ಧರ್ಮ

2018ರ ಹೊಸ ವರ್ಷ ಯುಗಾದಿ ಮಿಥುನ ಫಲ, ಅಶುಭ ಫಲ ಹಾಗು ಮಿಶ್ರ ಫಲ ನೀಡುತ್ತೆ ತಿಳ್ಕೊಳ್ಳಿ

ಮಾರ್ಚ್ ಹದಿನೆಂಟನೇ ತಾರೀಖು ಹಿಂದೂಗಳಿಗೆ ಹೊಸ ವರ್ಷ ಅಂದರೆ ಯುಗಾದಿ ಹಬ್ಬ ಸೂರ್ಯ ಮತ್ತು ಶನಿ ರಾಜ ಮತ್ತು ಮಂತ್ರಿಯಾಗಲ್ಲಿದ್ದಾರೆ ಈ ವರ್ಷ.

 

 

ಮಾರ್ಚ್ ಹದಿನೆಂಟು ತಾರೀಖು ರವಿವಾರ ಶುಕ್ಲಪಕ್ಷ, ಉತ್ತರ ಭಾದ್ರಪದ ನಕ್ಷತ್ರ , ಚೈತ್ರ ಮಾಸ ,ಉತ್ತರಾಯಣ ವಿಳಂಬಿ ವಿರೋಧಿ ಕೃತ 2075 ವಿಕ್ರಮ ಸಂವತ್ಸರ ಇರುವುದು. ಇದೇ ತಿಂಗಳು ಹದಿನೆಂಟನೇ ತಾರೀಖು ಮಾರ್ಚ್ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತಿದೆ. ಈ ವರ್ಷದ ಹೆಸರು ವಿರೋಧಿ ಕೃತ ಸಂವತ್ಸರ.

ಗ್ರಂಥಗಳ ಪ್ರಕಾರ ಅದರಲ್ಲಿ ಹೇಗೆ ಬರೆದಿದ್ದಾರೆ ಎಂದರೆ ಯಾವ ದಿನ ಸೃಷ್ಟಿಯ ಕಾಲ ಚಕ್ರ ಪ್ರಥಮ, ದೇವರು ಅವತರಿಸಿದ ಆ ದಿನವೇ ಚೈತ್ರ ಶುದ್ಧಿ ಭಾನುವಾರವಾಗಿದ್ದು, ಈಗ ಬರುತ್ತಿರುವ ಸಂವತ್ಸರ 2075 ಕೂಡ ಅತ್ಯಂತ ಭಾಗ್ಯಶಾಲಿ ವರ್ಷವಾಗಿದೆ. ಯಾಕೆಂದರೆ ಈ ವರ್ಷವೂ ಸಹ ಚೈತ್ರ ಶುಕ್ಲ, ಪ್ರತಿಪದ ಭಾನುವಾರದ ದಿನವೇ ಬರುತ್ತಿದೆ . ಆದ್ದರಿಂದ ಇದು ಅತ್ಯಂತ ಶುಭ ಪ್ರದವಾಗಿದೆ ಮತ್ತು ಲಾಭದಾಯಕ, ಭಾಗ್ಯ ಶಾಲಿಯಾಗಿದೆ. ರಾಜ ಸೂರ್ಯ ದೇವನಾಗಿದ್ದಾನೆ ಶನಿಯು ಮಂತ್ರಿಯಾಗಲಿದ್ದಾನೆ, ಸಸ್ಯಾಧಿಪತಿ ಕುಜ, ಮೇಘಾಧಿಪತಿ ಶುಕ್ರ, ಧನಾಧಿಪತಿ ರವಿ, ಸೇನಾಧಿಪತಿ ಶುಕ್ರ ,ರಾಸಾಧಿಪತಿ ಗುರು,ನಿರಾಸಾಧಿಪತಿ ಚಂದ್ರನಾಗುತ್ತಾನೆ.

 

 

ಚೈತ್ರ ಮಾಸದಲ್ಲಿ ಅನೇಕ ವ್ರತ ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ .ಹದಿನೆಂಟನೇ ತಾರೀಖು ಮಾರ್ಚ್ ಭಾನುವಾರ ಚೈತ್ರ ನವರಾತ್ರಿಯ ಕೂಡ ಶುಭಾರಂಭವಾಗಲಿದೆ. ಇದರ ನಂತರ ಚೈತ್ರ ಮಾಸದ, ಶುಕ್ಲಪಕ್ಷದ ,ನವಮಿ ತಿಥಿಯ ದಿನ ರಾಮನವಮಿಯೂ ಸಹ ಇದೆ. ಇನ್ನು ಈ ಯುಗಾದಿ ಸಂವತ್ಸರವು, ಹೊಸ ವರ್ಷವೂ ಮಿಥುನ ರಾಶಿ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ.

 

 

ಮಿಥುನ (MITHUNA)

ಈ ಸಂಪೂರ್ಣ ವರ್ಷವೂ ಎಲ್ಲಾ ಕೆಲಸಗಳಲ್ಲೂ ನಿಮಗೆ ಯಶಸ್ಸನ್ನು ತಂದುಕೊಡುವುದು. ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಹೆಚ್ಚಿನ ಯಶಸ್ಸಿನಿಂದ ನಿಮ್ಮ ಆತ್ಮ ವಿಶ್ವಾಸವು ಇನ್ನೂ ಹೆಚ್ಚಾಗಲಿದೆ . ಆದಾಯದಲ್ಲಿ ವೃದ್ಧಿಯಾಗುವುದು. ಯಾವುದೋ ಒಂದು ದೊಡ್ಡ ಕಾರ್ಯವನ್ನು ಸಹ ನೀವು ಮಾಡಲಿದ್ದೀರಿ, ನೀವು ಯಾರಿಗಾದರೂ ಬಡವರಿಗೆ ಅಕ್ಕಿಯನ್ನು ಮತ್ತು ಬೇಳೆಯನ್ನು ದಾನ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top