ವಿಶೇಷ

ಭೂಮಿಯ ಮೇಲಿನ ಸ್ವರ್ಗ ಅಂತಾನೆ ಕರೆಯೋ ಪಾಂಡವರ ಕಾಲದ ಶಂಬಲ ನಗರಕ್ಕೂ ಹಿಟ್ಲರ್ ಗು ಏನ್ ಸಂಬಂಧ ಬನ್ನಿ ಅಲ್ಲಿರುವ ರಹಸ್ಯಗಳ ಬಗ್ಗೆ ತಿಳಿಯೋಣ

ಶಂಬಲ ನಗರ ಈ ಭೂಮಿಯ ಮೇಲಿನ ಸ್ವರ್ಗ ಒಂದು ಅದ್ಭುತವಾದ ನಗರ. ಅಲ್ಲಿರುವ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ ?

 

 

ಅದ್ಭುತವಾದ ನಗರ, ಹನ್ನೆರಡು ಅಡಿ ಮನುಷ್ಯರು. ನೂರಾರು ವರ್ಷ ಜೀವಿಸುವ ಜನಾಂಗ . ಸಾಧಾರಣ ಪ್ರಪಂಚಕ್ಕೆ ದೂರವಾಗಿ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡಿರುವ ಜಾಗ. ನಂಬದೇ ಇರುವಂತಹ ಜೀವನ. ಇದು ನಿಜಾನಾ, ಅಥವಾ ಕಲ್ಪನೆಯೋ ? , ನೂರಾರು ವರ್ಷದಿಂದ ಅದೆಷ್ಟೋ ಅನೇಕ ಜನರನ್ನು ಆಕರ್ಷಿಸುತ್ತಿರುವ ನಗರ ಎಲ್ಲಿದೆ ?

ಪುರಾಣಗಳಲ್ಲಿ ಹೇಳಿರುವ ಪ್ರಕಾರ ಸ್ವರ್ಗ ಲೋಕ ಅಂದರೆ ಇದೇನಾ ? ದೇವತೆಗಳು ಎಂದರೆ ಇವರೇನಾ ? ಆ ಅದೃಶ್ಯ ನಗರದ ಬಗ್ಗೆ ತಿಳಿದುಕೊಳ್ಳೋಣ

ಶಂಬಲ ಹಿಮಾಲಯ ಪ್ರದೇಶದಲ್ಲಿ ಇದೆ ಎಂದು ಒಂದು ವಾದ. ಸಾಧಾರಣವಾಗಿ ಅಲ್ಲಿಗೆ ಬರುವ ಮನುಷ್ಯರು ಅಲ್ಲಿಗೆ ಸೇರುವುದು ಒಂದು ತಪ್ಪಸ್ಸು .ಆ ಸ್ವರ್ಗದಂತಹ ನಗರಕ್ಕೆ ಹೋಗಬೇಕೆಂದರೆ ತಪಸ್ಸು ಮಾಡಬೇಕಂತೆ.ಇದರ ಬಗ್ಗೆ  ಒಂದು ಚಿಕ್ಕ ಕಥೆಯೂ ಸಹ ಇದೆ.

 

 

ಕುರುಕ್ಷೇತ್ರದ ಯುದ್ಧದ ನಂತರ ಪಾಂಡವರು ಸ್ವಲ್ಪ ಕಾಲ ಆಳ್ವಿಕೆ ನಡೆಸಿ, ಕಲಿಯುಗ  ಆರಂಭವಾಗುತ್ತಿದ್ದಂತೆ ಆಳ್ವಿಕೆಗೆ ವಿದಾಯ ಹೇಳಿ ಶ್ರೀ ಕೃಷ್ಣನನ್ನು  ಬೇಟಿ ಮಾಡುತ್ತಾರೆ. ಅವರಿಗೆ ಶ್ರೀಕೃಷ್ಣನು , ಈ ಸ್ವರ್ಗ ನಗರದ ಬಗ್ಗೆ ತಿಳಿಸುತ್ತಾನೆ. ಹಾಗೂ ಆಲ್ಲಿಗೆ ಸೇರುವುದು ಬಹಳ ಕಷ್ಟ ಎಂದು ಸಹ ಎಚ್ಚರಿಸುತ್ತಾನೆ. ಆ ಸ್ವರ್ಗ ನಗರವನ್ನು ತಲುಪುವ ಹಾದಿಯಲ್ಲಿ ಪಾಂಡವರು  ಒಬ್ಬೊಬ್ಬರಾಗಿ ಮರಣ ಹೊಂದುತ್ತಾರೆ. ಕೊನೆಗೆ ಧರ್ಮರಾಯ ಮತ್ತು ಅವನನ್ನು ಅನುಸರಿಸಿ ಬಂದ ನಾಯಿ ಮಾತ್ರ  ಆ ಪ್ರದೇಶವನ್ನು ತಲುಪಿದರು.

ಇದೆಲ್ಲಾ ಒಂದು ಕಡೆಯಾದರೆ ಕೆಲವು ಸಂಶೋಧನೆ ಮತ್ತು ಭಾರತೀಯ ಗ್ರಂಥ ಹಾಗೂ ಬೌದ್ಧ ಗ್ರಂಥಗಳು ಪ್ರಕಾರ ನೋಡಿದರೆ  ಬಾಹ್ಯ  ಪ್ರಪಂಚಕ್ಕೆ ಗೊತ್ತಿಲ್ಲದ ಒಂದು ಪ್ರದೇಶ ಹಿಮಾಲಯದಲ್ಲಿ ಇದೆ. ಆದರ  ಹೆಸರೇ ಶಂಬಲ. ಈ ಶಂಬಲದಲ್ಲಿ  ವಾಸಿಸುವವರು ಮನುಷ್ಯರಿಗಿಂತ ಹೆಚ್ಚು ಆಯುಷ್ಯವನ್ನು ಹೊಂದಿರುತ್ತಾರಂತೆ.

 

 

ಈ ವಿಷಯಗಳನ್ನು ತಿಳಿದ ರಷ್ಯಾ 1920 ರಲ್ಲಿ ತನ್ನ ಸೇನೆಯನ್ನು ಸಂಶೋಧನೆಗಾಗಿ ಕಳಿಸುತ್ತದೆ. ಹಾಗೂ ಈ ವಿಷಯ ತಿಳಿದ ಹಿಟ್ಲರ್  1930 ರಲ್ಲಿ ಶಂಬಲದ ಬಗ್ಗೆ ತಿಳಿದುಕೊಳ್ಳಲು ಪ್ರತ್ಯೇಕ ಸೇನೆಯನ್ನು ಕಳುಹಿಸಿದ್ದನಂತೆ. ಅಷ್ಟೇ ಅಲ್ಲದೆ  ಅವನಿಗೆ ಅದ್ಭುತ ಎಂದರೆ ಬಹಳ ಇಷ್ಟ. ಅದಕ್ಕೆ ಮಂತ್ರ, ಯೋಗ ವಿದ್ಯೆಯನ್ನು ಕಲಿತಿದ್ದನು. ಅದೇ ಆಸಕ್ತಿಯಿಂದ ಸ್ವಲ್ಪ ಸಂಸ್ಕೃತವನ್ನು ಕಲಿತಿದ್ದನು. ಶಂಬಲದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಗ್ರಂಥಗಳನ್ನು ಅಧ್ಯಯನ ಮಾಡಲು ಸಂಸ್ಕೃತ ಕಲಿತಿದ್ದನು.

 

 

ಇದರ  ನಂತರ ಸ್ವಸ್ತಿಕ ಚಿಹ್ನೆಯನ್ನು ಬಳಸುತ್ತಿದ್ದನು ಎನ್ನುತ್ತಾರೆ. ಅವನು  ಪ್ರಪಂಚವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದಿದ್ದ  ಹಿಟ್ಲರ್ ಕೆಲವು ಗೂಢಾಚಾರಿಗಳ ಜೊತೆ ಶಂಬಲ  ಪ್ರದೇಶವನ್ನು ಹುಡುಕಲು  ಪ್ರಯಾಣ ಹೊರಟಿದ್ದನು.

 

 

ಆದರೆ ಅಲ್ಲಿನ ಆಧ್ಯಾತ್ಮಿಕ ವ್ಯಕ್ತಿಗಳು  ಅದಕ್ಕೆ ಅನುಮತಿ  ಮಾಡಿಕೊಡಲಿಲ್ಲವಂತೆ. ಇದನ್ನು ಬುದ್ಧ ಕಾಲಚಕ್ರದಲ್ಲಿ ಶಂಬಲ ಎನ್ನುವ  ಪ್ರದೇಶ ಮುಂಬರುವ ಕಾಲದಲ್ಲಿ ಪ್ರಪಂಚದ ಕೇಂದ್ರ ಸ್ಥಾನವಾಗುತ್ತದೆ ಎಂದು ಬರೆದಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top