ಉಪ್ಪಯುತ್ತ ಮಾಹಿತಿ

ಕಾಮಶಾಸ್ತ್ರದ ಪ್ರಕಾರ ಈ ಗುಣಗಳನ್ನು ಇರೋ ಹುಡುಗಿ ಸಿಕ್ಕಿದ್ರೆ ಕಣ್ಣ್ ಮುಚ್ಕೊಂಡು ಮದುವೆಯಾಗಬಹುದಂತೆ

ಕಾಮ ಶಾಸ್ತ್ರ

ವ್ಯಕ್ತಿಯ ಇಡೀ ದೇಹದ ವಿಶ್ಲೇಷಣೆ , ಅವರ ಹಾವ ಭಾವ ಇವುಗಳನ್ನು ಗಾಢ ಅಧ್ಯಯನ ಮಾಡಿ ವ್ಯಕ್ತಿತ್ವಗಳನ್ನು ಸಮೀಕರಿಸಿ ವೈದಿಕ ಸಂಪ್ರದಾಯದ ಕೋನದಲ್ಲಿ ಅಳೆದು
ತೂಗುವುದನ್ನೇ ಕಾಮ ಶಾಸ್ತ್ರ ಎನ್ನುತ್ತಾರೆ.
ಇನ್ನೊಂದು ಗಮನಿಸಿ ಕಾಮ ಶಾಸ್ತ್ರ , ಕಾಮ ಸೂತ್ರ ಎರಡು ಬೇರೆ ಆಯಾಮಗಳು .

 

ಕಾಮನೆ ಎಂದರೆ ಮನಸಿಗೆ ಹಿಡಿಸಿದ್ದು ಬನ್ನಿ ಇನ್ನಷ್ಟು ತಿಳಿಯೋಣ

 

ಕಾಮಶಾಸ್ತ್ರ ವಧು ವರರ ನಡುವಿನ ಬಯಕೆ, ಪ್ರೀತಿ ,ಲೈಂಗಿಕ ಹೊಂದಾಣಿಕೆ ಚಿಹ್ನೆಗಳು ಮತ್ತು ಮದುವೆ ಹೊಂದಾಣಿಕೆ ಲಕ್ಷಣಗಳು ವಿವರಿಸುತ್ತದೆ.

 

ಮದುವೆ ಮಾಡಿಕೊಳ್ಳುವ ಮೊದಲು ಈ ಕೆಳಕಂಡ ಗುಣಗಳು ಹೊಂದಾಣಿಕೆ ಆಗಬೇಕು ಹಾಗು ಮಹಿಳೆಯು ಈ ಗುಣಲಕ್ಷಣಗಳನ್ನು ಹೊಂದಿರಬೇಕು ಎಂದು ಕಾಮಶಾಸ್ತ್ರ ಹೇಳುತ್ತದೆ .

 

೧. ಮಹಿಳೆಯು ಮನೆತನದದ ಗೌರವನ್ನು ಎತ್ತಿಹಿಡಿಯಬೇಕು , ಸಮಾಜದಲ್ಲಿ ಗೌರವಾನ್ವಿತವಾದ ಕುಟುಂಬದಿಂದ ಬಂದಿರುವವಳಾಗಿರಬೇಕು .

೨ .ಅವರು ಬುದ್ಧಿವಂತೆ ಮತ್ತು ಲೌಕಿಕ ಘಟನೆಗಳ ಬಗ್ಗೆ ಜ್ಞಾನ ಹೊಂದಿರಬೇಕು ಏಕೆಂದರೆ ಮನೆಯ ಮಕ್ಕಳ ಶಿಕ್ಷಣದ ಜವಾಬ್ಧಾರಿ ಆಕೆಯ ಮೇಲೆ ಇರುತ್ತದೆ.

 

 

೩. ತನ್ನ ಸುತ್ತಮುತ್ತಲಿನ ಆಗು ಹೋಗುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಾಗು ಒಬ್ಬ ಮಹಿಳೆ ತನ್ನ ಜೀವನದಲ್ಲಿ ಕೆಳ ಮತ್ತು ಮೇಲಿನ ವರ್ಗಗಳ ಜನರ ಜೊತೆ ಸದ್ವರ್ತನೆಯಿಂದ ನಡೆದುಕೊಳ್ಳಬೇಕು.

೪.ಮಹಿಳೆ ತನ್ನ ಧರ್ಮದ ಬಗ್ಗೆ ಗೌರವ ಮತ್ತು ಎಲ್ಲಾ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಗ್ಗಿಕೊಂಡಿರಬೇಕು ಮತ್ತು ತನ್ನ ಸಾಮಾಜಿಕ ಕರ್ತವ್ಯಗಳ ಅರಿವು ಇರಬೇಕು.

 

 

೫.ಯಾವ ಮಹಿಳೆಯ ಮನಸಿನಲ್ಲಿ ಕಲ್ಮಶವಿರುವುದಿಲ್ಲವೋ ಆ ಹೆಣ್ಣು ತನ್ನ ಮನೆಯ ಶ್ರೇಯಸ್ಸಿಗಾಗಿ ದೇವತೆ ಲಕ್ಷ್ಮಿ ಹಾಗೆ ಹಣವನ್ನು ಉಳಿಸುತ್ತಾಳೆ ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೆ ,

ದೇವತೆ ಸರಸ್ವತಿಯಷ್ಟು ಮಾತಿನಲ್ಲಿ ಶುದ್ಧತೆ ಇರುತ್ತದೆ , ದೇವಿ ಪಾರ್ವತಿ ರೀತಿ ಮಕ್ಕಳನ್ನು ಗಂಡನನ್ನು ನೋಡಿಕೊಳ್ಳುತ್ತಾಳೆ.

೬ . ಮನೆಯಲ್ಲಿ ಉತ್ತಮ ಸಲಹೆಗಾರ್ತಿಯಾಗಿ ಮನೆ ಆಳು ಕಾಳುಗಳನ್ನು ಸ್ವಂತ ಮನೆಯವರಂತೆ ನೋಡಿಕೊಳ್ಳುತ್ತಾಳೆ.

೭. ಒಡಹುಟ್ಟಿದವರ ಜೊತೆ ಬೆಳೆದಿದ್ದರೆ ಮಕ್ಕಳು, ಸಂಬಂಧಗಳು ಹಂಚಿಕೆ , ಪ್ರೀತಿ , ರಕ್ಷಣಾ ಗುಣಗಳನ್ನು ಹೊಂದಿರುತ್ತಾರೆ .

 

೮. ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಚೆನ್ನಾಗಿ ಬಲ್ಲ ಮಹಿಳೆಯನ್ನು ಎಲ್ಲರು ಇಷ್ಟ ಪಡುತ್ತಾರೆ.

೯.ತನ್ನ ಹಿರಿಯರ ಬಗ್ಗೆ ಗೌರವ ಕೊಟ್ಟು ಅವರ ಸಲಹೆ ಪಡೆಯುವಂತವಳು ಕುಟುಂಬವನ್ನು ಚೆನ್ನಾಗಿ ನಡೆಸುತ್ತಾಳೆ.

 

೧೦. ಪಾಕಶಾಲೆಯ ಅಡುಗೆ ಕೌಶಲಗಳನ್ನು ಹೊಂದಿರಬೇಕು ಮತ್ತು ಹಸಿದವರಿಗೆ ಅನ್ನ ಹಾಕುವ ಗುಣಗಳನ್ನು ಹೊಂದಿರಬೇಕು .

 

೧೧ .ಕೆಲವು ಕಠಿಣ ನಿರ್ಧಾರಗಳನ್ನು ಕೆಲವು ಭಾರಿ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top