ವಿಶೇಷ

ಗಂಡು ಮಕ್ಕಳು ಯಾವುದೇ ಕಾರಣಕ್ಕೂ ಈ 4 ವಿಚಾರಗಳನ್ನ ಯಾರ್ ಜೊತೆಗೂ ಅಪ್ಪಿತಪ್ಪಿನೂ ಹಂಚ್ಕೋಬಾರ್ದು

ಗಂಡಸರು ಯಾವುದೇ ಕಾರಣಕ್ಕೂ ಈ ನಾಲ್ಕು ವಿಚಾರಗಳನ್ನು ಯಾರ ಜೊತೆಗೂ ಸಹ ಹಂಚಿಕೊಳ್ಳಬಾರದಂತೆ.

 

 

ಸಾಮಾನ್ಯವಾಗಿ ಮದುವೆಯಾದ ಗಂಡಸರು ಬಹಳಷ್ಟು ವಿಷಯಗಳನ್ನು ತಮ್ಮ ಗೆಳೆಯರ ಜೊತೆ ಹಂಚಿ ಕೊಳ್ಳುತ್ತಾ ಇರುತ್ತಾರೆ . ಮನೆಯಲ್ಲಿ ಹೆಂಡತಿ ಮತ್ತು  ತಾಯಿಯಿಂದ ಆಗುವ ಕಿರಿಕಿರಿ, ಕಿರುಕುಳ, ಆರ್ಥಿಕವಾದ ಸಮಸ್ಯೆಗಳು. ಈ ರೀತಿಯ ವಿಷಯಗಳನ್ನು ಬಹಳಷ್ಟು ಮಂದಿ ಗಂಡಸರು ಹಂಚಿಕೊಳ್ಳುತ್ತಾರೆ ಆದರೆ ಪುರುಷರು ಕೆಲವು ವಿಷಯಗಳನ್ನು  ಯಾರೊಂದಿಗೂ ,ಎಂದಿಗೂ, ಸಹ ಹಂಚಿಕೊಳ್ಳಬಾರದಂತೆ.ಇದು ಇಂದಿನ ಸಂಶೋಧನೆಯಲ್ಲಿ ಗೊತ್ತಾದ ಸಂಗತಿಯಲ್ಲ .

ಕೆಲವು ವರ್ಷಗಳ ಹಿಂದೆ ಚಾಣಕ್ಯ ಹೇಳಿದ ಮಾತುಗಳೇ, ಈ ವಿಷಯವನ್ನು ತಿಳಿಸುತ್ತಾ ಇವೆ. ಚಾಣಕ್ಯ ನಮಗೆ ಸುಪರಿಚಿತ. ಅವರು ಅದೆಷ್ಟೋ ನೀತಿ ಸೂತ್ರಗಳನ್ನು ಬೋಧಿಸಿದ್ದಾರೆ.ಚಾಣಕ್ಯ ಹೇಳಿದ ಅತಿ ಮುಖ್ಯವಾದ ನೀತಿ ಸೂತ್ರಗಳಲ್ಲಿ, ಕೆಲವನ್ನು ಮಾತ್ರ ಪುರುಷರು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ಒಂದು ವೇಳೆ ಹಂಚಿಕೊಂಡರೆ ಮುಂದೆ ತೊಂದರೆಗಳು ತಪ್ಪಿದ್ದಲ್ಲ.

 

 

ಇಷ್ಟಕ್ಕೂ ಆ ಸೂತ್ರಗಳು ಏನೆಂದು ತಿಳಿದುಕೊಳ್ಳೋಣ ಬನ್ನಿ

 

ಗಂಡಸರು ಯಾವುದೋ ಒಂದು ದಿನ ಆರ್ಥಿಕ ಪರಿಸ್ಥಿತಿಯಿಂದ ನರಳಾಡುತ್ತ ಇದ್ದರೆ, ಅವುಗಳ ಬಗ್ಗೆ ಇತರರಿಗೆ ಯಾವುದೇ ಕಾರಣಕ್ಕೂ ಹೇಳಬಾರದು. ಯಾಕೆಂದರೆ ಆರ್ಥಿಕ ತೊಂದರೆಯಲ್ಲಿ ಇದ್ದೇವೆ ಎಂದು ಗೊತ್ತಾದರೆ, ಯಾರೂ ಕೂಡ ಸಹಾಯ ಮಾಡುವುದಿಲ್ಲ.

ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಇತರರಿಗೆ ತಿಳಿಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತಿಳಿದರೆ ಹೊರಗಿನವರು ಅವಹೇಳನ ಮಾಡುತ್ತಾರೆ.ಹಾಸ್ಯ ಮಾಡಿ, ಉಡಾಫೆಯ ಮಾತುಗಳನ್ನು ಆಡಿ ಇನ್ನಷ್ಟು ಕಿರಿಕಿರಿ ಉಂಟು ಮಾಡುತ್ತಾರೆ. ಸಮಸ್ಯೆಗಳಿಂದ ನರಳುತ್ತಿರುವವರು, ಇದರಿಂದ ಇನ್ನಷ್ಟು ಆತ್ಮ ನ್ಯೂನ್ಯತೆಗೆ ಒಳಗಾಗುತ್ತಾರೆ.

 

 

ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಬಗ್ಗೆ ಯಾವುದೇ ಸಂಗತಿಯಾದರೂ ಸಹ ಇತರರ ಜೊತೆಗೆ ಚರ್ಚಿಸಬಾರದು. ಯಾವುದೇ ಸಂಗತಿಯಾದರೂ ಸಹ ರಹಸ್ಯವಾಗಿ ಇಡಬೇಕು .

ಎಂದಾದರೂ ನೀವು ಅವಮಾನಕ್ಕೆ ಗುರಿಯಾದರೆ, ಸಾಧ್ಯವಾದಷ್ಟು ಶೀಘ್ರವಾಗಿ ಅದನ್ನು ಮರೆಯಬೇಕು. ಅಷ್ಟೇ ಅಲ್ಲ ಆ ವಿಷಯವನ್ನು ಇತರರಿಗೆ ಹೇಳಬಾರದು. ಯಾಕೆಂದರೆ ಆ ಬಳಿಕ ಆಗುವ ಪರಿಣಾಮಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top