ಮನೋರಂಜನೆ

ಅಂಬಿ ತುಂಬಾ ಲೇಟಾಯ್ತೋ! ರೆಬೆಲ್ ಸ್ಟಾರ್ ಇರೋದೇ ಹೀಗೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹೆಸರಾಂತ ನಟರನ್ನು ಹಾಕಿಕೊಂಡು ಸಿನಿಮಾ ಮಾಡೋದು ಭಯಂಕರ ಛಾಲೆಂಜಿನ ಕೆಲಸ. ‘ಅವರು ಹೀಗೇ’ ಅನ್ನೋದು ಗೊತ್ತಿದ್ದರೂ ‘ಪರವಾಗಿಲ್ಲ ಮೇಂಟೇನ್ ಮಾಡೋಣ’ ಅಂತಾ ತೀರ್ಮಾನಿಸೋದು ಅವರ ಮೇಲಿನ ಪ್ರೀತಿಗೆ!

 

 

ರೆಬೆಲ್ ಸ್ಟಾರ್ ಅಂಬರೀಶ್ ಅವರು ಯಾವುದಾದರೂ ಸಿನಿಮಾ ಒಪ್ಪಿಕೊಂಡರಂತೂ ಅವರು ಯಾವಾಗ ಶೂಟಿಂಗ್ ಗೆ ಹಾಜರಾಗುತ್ತಾರೆ ಅನ್ನೋದು ಸ್ವತಃ ಅವರಿಗೇ ಗೊತ್ತಿರೋದಿಲ್ಲ. ಅವರು ಯಾವಾಗ ಬಂದರೂ ಸರಿ ಚಿತ್ರೀಕರಿಸಿಕೊಳ್ಳಲು ಚಿತ್ರತಂಡ ರೆಡಿಯಾಗಿರಬೇಕು ಅಷ್ಟೇ. ಇಂತಿಷ್ಟೇ ದಿನಗಳಲ್ಲಿ ಸಿನಿಮಾ ಮುಗಿಸಬೇಕು ಪ್ಲಾನು ಮಾಡಿಕೊಂಡು ಬಂದರೆ ಅದು ಯಾವ ಕಾರಣಕ್ಕೂ ವರ್ಕೌಟ್ ಆಗೋದಿಲ್ಲ!

ಸದ್ಯ ರೆಬೆಲ್ ಸ್ಟಾರ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರಲ್ಲಾ? ಈ ಚಿತ್ರಕ್ಕೆ ಒಂದು ಕಡೆ ಅಂಬರೀಶ್ ಅವ ಭಾಗವನ್ನು ಮತ್ತೊಂದುಕಡೆ ಸುದೀಪ್ ಬರುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆಯಂತೆ.

 

 

ಇತ್ತೀಚೆಗೆ ಅಂಬಿ ಬೆಳಬೆಳಿಗ್ಗೆ ಎದ್ದು ಜಾಗ್ ಮುಗಿಸಿಕೊಂಡು ಅಂಗಡಿಯಲ್ಲಿ ಒಂದಿಷ್ಟು ಖರೀದಿ ಮಾಡುವ ಸೀನುಗಳನ್ನು ಶೂಟ್ ಮಾಡಿಕೊಳ್ಳಬೇಕಿತ್ತು. ಬೆಂಗಳೂರಿನ ಕೆಂಪೇಗೌಡನಗರ ಈಜುಕೊಳದ ಬಳಿ ನಿರ್ದೇಶಕ ಗುರುದತ್ತ ಗಾಣಿಗ ಮುಂಜಾನೆಯ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲು ಇಡೀ ಚಿತ್ರತಂಡವನ್ನು ರೆಡಿ ಮಾಡಿಸಿಕೊಂಡು ನಿಂತಿದ್ದರು. ಅಲ್ಲಿ ಅಂಬಿ ಬರೋದೊಂದೇ ಬಾಕಿಯಿದ್ದದ್ದು. ‘ಅಂಬಿ ಈಗ ಬಂದ್ರು, ಆಗ ಬಂದ್ರು, ಇನ್ನೇನು ಬಂದೇಬಿಟ್ರು…’ ಅಂತಾ ದಾರಿ ಕಾದಿದ್ದೇ ಬಂತು. ಮಧ್ಯಾಹ್ನದ ಊಟರ ವಿರಾಮವೂ ಕಳೆದುಹೋದರೂ ಅಂಬಿಯ ಸುಳಿವೇ ಇರಲಿಲ್ಲ. ಕಡೆಗೂ ಅಂಬಿಯ ಆಗಮನವಾಯ್ತು. ಅಷ್ಟೊತ್ತಿಗೆ ಗಂಟೆ ನಾಲ್ಕಾಗಿತ್ತು. ಬೆಳಬೆಳಿಗ್ಗೆ ತೆಗೆಯವೇಕಿದ್ದ ದೃಶ್ಯವನ್ನು ಇಳಿಸಂಜೆಯಲ್ಲಿ ಚಿತ್ರೀಕರಿಸಿಕೊಂಡರು. ಒಂದೂವರೆ ದೃಶ್ಯ ತೆಗೆದು ಪ್ಯಾಕಪ್ ಮಾಡುವಂತಾಯಿತು!

 

 

ಇಂದು ಅಂಬಿ ಮೇಲಿನ ಆರೋಪವಲ್ಲ. ರೆಬೆಲ್ ಸ್ಟಾರ್ ಇರೋದೇ ಹೀಗೆ. ಯಾರಾದರೂ ‘ಸಿನಿಮಾ ಮಾಡ್ತೀವಿ ಕಾಲ್ ಶೀಟ್ ಕೊಡಿ’ ಅಂತಾ ಹೋದಾಗ ಸ್ವತಃ ಅಂಬರೀಶ್ ಹೇಳೋದೂ ಅದನ್ನೇ ‘ನನ್ನಿಟ್ಕೊಂಡು ಸಿನಿಮಾ ಮಾಡಕ್ಕೋದ್ರೆ ಕಷ್ಟ ಆಯ್ತದೆ ನಿಮ್ಗೆ’ ಅಂತಾ. ಆದರೂ ಪರವಾಗಿಲ್ಲ ನೀವೇ ಬೇಕು ಅನ್ನೋದು ಕನ್ನಡ ಚಿತ್ರರಂಗದ ಅನಿವಾರ್ಯತೆ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top