ದೇವರು

ಕಷ್ಟಗಳು ಹಾಗು ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಹೊಂದಬೇಕಿದ್ರೆ ಶ್ರೀ ರಾಮ ನವಮಿಯ ದಿನ ಈ ಮಂತ್ರಗಳನ್ನು ತಪ್ಪದೆ ಜಪಿಸಿ ರಾಮನ ಕೃಪೆ ನಿಮ್ಮ ಮೇಲೆ ಇರಲಿ

ಶ್ರೀ ರಾಮ ನವಮಿಯ ದಿನ ಈ ಮಂತ್ರಗಳನ್ನು ಜಪಿಸಿದರೆ ಸಾಕು ಶ್ರೀ ರಾಮನ ಕೃಪೆ ನಿಮ್ಮ ಮೇಲೆ ಇರಲಿದೆ.

 

 

ಶ್ರೀರಾಮನನ್ನು ಸಮಸ್ತ ಭಾರತವು  ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಜನ್ಮ ದಿನವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ ಈ ಚೈತ್ರ ಮಾಸದ ನವಮಿಯ ದಿನ. ವಸಂತ  ಮಾಸದ ಚೈತ್ರ ಶುದ್ಧ ನವಮಿಯಂದು  ಪುನರ್ವಸು  ನಕ್ಷತ್ರದಲ್ಲಿ, ಕರ್ಕಾಟಕ ಲಗ್ನ, ಅಭಿಜಿತ್ ಮುಹೂರ್ತದಲ್ಲಿ  ಮಧ್ಯಾಹ್ನ ಹನ್ನೆರಡು ಗಂಟೆಗೆ, ತ್ರೇತಾಯುಗದಲ್ಲಿ ಶ್ರೀರಾಮನ ಜನನವಾಯಿತು ಎಂದು ಹೇಳುತ್ತಿವೆ  ಪುರಾಣಗಳು.

ಅಂತಹ  ಪ್ರಾಶಸ್ತ್ಯವಾದ ದಿನ ಶ್ರೀರಾಮನ ಜನನವಾಯಿತು. ಶ್ರೀ ರಾಮ ನವಮಿಯನ್ನು  ರಾಮನ ಹುಟ್ಟು ಹಬ್ಬವೆಂದೇ ಆಚರಿಸಲಾಗುತ್ತದೆ. ರಾಮ ಸೀತೆಯರ ವಿವಾಹವನ್ನು ಕಲ್ಯಾಣೋತ್ಸವವನ್ನು ಜರುಗಿಸಿ ಆನಂದಿಸುತ್ತಾರೆ, ಸಂಭ್ರಮಿಸುತ್ತಾರೆ  ಸಮಸ್ತ ಭಕ್ತ ವೃಂದ.

 

 

ಮಹಿಮಾನ್ವಿತ ದೇವತೆಗಳಲ್ಲಿ ದೈಹಿಕ ಬಂಧವಾಗಿ ರಾಮನವಮಿಯನ್ನು ಆಚರಿಸಲಾಗುತ್ತದೆ. ಶ್ರೀ  ರಾಮನ ಪೂಜೆಗೆ, ಮಹಿಮೆಗೆ  ಪ್ರತೀಕವಾಗಿ ನಿಲ್ಲುತ್ತದೆ ಶ್ರೀರಾಮನವಮಿ. ಶ್ರೀ ರಾಮನವಮಿಯ ದಿನ ಶ್ರೀ ರಾಮನನ್ನು  ಪೂಜಿಸುವುದು ಅಲ್ಲದೆ  ಭಕ್ತಿ ಶ್ರದ್ಧೆಯಿಂದ ಆ ರಾಮನಲ್ಲಿ ಮೊರೆ ಹೋದರೆ  ಸಮಸ್ತ ದುಃಖ ದುಮ್ಮಾನಗಳು ದೂರ ಸರಿಯುತ್ತವೆ ಎಂದು ಹೇಳಲಾಗುತ್ತದೆ. ಆಷ್ಟೇ ಅಲ್ಲ  ಕೆಟ್ಟ ಶಕ್ತಿಗಳು , ಕೆಟ್ಟ ವಾತಾವರಣ ಹಬ್ಬದ ಆಚರಣೆಯಿಂದ ದೂರು ಒಡೆದು ಹೋಗುತ್ತವೆ.

ವ್ರತಾಚರಣೆಯಿಂದ ಆತ್ಮವು ಶುದ್ಧಗೊಳ್ಳುವುದಲ್ಲದೆ, ರಾಮನವಮಿಯ ಪ್ರಮುಖ ಉದ್ದೇಶ ಅಂದ್ರೆ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ಮನುಷ್ಯನು ಶ್ರೀರಾಮನಲ್ಲಿದ್ದ ಸುಗುಣಗಳನ್ನು   ತನ್ನಲ್ಲಿ ಬೆಳೆಸಿಕೊಳ್ಳಬೇಕು ಎಂಬುದಾಗಿದೆ. ಹೀಗೆ ಮರ್ಯಾದಾ ಪುರುಷೋತ್ತಮನ ಆದರ್ಶಗಳನ್ನು ಪ್ರತಿಯೊಬ್ಬರು  ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದರ ಪ್ರತಿಯಾಗಿ ನಿಲ್ಲುತ್ತದೆ ಶ್ರೀರಾಮನವಮಿ.

ಶ್ರೀರಾಮನವಮಿಯಂದು ಶ್ರೀ ರಾಮ ಮತ್ತು ಸೀತೆಯರ  ಕಲ್ಯಾಣೋತ್ಸವ ಮಾಡಿ ಕೆಲವು ಕಡೆ ಸಂಭ್ರಮಿಸಿದರೆ ಮತ್ತೆ ಕೆಲವು ಕಡೆ ಶ್ರೀರಾಮನನ್ನು ತೊಟ್ಟಿಲಲ್ಲಿ ತೂಗಿ ಸಂಭ್ರಮಿಸುವವರು ಇದ್ದಾರೆ. ಹೌದು ಉತ್ತರ ಭಾರತದ ಕಡೆಗೆ ಶ್ರೀರಾಮ ಜನ್ಮ ದಿನ ಉತ್ಸವವನ್ನು ಆಚರಿಸಿ ಸಂಭ್ರಮಿಸಲಾಗುತ್ತದೆ.

 

 

ಶ್ರೀ ರಾಮನವಮಿ ಯಾಕೆ  ಪ್ರಾಶಸ್ತ್ಯ ಅಂದ್ರೆ  ಶ್ರೀರಾಮನವಮಿಯ ದಿನ  ಶ್ರೀರಾಮನನ್ನು ನಾವು ಭಕ್ತಿ ಶ್ರದ್ಧೆಗಳಿಂದ ಪ್ರಾರ್ಥಿಸಿ ಕೊಂಡರೆ ಸಾಕು ಸಕಲ ಐಶ್ವರ್ಯ ಸಿದ್ಧಿಸುತ್ತದೆ. ಅನಂತ ಪುಣ್ಯ ಪ್ರಾಪ್ತಿಯಾಗುತ್ತದೆ.  ಸಾಮಾನ್ಯವಾಗಿ ಹಿರಿಯರು ಹೇಳುವುದು ಏನಪ್ಪಾ ಅಂದರೆ   ರಾಮನಾಮ ಜಪದಿಂದ ಸಕಲ ಸಂಕಷ್ಟಗಳು ದೂರವಾಗುತ್ತವೆ  ಎಂದು. ಹಾಗಿರುವಾಗ ರಾಮನವಮಿಯ   ದಿನ ರಾಮ ನಾಮವನ್ನು ಬರೆಯುವುದರಿಂದ  ಉತ್ತಮವಾದಂತಹ ಸದ್ಗತಿ ಪ್ರಾಪ್ತಿಯಾಗುತ್ತದೆ.

ಅಷ್ಟೆ ಆಲ್ಲಾ ಶ್ರೀರಾಮ ನಾಮ ಜಪದಿಂದ ಕೂಡ ಸಾಕಷ್ಟು ಪುಣ್ಯ ಫಲ ಒದಗಿ ಬರುತ್ತದೆ. ಇನ್ನು  ಶ್ರೀ ರಾಮನವಮಿಯ ದಿನ  ಶ್ರೀರಾಮನನ್ನು ಪೂಜಿಸುವುದು ಅಷ್ಟೇ  ಅಲ್ಲದೆ “ಶ್ರೀರಾಮ ಜಯರಾಮ ಜಯ ಜಯ ರಾಮ” ಎನ್ನುವ  ಸುಲಭವಾದ  ಮಂತ್ರದಿಂದ ಆ ಕರುಣಾ ಮೂರ್ತಿಯ  ಕರುಣೆಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.

 

 

ಇನ್ನು “ಶ್ರೀರಾಮ ರಾಮ ರಾಮ ರಾಮೇತಿ ರಮೇ ರಮೇ   ಮನೋರಮೆ ಸಹಸ್ರನಾಮ ತತುಲ್ಯಮ್ ರಾಮ ನಾಮ ವರಾನನೇ” ಎಂಬ ಈ ರಾಮ ಮಂತ್ರದಿಂದ  ವಿಷ್ಣು ಸಹಸ್ರನಾಮದ ಫಲವನ್ನು ಹೊಂದಬಹುದು. ಕೇವಲ ಮೂರೇ ಮೂರು ಬಾರಿ ಇದನ್ನು ಪಠಿಸಿ ಕೊಳ್ಳುವುದರಿಂದ ಅನಂತ ಪುಣ್ಯ ಫಲ ಒದಗಿ ಬರುತ್ತದೆ. ಅನಂತ ಐಶ್ವರ್ಯ ಬಂದು ಒದಗುತ್ತದೆ.

ಈ ರಾಮನವಮಿ ಆಚರಣೆ ಸಮಸ್ತ ಭಕ್ತ ವೃಂದದಲ್ಲಿ ಸನ್ಮಂಗಳವನ್ನು ಉಂಟು ಮಾಡಲಿದೆ.ಆದ್ದರಿಂದ  ಶ್ರೀ ರಾಮ ನವಮಿಯ ದಿನ ಈ ಒಂದು ಮಂತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸಿದರೆ ತುಂಬಾ ಒಳ್ಳೆಯದು ಎನ್ನುತ್ತಾರೆ ಪಂಡಿತರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top