ಸಿನಿಮಾ

ಫಿಲಂ ಬೇಡ ಜನರ ಸಮಸ್ಯೆ ಬಗೆಹರಿಸ್ತೀನಿ ಪಾಲಿಟಿಕ್ಸ್ ಬೆಟರ್ ಅಂದ್ರು ಸುಂದರಿ ನಟಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಟಾಲಿವುಡ್ ಖ್ಯಾತ ನಟಿ ಆಗಿರುವ ರೇಷ್ಮಾ ರಾಥೋರ್‌ ಅವರು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ. ನಟಿ ರೇಷ್ಮಾ ರಾಥೋರ್‌ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದಕ್ಕೆ ಬಲವಾದ ದೊಡ್ಡ ಕಾರಣವೂ ಇದೆ. ಅದುವೇ ಇವರ ಊರಿನ ಜನರು.

 

 

ಸಿನಿಮಾ ರಂಗದಲ್ಲಿ ಯಶಸ್ಸು ಪಡೆದಂತೆ ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗುತ್ತಿದ್ದಾರೆ. ರೇಷ್ಮಾ ಅವರು ತಮ್ಮ ಹುಟ್ಟೂರಿಗೆ ಭೇಟಿ ಕೊಟ್ಟಾಗಲೆಲ್ಲಾ ಅಲ್ಲಿಯ ಜನರು ತಮ್ಮ ಸಮಸ್ಯೆಗಳ ಬಗ್ಗೆ ಇವರ ಮುಂದೆ ಹೇಳಿಕೊಳ್ಳುತ್ತಾರಂತೆ. ಅಲ್ಲಿರುವ ಜನರ ಸಮಸ್ಯೆಗಳಿಗೆ ಯಾರೂ ಕೂಡ ಸ್ಪಂದಿಸಿಲ್ಲ. ಆದ್ದರಿಂದ ರೇಷ್ಮಾ ಚುನಾವಣೆಗೆ ನಿಲ್ಲಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಬಗ್ಗೆ ಮಾತನಾಡಿರುವ ನಟಿ ರೇಷ್ಮಾ ತಾನು ಸ್ಥಳೀಯ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ನೋಡುತ್ತ ಬೆಳೆದವಳು. ನನ್ನ ಜನರ ಕಷ್ಟಗಳನ್ನು ಪರಿಹಾರ ಮಾಡುವುದೇ ನನ್ನ ಮುಖ್ಯ ಆದ್ಯತೆ. ಅದರಲ್ಲೂ ಅಲ್ಲಿಯ ಬೇನಿಯಾನ್ ಉಕ್ಕು ಯೋಜನೆ ಸ್ಥಾಪನೆಗೆ ಶ್ರಮಿಸುತ್ತೇನೆ. ಈ ಯೋಜನೆ ಅನುಷ್ಠಾನವಾದ್ರೆ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದು ನಟಿ ರೇಷ್ಮಾ ಹೇಳಿದ್ದಾರೆ.

 

 

ರೇಷ್ಮಾ ಈಗಾಗಲೇ ಚುನಾವಣೆಗಾಗಿ ಸಕಲ ಸಿದ್ಧತೆ ನಡೆಸಿದ್ದು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮತದಾರ ಪ್ರಭುಗಳು ಇವರಿಗೆ ವಿಜಯ ಮಾಲೆ ಹಾಕುತ್ತಾರಾ ಕಾದು ನೋಡಬೇಕಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top