಆನ್‌ಲೈನ್ ಜಮಾನ. ನಮ್ಮ ನಡುವೆ ಇದ್ದ ಎಲ್ಲ ವೆರೈಟಿಗಳ ಕ್ರೈಂಗಳನ್ನೂ ನಿವಾಳಿಸಿ ಎಸೆಯುವಂತೆ ಡಿಜಿಟಲ್ ಕ್ರೈಂ ಕೈಚಳಕ ತೋರಿಸುತ್ತಿದೆ. ಬಹುಶಃ ಇದರ ಆಳಕ್ಕಿಳಿದು ಅದನ್ನೇ ದೃಷ್ಯವಾಗಿಸಿದ ಚಿತ್ರಗಳು ಕನ್ನಡದಲ್ಲಿ ಕಡಿಮೆ. ಆದರೆ ತೆರೆ ಕಾಣುವ ಸನ್ನಾಹದಲ್ಲಿರುವ ‘ಗುಲ್ಟು’ ಚಿತ್ರ ಇಂಥಾದ್ದೊಂದು ಅಪರೂಪದ ರೋಚಕ ಕಥಾಹಂದರ ಹೊಂದಿದೆಯಂತೆ!

 

 

ಜನಾರ್ಧನ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಆನ್‌ಲೈನ್ ಎಂಬ ಟ್ಯಾಗ್‌ಲೈನ್ ಇದೆ. ಈ ಮೂಲಕ ಗುಲ್ಟು ಚಿತ್ರ ಒಂದು ಪೂರ್ಣಪ್ರಮಾಣದ ಡಿಜಿಟಲ್ ಕ್ರೈಂ ಬೇಸಿನ ಕನ್ನಡದ ಮೊದಲ ಚಿತ್ರ ಅಂತಲೂ ಗುರುತಿಸಿಕೊಂಡಿದೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಎಂಜಿನಿಯರಿಂಗ್ ಮುಗಿಸಿಕೊಂಡಿರುವ ಜನಾರ್ಧನ್ ಸಿನಿಮಾ ವ್ಯಾಮೋಹದಿಂದ ತಪ್ಪಿಸಿಕೊಳ್ಳಲಾಗದೆ ಸಿನಿಮಾ ರಂಗಕ್ಕೆ ಅಡಿಯಿರಿಸೋ ತೀರ್ಮಾನ ಮಾಡಿರುವವರು. ಚೆನೈನಲ್ಲಿರುವ ಎಂಜಿಆರ್ ಶಾಲೆಯಲ್ಲಿ ನಿರ್ದೇಶನದಲ್ಲಿ ತರಬೇತಿ ಪಡೆದು ಬಂದಿರುವ ಅವರು ಸೈಬರ್ ಕ್ರೈಂನ ಆಳಕ್ಕಿಳಿದು, ಆ ಬಗ್ಗೆ ರಿಸರ್ಚ್ ನಡೆಸಿ ರೋಚಕವಾದೊಂದು ಕಥೆ ಸಿದ್ಧಪಡಿಸಿಕೊಂಡಿದ್ದರಂತೆ. ಈ ಕಾರಣದಿಂದಲೇ ಇದೀಗ ಈ ಚಿತ್ರ ಡಿeeಟಲ್ ಕ್ರೈಂ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು ಸಜ್ಜಾಗಿದೆ.

 

 

ಅಂದಹಾಗೆ ನವೀನ್ ಶಂಕರ್ ಈ ಚಿತ್ರದ ನಾಯಕನಾದರೆ, ಸೋನು ಗೌಡ ನಾಯಕಿಯಾಗಿ ವಿಶೇಷವಾದೊಂದು ಪಾತ್ರ ಮಾಡಿದ್ದಾರಂತೆ. ಇನ್ನುಳಿದಂತೆ ಅವಿನಾಶ್, ರಂಗಾಯಣ ರಘು, ಪಲ್ಲವಿರಾಜು ಮುಂತಾದವರ ಬೃಹತ್ ತಾರಾಗಣವೂ ಈ ಚಿತ್ರಕ್ಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top