ಸಮಾಚಾರ

ತನ್ನ ತಂದೆಯ ವಿರುದ್ಧವೇ ಕೆಂಡಾಮಂಡಲವಾದ ಗೂಂಡಾ ರೌಡಿ ನಲಪಾಡ್!

ಬಹುಕೋಟಿ ಉದ್ಯಮಿಯ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ನ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದ್ದು ಅರ್ಜಿಯನ್ನು ವಜಾಗೊಳಿಸಿ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್‌ ತಿರಸ್ಕರಿಸಿದೆ. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನಂತರ ತೀರ್ಪು ಕಾಯ್ದಿರಿಸಿದ್ದ ಏಕಸದಸ್ಯ ಪೀಠ ಇಂದು ತೀರ್ಪನ್ನು ಪ್ರಕಟಿಸಿದೆ.

 

 

ಜಾಮೀನು ಸಿಗದೇ ಕಂಗೆಟ್ಟು ಹೋಗಿರುವ ನಳಪಾಡ್ ಹುಚ್ಚಿಡಿದಂತೆ ಆಡುತ್ತಿದ್ದು ಜೈಲಿನಲ್ಲಿಯೇ ಚೀರಾಡಿದ್ದಾನೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ,, ಈ ಮದ್ಯೆ ತಮ್ಮ ತಂದೆಯ ವಿರುದ್ಧವೇ ಕೂಗಾಡಿರುವ ನಲಪಾಡ್ “ನಮ್ಮ ತಂದೆಯ ರಾಜಕೀಯ ಜೀವನ ಚೆನ್ನಾಗಿರಲಿ ಅಂತ ನನ್ನನ್ನೇಕೆ ಬಲಿಪಶುವನ್ನಾಗಿ ಮಾಡುತ್ತಿದ್ದೀರಿ.. ನಮ್ಮ ತಂದೆ ತಂದೆ ಪ್ರಭಾವಿ ಆಗಿರುವ ಕಾರಣದಿಂದಲೇ ನನಗೆ ಬೇಲ್ ಸಿಗುತ್ತಿಲ್ಲ. ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ನನಗೆ ಜಾಮೀನು ಸಿಗುತ್ತಿತ್ತು,ನಾನು ಜೈಲಿಗೆ ಬಂದು ಇಷ್ಟು ದಿನ ಆಯ್ತು. ಆದರೆ ಒಂದು ದಿನವೂ ಕೂಡ ನನ್ನನ್ನು ನೋಡಲು ನೀನು ಬಂದಿಲ್ಲ.  ನನಗೆ ಜಾಮೀನು ಸಿಗಲಿ ಆಮೇಲೆ ಮಾಡ್ತೀನಿ” ಎಂತೆಲ್ಲಾ ಬಾಯಿ ಬಡ್ಕೊಂಡನಂತೆ.

ಕಳೆದ ತಿಂಗಳು ಫೆಬ್ರವರಿ 17 ರಂದು ಹಲ್ಲೆಗೆ ಒಳಗಾಗಿದ್ದ ವಿದ್ವತ್ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ. ಪ್ರಕರಣ ಸಂಭವಿಸಿದ ನಂತರ ನಾಪತ್ತೆಯಾಗಿದ್ದ ನಲಪಾಡ್ ನಂತರದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು.

 

 

ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ವಿಡಿಯೋ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿದ್ದು ಆರೋಪಿ ಒಬ್ಬ ಪ್ರಭಾವಿ ವ್ಯಕ್ತಿಯ ಮಗ ಆಗಿರುವುದರಿಂದ ಈಗ ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಡಲಾಗಿದೆ.. ನಲಪಾಡ್‌ ಪ್ರಭಾವಿ ವ್ಯಕ್ತಿಯ ಮಗ ಎನ್ನುವುದಕ್ಕೆ ವಿದ್ವತ್‌ನ ಮೆಡಿಕಲ್ ರಿಪೋರ್ಟ್ ಪಡೆದುಕೊಂಡಿರುವುದೇ ನಿದರ್ಶನವಾಗಿದೆ.. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಜಾಮೀನು ಕೊಡುವುದು ಸೂಕ್ತವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top