ಮನೋರಂಜನೆ

ಕ್ರಿಕೆಟರ್ ಬುಮ್ರಾ ಜೊತೆ ಲವ್ವು-ಡವ್ವಿ ಬಗ್ಗೆ ಕೊನೆಗೂ ಮೌನ ಮುರಿದ ನಟಿ ರಾಶಿ ಖನ್ನಾ!

ಸಿನಿಮಾ ರಂಗದ ಪ್ರೇಮಿಗಳ ಲವ್ ಸ್ಟೋರಿ ನಿಜಕ್ಕೂ ವಿಚಿತ್ರ. ಅಲ್ಲಿ ಯಾರು ಯಾವಾಗ ಯಾರನ್ನ ಪ್ರೀತಿಸ್ತಾರೆ, ಯಾವ ಜೋಡಿ ಯಾವಾಗ ದೂರಾಗುತ್ತೆ ಅಂತ ಹೇಳೋದೇ ಕಷ್ಟ. ಹಾಗಂತ ಕ್ರಿಕೆಟ್ ಮಂದಿ ಸಿನಿಮಾ ಮಂದಿಯನ್ನು ಲವ್ ಮಾಡಬಾರದು ಅಂತೇನು ಇಲ್ಲ. ಈ ಹಿಂದೆ ಅನೇಕರು ಸಿನಿಮಾ ನಟಿಯರನ್ನು ಟೀಮ್ ಇಂಡಿಯಾ ಆಟಗಾರರು ವರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅದೆಕ್ಕೆ ದೊಡ್ಡ ಪರಂಪರೆಯೇ ಇದೆ. ಈಗ ಈ ಸೇರಿಕೊಂಡು ಚಾಲ್ತಿಯಲ್ಲಿರುವ ಲವ್ ಮ್ಯಾಟರ್ ಕ್ರಿಕೆಟರ್ ಮತ್ತು ಟಾಲಿವುಡ್ ನಟಿ ರಾಶಿ ಖನ್ನಾ ಅವರದ್ದು.

 

 

ಇಂದಿನ ಇಂಟರ್ನೆಟ್ ವೀರರ ಜಮಾನದಲ್ಲಿ ಕ್ಯಮೆಯಿಲ್ಲದ ಆಸಾಮಿಗಳು ಫೇಸ್ಬುಕ್ ಗಳಲ್ಲಿ ಏನಾದರು ಒಂದು ವಿಷಯವನ್ನು ಬೆಂಟಿ ವೈರಲ್ ಮಾಡುವುದನ್ನೇ ಚಟ ಮಾಡಿಕೊಂಡು ಬಿಟ್ಟಿದ್ದಾರೆ. ಇಂತಹ ಕ್ರಿಮಿಗಳಿಗೆ ಸಿಕ್ಕಿರುವ ಮಿಕಾಗಲೇ ನಟಿ ರಾಶಿ ಮತ್ತು ಕ್ರಿಕೆಟರ್ ಬುಮ್ರಾ. ಹೌದು,ಕಳೆದ ಕೆಲವು ದಿನಗಳಿಂದ ರಾಶಿ ಖನ್ನಾ ಅವರು ಕ್ರಿಕೆಟರ್ ಬುಮ್ರಾ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಅದ್ಯಾವ ಪುಣ್ಯಾತ್ಮ ಈ ಸಮಾಚಾರಕ್ಕೆ ಜನ್ಮಕೊಟ್ಟನೋ ಗೊತ್ತಿಲ್ಲ ಆದರೆ ಸುದ್ದಿ ಮಾತ್ರ ರಾಕೆಟ್ ವೇಗದಲ್ಲಿ ಬಾಲಿವುಡ್ ತುಂಬೆಲ್ಲಾ ಪಸರಿಸಿಕೊಂಡಿತ್ತು. ಬುಮ್ರಾ ಮತ್ತು ರಾಶಿ ಹೆಸರನ್ನು ಟ್ಯಾಗ್ ಮಾಡಿ ಬಾಲಿವುಡ್ಡಿನ ಕೆಲವು ವೆಬ್ ಸೈಟ್ ಗಳೂ ಕೂಡ ಅಂತೇ ಕಂತೆಗಳೆಂಬ ನಾಲಾಯಕ್ ಸುದ್ದಿಯನ್ನು ಮಾಡಿಬಿಟ್ಟಿದ್ದವು. ಈವೆಲ್ಲವನ್ನು ನೋಡಿಯೂ ತನ್ನ ಪಾಡಿಗೆ ತಾನು ನೋಡದಂತಿದ್ದ ರಾಶಿ ಕೊನೆಗೂ ಈ ವಿಷ್ಯದ ಬಗ್ಗೆ ಮೌನ ಮುರಿದಿದ್ದಾರೆ.

 

 

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಸಂದರ್ಶಕ ಬರ್ಮಾ ಜೊತೆಗೆ ರಾಶಿ ಅವರ ಹೆಸರು ಸೇರಿಕೊಂಡು ಎಲ್ಲೆಡೆ ನೀವು ಲವ್ ಮಾಡ್ತಿದ್ದೀರಾ ಎಂದು ಸುದ್ದಿಯಾಗುತ್ತಿದೆಯಲ್ಲಾ ಇದು ನಿಜಾನಾ ಅಂತ ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ರಾಶಿ ”ಈ ಪ್ರಶ್ನೆಯನ್ನು ಕೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್,, ಅವರೊಬ್ಬ ಕ್ರಿಕೆಟರ್ ಅಂತ ಮಾತ್ರ ನನಗೆ ಗೊತ್ತು, ಅದು ಬಿಟ್ಟರೆ ಆತನ ಬಗ್ಗೆ ನನಗೆ ಒಂಚೂರು ಗೊತ್ತಿಲ್ಲ. ಮ್ಯಾಚ್ ಅಲ್ಲೂ ಕೂಡ ಅವನನ್ನು ನೋಡಿಲ್ಲ” ಎಂದು ಕಡ್ಡಿ ತುಂಡಾದ ಹಾಗೆ ಹೇಳುವ ಮೂಲಕ ಈ ಗಾಸಿಪ್ ಹಬ್ಬಿಸಿದವರ ಹೂಟ್ಟೆಗೆ ಬೆಂಕಿ ಹಚ್ಚಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top