ಸಿನಿಮಾ

ಮಂಗಳೂರ ಮಲ್ಲಿಗೆ ಅನುಷ್ಕಾ ಒಲವು ಈಗ ಈ ನಿರ್ದೇಶಕನ ಕಡೆಗೆ

ಅಪ್ಪಟ ಕನ್ನಡದ ಹುಡುಗಿ ಅನುಷ್ಕಾ ಶೆಟ್ಟಿ ಬಾಹುಬಲಿ ಚಿತ್ರದ ನಂತರ ಭಾರೀ ಸುದ್ದಿಯಲ್ಲಿದ್ದಾರೆ. ಆಕೆ ಬಾಹುಬಲಿ ನಂತರ ಭಾಗಮತಿ ಚಿತ್ರದಲ್ಲಿ ಅಭಿನಯ ಮಾಡಿದ್ದಳು ಈಗ ಯಾವ ಚಿತ್ರ ಮಾಡಲಿದ್ದಾರೆ ಎಂಬ ಕಾತುರತೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು.

 

ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ಮದುವೆ ಅಗಲಿದ್ದಾರೆ ಸದ್ಯ ಒಪ್ಪಿಕೊಂಡಿರುವ ಚಿತ್ರ ಬಿಟ್ಟು ಬೇರೆ ಚಿತ್ರಗಳಲ್ಲಿ ಸಹಿ ಮಾಡುತ್ತಿಲ್ಲ ಎಂದು ಕೆಲವರು ಗುಸು ಗುಸು ಮಾತನಾಡುತ್ತಿದ್ದರು. ಆದರೆ ಈಗ ಅನುಷ್ಕಾ ಇದಕ್ಕೆಲ್ಲ ತೆರೆ ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಅನುಷ್ಕಾ ಶೆಟ್ಟಿ ಅವರ ಮುಂದಿನ ಚಿತ್ರವನ್ನು ನಿರ್ದೇಶಕ ಗೌತಮ್ ಮೆನನ್‌‌‌‌ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಇವರ ಚಿತ್ರಕ್ಕೆ ಸಹಿ ಹಾಕಿರುವ ಅನುಷ್ಕಾ ನಟ ವಿಕ್ರಂ ಜೊತೆಗೆ ಅಭಿನಯ ಅಭಿನಯ ಮಾಡಲಿದ್ದಾರೆ.

 

ನಿರ್ದೇಶಕ ಗೌತಮ್ ಮೆನನ್‌‌‌‌ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಒಂದು ಒಳ್ಳೆಯ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದ ಅನುಷ್ಕಾ ಅವರಿಗೆ ಈ ಚಿತ್ರದ ಕಥೆ ಹೇಳಿ ಮಾಡಿಸಿದಂತೆ ಇದೆ ಎಂದು ತಿಳಿದು ಬಂದಿದೆ.

 

 

ಇನ್ನು ಅನುಷ್ಕಾ ಅವರ ಮದುವೆ ಯಾವಾಗ ಎಂದು ಹಲವೆಡೆ ಚರ್ಚೆ ಶುರುವಾಗಿದ್ದು ಇದಕ್ಕೆ ಅನುಷ್ಕಾ ಅವರು, ನಾನು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top