ದೇವರು

ಮಾರ್ಚ್ 25 ಶ್ರೀ ರಾಮನವಮಿ ಆಚರಣೆಗೆ ಶುಭ ಸಮಯ ಯಾವುದು ಗೊತ್ತಾ , ಹೇಗೆ ದೀಪಾರಾಧನೆ ಮಾಡಿದರೆ ಅತ್ಯಂತ ಶ್ರೇಷ್ಠ ತಿಳಿಯಿರಿ

ಶ್ರೀ ರಾಮನವಮಿ ಆಚರಣೆಗೆ ಶುಭ ಸಮಯ ಹಾಗೂ ಯಾವ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಅತ್ಯಂತ ಶ್ರೇಷ್ಠ ಎಂದು ನಿಮಗೆ ಗೊತ್ತೇ ?

 

ಹಿಂದೂಗಳಿಗೆ ಮುಖ್ಯವಾದ ಹಬ್ಬಗಳಲ್ಲಿ ಶ್ರೀರಾಮನವಮಿ ಕೂಡಾ ಒಂದು. ಇದಕ್ಕೆ ತುಂಬಾ ಪುರಾಣದ ಇತಿಹಾಸವಿದೆ.ಶ್ರೀ ರಾಮ ವಸಂತಋತು ಚೈತ್ರ ಶುದ್ಧ, ನವಮಿ, ಪುನರ್ವಸು ನಕ್ಷತ್ರ, ಕಟಕ ಲಗ್ನದಲ್ಲಿ ,ಧರ್ಮ  ಸರಿಯಾಗಿ ಆಬಿಜಿತ್ ಮುಹೂರ್ತದಲ್ಲಿ ಅಂದ್ರೆ ಮಧ್ಯಾಹ್ನ ಹನ್ನೆರಡು ಗಂಟೆಯ ವೇಳೆಯಲ್ಲಿ ತ್ರೇತಾಯುಗದಲ್ಲಿ ಜನಿಸಿದ್ದನು ಶ್ರೀರಾಮ. ಶ್ರೀರಾಮ ಜನ್ಮ  ದಿನದ ಜೊತೆಗೆ ಶ್ರೀರಾಮನ ಕಲ್ಯಾಣೋತ್ಸವ ಮತ್ತು ಶ್ರೀರಾಮನ ಪಟ್ಟಾಭಿಷೇಕ ಕೂಡ ಚೈತ್ರ ಶುದ್ಧ ನವಮಿಯ ದಿನವೇ ಅಯೋದ್ಯೆಯಲ್ಲಿ ನಡೆದಿವೆ ಎಂದು ಪುರಾಣಗಳು ಹೇಳುತ್ತಿವೆ.

 

 

ಭಗವಂತ ರಾಮನನ್ನು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ತ್ರೇತಾಯುಗದಲ್ಲಿ ರಾವಣನ ಅಟ್ಟಹಾಸವನ್ನು ಕೊನೆ ಮಾಡಿ ಮತ್ತೆ ಧರ್ಮ ಸ್ಥಾಪನೆ ಮಾಡಲು ವಿಷ್ಣು ,ಮನುಷ್ಯನ ರೂಪದಲ್ಲಿ ರಾಮನ ಅವತಾರ ತಳೆದ ಎನ್ನಲಾಗಿದೆ.

ಸಾಮಾನ್ಯವಾಗಿ ಈ ಹಬ್ಬವನ್ನು ಮಾರ್ಚ – ಏಪ್ರಿಲ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ರಾಮನ ಜನ್ಮ ಭೂಮಿಯಾದ ಅಯೋದ್ಯೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

 

ಈ ದಿನ ಪಾಯಸ, ಪಂಚಾಮೃತ, ಪಾನಕ, ಕೋಸಂಬರಿಯನ್ನು ದೇವಸ್ಥಾನಗಳಲ್ಲಿ ವಿತರಿಸಲಾಗುತ್ತದೆ.ರಾಮನ ಪೂಜೆಗೆ ತುಪ್ಪ ಹಾಗೂ ಹಾಲು ಶ್ರೇಷ್ಠವಾದದ್ದು.ಹಾಗಾಗಿ ರಾಮನಿಗೆ ಮಾಡಿದ ಹಲ್ವವನ್ನು ಅರ್ಪಿಸಲಾಗುತ್ತದೆ.

 

ರಾಮನ ಪೂಜೆಗೆ ಈ ಬಾರಿಯ ಶುಭ ಮುಹೂರ್ತ

 

ಬೆಳ್ಳಗ್ಗೆ 11 ಗಂಟೆ  14 ನಿಮಿಷದಿಂದ 1 ಗಂಟೆ 40 ನಿಮಿಷಗಳವರೆಗೆ ಶುಭ ಮುಹೂರ್ತವಿದೆ.ಆತ್ಯಂತ ಶ್ರೇಷ್ಠ ಮುಹೂರ್ತ ಪೂಜೆಗೆ ಮಧ್ಯಾಹ್ನ 12 ಗಂಟೆ 27 ನಿಮಿಷ  ಒಳ್ಳೆಯ ಸಮಯ ಎಂದು ಹೇಳಲಾಗಿದೆ.

ಇನ್ನು ಶ್ರೀರಾಮನವಮಿಯ ದಿನ ಸೀತಾರಾಮ ಕಲ್ಯಾಣೋತ್ಸವ ನಡೆಯುತ್ತದೆ. ಪ್ರತಿ ದೇವಸ್ಥಾನಗಳಲ್ಲಿ ಬೀದಿ ಬೀದಿಗಳಲ್ಲಿ ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ಕೊಟ್ಟು, ವಿಜೃಂಭಣೆಯಿಂದ ಈ ಹಬ್ಬವನ್ನು  ಆಚರಿಸುತ್ತಾರೆ.

 

 

ಶ್ರೀರಾಮನವಮಿಯ ದಿನ ಯಾವ ಎಣ್ಣೆಯ ದೀಪ ಹಚ್ಚಿದರೆ ಶ್ರೇಷ್ಠ

 

ಶ್ರೀರಾಮನಿಗೆ ಕೊಬ್ಬರಿ ಎಣ್ಣೆಯಿಂದ  ದೀಪಾರಾಧನೆ ಮಾಡುವುದರಿಂದ ಶುಭವಾಗುತ್ತದೆ  ಎಂದು  ಪಂಡಿತರು ಹೇಳುತ್ತಾರೆ. ಈ ರೀತಿಯ ಕೊಬ್ಬರಿ ಎಣ್ಣೆಯ ದೀಪಾರಾಧನೆ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳು ಲಭಿಸುತ್ತವೆ ಎಂದು ಪುರಾಣಗಳು ಸಹ ಹೇಳುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top