ಸಿನಿಮಾ

ರಾಹುಲ್ ಗಾಂಧಿ ಮೇಲೆ ಈ ಟಾಪ್ ಬಾಲಿವುಡ್ ನಟಿಗೆ ಕ್ರಶ್ ಆಗಿತ್ತಂತೆ

ರಾಹುಲ್ ಗಾಂಧಿ ಅವರ ಜೊತೆ ಡೇಟಿಂಗ್ ಮಾಡುವ ಇಷ್ಟವಿತ್ತು ಎಂದು ಸುದ್ದಿ ವಾಹಿನಿಯ ಸಂದರ್ಶನಲ್ಲಿ ಕರಿನಾ ಕಪೂರ್ ಹೊರಹಾಕಿದ್ದರು ಈಗ ಅದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆಗಳು ಶುರು ಆಗಿವೆ.

 

 

2002ರಲ್ಲಿ ಸಿಮಿ ಗರೆವಾಲ್ ಆಯೋಜನೆ ಮಾಡಿದ್ದ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ ಟಾಕ್ ಶೋ ನಲ್ಲಿ ಭಾಗವಹಿಸಿ ಸಂದರ್ಶನವನ್ನು ನೀಡಿದ್ದ ಕರೀನಾ ಕಪೂರ್ ನಿರೂಪಕಿಯೊಂದಿಗೆ ಮಾತುಕತೆ ನಡೆಸುತ್ತಾ ಆಗ ತಾನು ಸಿಂಗಲ್ ಆಗಿರುವುದಾಗಿ ಹೇಳಿಕೊಂಡಿದ್ದರು. ಮತ್ತು ನಾನು ಪ್ರೀತಿಯಲ್ಲಿ ಬೀಳುವ ತವಕದಲ್ಲಿರುವುದಾಗಿ ನನ್ನ ಕನಸುಗಳನ್ನು ಪೂರೈಸುವ ಬಾಳಸಂಗಾತಿಯನ್ನು ಕಾಣುವ ಕುತೂಹಲದಲ್ಲಿದ್ದೇನೆ ಎಂದು ಹೇಳಿದ್ದರು.

 

 

ಇದೇ ಸಂದರ್ಭದಲ್ಲಿ ಸಿಮಿ ಗರೆವಾಲ್, ನೀವು ಈಗ ಯಾರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರೀನಾ ಇದೊಂದು ವಿವಾದಾತ್ಮಕ ವಿಚಾರವಾಗಿದೆ. ಬಹಿರಂಗವಾಗಿ ಹೇಳಬೇಕೋ ಬೇಡವೋ ತಿಳಿಯುತ್ತಿಲ್ಲ. ಆದರೆ ನನಗೆ ರಾಹುಲ್ ಗಾಂಧಿ ಜೊತೆಗೆ ಡೇಟಿಂಗ್ ಮಾಡಲು ಇಷ್ಟ. ಅವರ ರಾಜಕೀಯ ಜೀವನದ ಕುರಿತಂತೆ ತಿಳುದುಕೊಳ್ಳಬೇಕೆಂಬ ಕುತೂಹಲವಿದೆ, ಅವರೊಂದಿಗೆ ಸಂಭಾಷಣೆ ಮಾಡಲು ನನಗಿಷ್ಟ’ ಎಂದು ಹೇಳಿದ್ದರು. ನನ್ನ ಕುಟುಂಬ ಸಿನಿಮಾ ರಂಗದ ಹಿನ್ನೆಲೆ ಹೊಂದಿರುವುದರಿಂದ ನನಗೆ ರಾಜಕೀಯ ಹಿನ್ನೆಲೆ ಇರುವವರ ಜೊತೆಗೆ ಒಡನಾಟ ಇಟ್ಟುಕೊಳ್ಳುವುದು ತುಂಬಾ ಆಸಕ್ತಿದಾಯಕ ಎಂದು ತಿಳಿಸಿದ್ದರು ಈಗ ವಿಷಯ ಈಗ ಸುದ್ದಿಯಾಗಿ ವೈರಲ್ ಆಗಿದೆ.

 

 

ಪ್ರಸ್ತುತ ನಟಿ ಕರೀನಾ ನಟ ಸೈಫ್ ಆಲಿ ಖಾನ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಮುದ್ದಾದ ಗಂಡುಮಗುವಿದೆ. ಕರೀನಾ ಸದ್ಯ ‘ವೀರೆ ದಿ ವೆಡ್ಡಿಂಗ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ರೀಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top