ಮನೋರಂಜನೆ

ಎಟಿಎಂನಲ್ಲಿ ರಕ್ತದ ಕಲೆ ಕಾಣಿಸೋದಿಲ್ಲವಂತೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸದ್ಯ ಬಿಡುಗಡೆಯ ಸರದಿಯಲ್ಲಿ ನಿಂತಿರುವ ಚಿತ್ರಗಳಲ್ಲಿ ಅಟೆಂಪ್ಟ್ ಟು ಮರ್ಡರ್ (ಎಟಿಎಂ) ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರವಾಗಿ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ವರ್ಷಾಂತರಗಳ ಹಿಂದೆ ನಡೆದು ದೇಶವನ್ನೇ ಬೆಚ್ಚಿಬೀಳಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ ಅಂತ ನಿರ್ದೇಶಕ ಅಮರ್ ಆರಂಭದಲ್ಲಿ ಹೇಳಿಕೊಂಡಿದ್ದರು.

 

 

ಹಾಗಾದರೆ ಅದು ಎಟಿಎಂಗೆ ನುಗ್ಗಿದ ದುಷ್ಕರ್ಮಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವಾ? ಎಂಬ ಪ್ರಶ್ನೆ ಕಾಡೋದು ಸಹಜ. ಆದರೆ ಈ ವಿಚಾರದ ನಿಗೂಢವನ್ನು ಈ ವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಅದೇ ಘಟನೆಯೇ ಆಗಿದ್ದರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.

 

 

ಇದು ಒಂದು ಕ್ರೈಂ ಓರಿಯಂಟೆಡ್ ಚಿತ್ರ ಎಂಬಂತೆ ಕಂಡರೂ ಈ ಚಿತ್ರದಲ್ಲೆಲ್ಲೂ ಕೊಲೆಗಳನ್ನು ವೈಭವೀಕರಿಸಿಲ್ಲವಂತೆ. ಅಸಲಿಗೆ ಕೊಲೆ ನಡೆಯುತ್ತದಾ ಎಂಬುದನ್ನೇ ಚಿತ್ರ ತಂಡ ಸಸ್ಪೆನ್ಸ್ ಆಗಿಟ್ಟಿದೆ. ಈ ನೈಜ ಘಟನೆಗೆ ಸಿನಿಮಾ ಟಚ್ ನೀಡಿರೋ ನಿರ್ದೇಶಕರು ಅದರ ಜೊತೆಗೆ ನವಿರಾದೊಂದು ಪ್ರೇಮ ಕಥೆಯನ್ನೂ ಹೇಳಿದ್ದಾರಂತೆ. ಈ ಕಾರಣದಿಂದಲೇ ಈ ಚಿತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಅಭಿಪ್ರಾಯ.

 

 

 

ಇನ್ನುಳಿದಂತೆ ವಿನಯ್ ನಾಯಕ ನಟರಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟನಾಗಬೇಕೆಂಬ ಕನಸು ಹೊತ್ತು ಆ ನಿಟ್ಟಿನಲ್ಲಿ ವರ್ಷಾಂತರಗಳ ಕಾಲ ಶ್ರಮ ವಹಿಸಿರುವ ವಿನಯ್ ಎಟಿಎಂ ಚಿತ್ರದ ಮೂಲಕ ಅದು ಕೈಗೂಡಿದ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿರುವ ಧನ್ಯತೆ ವಿನಯ್ ಅವರಲ್ಲಿದೆ. ಈ ಚಿತ್ರದ ಮತ್ತೋರ್ವ ನಟ ಚಂದು ಗೌಡ. ಪ್ರಸ್ತುತ ಲಕ್ಷ್ಮೀಬಾರಮ್ಮ ಸೀರಿಯಲ್‌ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಇವರ ಪಾತ್ರದ ಹೆಸರೂ ಚಂದು. ಈ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಇವರು ಎರಡು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇವರಿಗಿಲ್ಲಿ ಶೋಭಿತಾ ಎಂಬಾಕೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಐಟಿ ಕಂಪೆನಿ ಹುಡುಗಿಯಾಗಿ ನಟಿಸಿರೋ ಶೋಭಿತಾಗೂ ಇದು ಮೊದಲ ಚಿತ್ರ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top