ಮನೋರಂಜನೆ

ಅಂತಿಮವಾಯ್ತು 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಅಂತಿಮ ತಂಡಗಳ ಪಟ್ಟಿ, ಸ್ವರೂಪ ಮತ್ತು ವೇಳಾಪಟ್ಟಿ: ಇಂತಿದೆ ನೋಡಿ .

ಮುಂಬರುವ 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಕೂಸು ಆಫ್ಘಾನಿಸ್ತಾನ ಅರ್ಹತೆಯನ್ನು ಪಡೆದುಕೊಂಡಿದೆ. 2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಆಫ್ಘಾನಿಸ್ತಾನ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುವ 2019ರ ವಿಶ್ವಪಕ್‍ಗೆ ಅರ್ಹತೆ ಪಡೆದುಕೊಂಡಿದೆ.

 

 

ಒಟ್ಟಾರೆಯಾಗಿ ಈ ಭಾರಿಯ ವಿಶ್ವಕಪ್ ನಲ್ಲಿ ಒಟ್ಟು ಹತ್ತು ದೇಶಗಳು ಭಾಗವಹಿಸಲಿದ್ದು ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಅಪ್ಘಾನಿಸ್ತಾನ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

2019ರ ವಿಶ್ವಕಪ್ ಪಂದ್ಯಾವಳಿಗಳು ಮೇ 30ರಿಂದ ಜುಲೈ 14ರ ವರೆಗೆ ಒಟ್ಟು 45 ದಿನಗಳ ಕಾಲ ನಡೆಯಲಿದೆ. ಈ ಭಾರಿ ತಂಡಗಳನ್ನು ಯಾವುದೇ ಗ್ರೂಪ್ ಗಳನ್ನಾಗಿ ವಿಂಗಡಿಸದೆ ಎಲ್ಲಾ ಹತ್ತೂ ತಂಡಗಳನ್ನು ಒಂದೇ ಗ್ರೂಪ್ ನಲ್ಲಿ ಇರಿಸಲಾಗಿದ್ದು ಹತ್ತೂ ತಂಡಗಳು ಕೂಡ ಪರಸ್ಪರ ಎಲ್ಲಾ ತಂಡಗಳ ಎದುರು ಪಂದ್ಯಗಳನ್ನಾಡಲಿವೆ.

 

 

ಲೀಗ್ ಹಂತದಲ್ಲಿ ಪ್ರತಿ ತಂಡವೂ ತಲಾ ಒಂಭತ್ತು ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದುಕೊಂಡಿದೆ.. ಲೀಗ್ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ನಾಲ್ಕು ತಂಡಗಳು ನಾಕೌಟ್’ನಲ್ಲಿ ಸೆಣೆಸಾಡಲಿದ್ದು ಅಲ್ಲಿ ವಿಜೇತವಾದ ತಂಡಗಳು ಪ್ರಶಸ್ತಿಗಾಗಿ ಫೈನಲ್ ನಲ್ಲಿ ಪೈಪೋಟಿ ನಡೆಸಲಿವೆ. ಇದೇ ರೀತಿಯ ಸ್ವರೂಪವನ್ನು ಹಿಂದೆ 1992 ರ ಕ್ರಿಕೆಟ್ ವಿಶ್ವ ಕಪ್ನಲ್ಲಿ ಬಳಸಿಕೊಳ್ಳಲಾಗಿತ್ತು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top