ಅರೋಗ್ಯ

ಬಿರು ಬೇಸಗೆಯಲ್ಲಿ ದೇಹವನ್ನು ತಂಪಾಗಿಡಲು ಹೀಗೆ ಮಾಡಿದ್ರೆ ಸಾಕು.

1.ಬೇಸಿಗೆ ಸಮಯದಲ್ಲಿ ಮುಂಜಾನೆ ಮತ್ತು ಬೆಳಗಿನ ಸಮಯ ವ್ಯಾಯಮಕ್ಕೆ ಸೂಕ್ತವಾಗಿರುತ್ತದೆ.ಹವಾ ನಿಯಂತ್ರಿತ ಕೊಟ್ಟಡಿಗಳಿಗೆ ಇದು ಅನ್ವಯವಾಗುವುದಿಲ್ಲ.

 

 

2.ಬೇಸಿಗೆಯಲ್ಲಿ ತೆಳ್ಳನೆಯ ಬಟ್ಟೆ ಧರಿಸಿ ಆದ್ದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗುವುದಿಲ್ಲ.ಹತ್ತಿಯಿಂದ ಮಾಡಿದ ಬಟ್ಟೆಗಳನ್ನು ಧರಿಸಿದರೆ ಬೆವರನ್ನು ಹೀರಿಕೊಳ್ಳುತ್ತವೆ ಮತ್ತು ದೇಹವನ್ನು ತಂಪಾಗಿ ಇಡುತ್ತವೆ.

3.ವ್ಯಯಾಮಕ್ಕೆ ಮೊದಲು,ವ್ಯಾಯಾಮ ಮಾಡುವಾಗ ಮತ್ತು ವ್ಯಾಯಾಮದ ನಂತರ ತಣ್ಣಗಿರುವ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

4.ಬೇಸಿಗೆಯಲ್ಲಿ  ಆದಷ್ಟು ಕೆಳಮಟ್ಟದ ಫ್ಯಾನ್ ಗಳನ್ನು ಬಳಸಿ ಆದ್ದರಿಂದ ಮನೆಯಲ್ಲಿ ತಂಪಾದ ವಾತಾವರಣ ಸೃಷ್ಟಿಯಾಗುತ್ತದೆ.

5.ಬೇಸಿಗೆಯಲ್ಲಿ ಆದಷ್ಟು ಕಿಟಕಿ ಬಾಗಿಲುಗಳನ್ನು ತೆಗೆಡಿದಿ ಆದ್ದರಿಂದ  ತಾಜಾ ಗಾಳಿ ಮನೆಯೊಳಗೆ ಬರುತ್ತದೆ.

 

 

6.ಬೇಸಿಗೆಯಲ್ಲಿ ತಣ್ಣೀರು ಸ್ನಾನ ಒಳ್ಳೆಯದು ದೇಹವನ್ನು ತಂಪಾಗಿ ಇಡುತ್ತದೆ.ನಮ್ಮ ಮನಸ್ಸಿಗೂ ಆರಾಮದಾಯಕ ಎನಿಸುತ್ತದೆ.

7.ನೀವು ಹಾಸಿಗೆಯ ಮೇಲೆ ಮಲಗುವುದರಿಂದ  ಇನ್ನಷ್ಟು ಸೆಕೆಯ ಅನುಭವ ಆಗುತ್ತದೆ ಆದ್ದರಿಂದ ಮನೆಯಲ್ಲಿ ನಿಮ್ಮ ಕೊಠಡಿಯಲ್ಲಿ ನೆಲವನ್ನೇ ಸ್ವಚ್ಛಗೊಳಿಸಿ ಅಲ್ಲಿಯೇ ಫ್ಯಾನ್ ಕೆಳಗೆ ಮಲಗಿದರೆ ತಂಪಾಗಿರುತ್ತದೆ.

8.ಬೇಸಿಗೆ ಗಾಲದಲ್ಲಿ ಆದಷ್ಟು ಹೆಚ್ಚಾಗಿ ನೀರು,ಜ್ಯೂಸ್, ಹಣ್ಣಿನ ರಸಗಳನ್ನು ಸೇವಿಸಿ.ತ್ವಚೆಯ ಹೊಳಪು ಮಾಡುವುದಿಲ್ಲ,ನೋಡಲು ಆಕರ್ಷಕವಾಗಿ ಕಾಣುತ್ತದೆ.ಯಾಕೆಂದರೆ ಬೆವರಿನ  ರೂಪದಲ್ಲಿ ನೀರು ನಮ್ಮ ದೇಹದಿಂದ ಆಚೆ ಹೋಗುತ್ತದೆ.

9.ಬಿಸಿಯಾಗಿರುವ ಪದಾರ್ಥಗಳನ್ನು ಸೇವಿಸಬೇಡಿ.ಕಾಫಿ, ಟೀ ಕುಡಿಯುವವರಾದರೆ ಹಾರಿಸಿಕೊಂಡು ಕುಡಿಯಿರಿ.

10.ಮಸಾಲೆ,ಖಾರ,ಪದಾರ್ಥಗಳನ್ನು ಅಧಿಕವಾಗಿ ತಿನ್ನುವುದನ್ನು ಕಡಿಮೆ ಮಾಡಿ.

11.ಜಾಸ್ತಿ ಹಣ್ಣುಗಳನ್ನು ಸೇವಿಸಿ,ಕಲ್ಲಂಗಡಿ,ಸೌತೆಕಾಯಿ, ನಿಂಬೆಹಣ್ಣಿನ ಜ್ಯೂಸ್ ಕುಡಿಯಿರಿ ದೇಹಕ್ಕೆ ತಂಪು ಮತ್ತು ಒಳ್ಳೆಯದು.

12.ಕಿತ್ತಳೆ ಹಣ್ಣು,ಅದರ ಜ್ಯೂಸ್ ಮತ್ತು ಎಳೆನೀರೂ,ಐಸ್ ಕ್ರೀಮ್ ಕೂಡ ನಮ್ಮ ದೇಹಕ್ಕೆ ಒಳ್ಳೆಯದು.

13.ಮನೆಯಲ್ಲಿ ಮಕ್ಕಳಿದ್ದರೆ  ಉರಿಬಿಸಿಲಿನಲ್ಲಿ ಆಡಲು ಬಿಡಬೇಡಿ. ನೆರಳಿನಲ್ಲಿ ಮನೆಯಲ್ಲೇ ಅಡುವಂತಹ ವ್ಯವಸ್ಥೆ ಮಾಡಿ.ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಿ,ಗಂಟೆಗೊಮ್ಮೆ ನೀರು,ಜ್ಯೂಸ್ ಗಳನ್ನು ಕುಡಿಸಿ.

14.ಈಗ ಎಲ್ಲಾ ಕಡೆ ಮಕ್ಕಳಿಗೆ ಶಾಲಿಗಳಿಗೆ ಬೇಸಿಗೆ ರಜೆ ಇರುತ್ತದೆ.ಮಕ್ಕಳಿಗೆ ಯಾವುದರಲ್ಲಿ ಜಾಸ್ತಿ ಆಸಕ್ತಿಯಿದೆ ಎಂದು ಕಂಡುಹಿಡಿದು ನೃತ್ಯ,ಆಟ, ಹಾಡು ಹಾಡುವುದು,ಇಂಗ್ಲಿಷ್ ಭಾಷೆ ಕಲಿಯುವಿಕೆ ಹೀಗೆ ಅಲ್ಲಿಗೆ ಕಳುಹಿಸಿ ಇದರಿಂದ ಮಕ್ಕಳಿಗೂ ಖುಷಿಯಾಗುತ್ತದೆ ಕಲಿಯುವುದರಲ್ಲೂ ಆಸಕ್ತಿ ಇರುತ್ತದೆ.

15.ಮನೆಯಲ್ಲಿರುವ ಚಿಕ್ಕ ಪುಟ್ಟ ಗಿಡ ಮರಗಳಿಗೆ ಪ್ರತಿ ದಿನ ನೀರು ಹಾಕಿ ಆಗ ಮನೆಯ ವಾತಾವರಣವೂ ತಂಪಾಗಿರುತ್ತದೆ.

16.ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡಲು ಹೆಸರುಬೇಳೆ ನೀರು ,ಹೆಸರುಬೇಳೆ ಪಾಯಸ,ಹೆಸರುಬೇಳೆ ಹಾಕಿ ಮಾಡಿದ ಕಿಚಡಿ ಯನ್ನು ಸೇವಿಸಿ,ಸೌತೆಕಾಯಿ ಹಾಕಿ ಮಾಡಿದ ಕೋಸಂಬರಿ,ಮೆಂತ್ಯದ ಸೊಪ್ಪು ,ಮೆಂತ್ಯದ ಸೊಪ್ಪಿನ ಪುಲವ್ ಹೀಗೆ ಅಡುಗೆ ಮಾಡಿ ತಿಂದು ದೇಹವನ್ನು ತಂಪಾಗಿ ಇರಿಸಿಕೊಳ್ಳಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top