ದೇವರು

300 ವರ್ಷಗಳಷ್ಟು ಹಳೆಯದಾದ ಈ ಲಕ್ಷ್ಮೀ ದೇವಿ ದೇವಾಲಯದಲ್ಲಿ ಮನಸಿನ ಆಸೆ ಬೇಡಿಕೊಂಡು ಹರಕೆ ಕಟ್ಟಿದರೆ ಅಂದುಕೊಂಡ ಕೆಲಸ ಆಗುತ್ತದೆ ಎಂಬ ನಂಬಿಕೆ ಇದೆ

300 ವರ್ಷಗಳಷ್ಟು ಹಳೆಯದಾದ ಲಕ್ಷ್ಮೀ ದೇವಿಗೆ ಬಲಿ ಕೊಡುವ  ವಿಸ್ಮಯವಾದ ದೇವಾಲಯ ನಮ್ಮ ಕರ್ನಾಟಕದಲ್ಲಿಯೇ ನೆಲೆಸಿದೆ.

 

ಲಕ್ಷ್ಮೀ ದೇವಿಗೆ ಬಲಿಕೊಡುವ ಪದ್ಧತಿ ಇರುವ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ, ವಿವಿಧ ಸಂಪ್ರದಾಯಗಳ ತಾಣ ನಮ್ಮ ಕರ್ನಾಟಕ ರಾಜ್ಯ. ಇಂತಹ ವಿವಿಧ ಆಚರಣೆಗಳನ್ನು  ಆಚರಿಸುವ ವಿವಿಧ ಪ್ರದೇಶಗಳು ನಮ್ಮ ರಾಜ್ಯದಲ್ಲಿ ಹಲವಾರು ಕ್ಷೇತ್ರಗಳಿವೆ.

 

 

ನಾವು ಸಾಮಾನ್ಯವಾಗಿ  ಶ್ರೀ ಮಹಾಲಕ್ಷ್ಮೀ ದೇವಿಗೆ ಶ್ರದ್ಧೆ , ಭಕ್ತಿಯಿಂದ ಹೂವು, ಹಣ್ಣು ,ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ  ಇಟ್ಟು ಪೂಜೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ನಾವು ಹೇಳುತ್ತಿರುವ ಈ ಕ್ಷೇತ್ರವು 300 ವರ್ಷಗಳಷ್ಟು ಪುರಾತನವಾದದ್ದು.

ಶ್ರೀ  ಮಹಾಲಕ್ಷ್ಮೀ ದೇವಿಗೆ ಬಲಿಯನ್ನು ಕೊಟ್ಟು , ಮಾಂಸವನ್ನು ತಯಾರಿಸಿ, ನೈವೇದ್ಯ ಇಟ್ಟು ನಂತರ ಮಾಂಸಾಹಾರದ ಊಟ ಬಡಿಸುತ್ತಾರೆ. ಈ ಮಹಿಮಾನ್ವಿತ ಕ್ಷೇತ್ರ ಇರುವುದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಳಲಿ  ಎಂಬ ಗ್ರಾಮದಲ್ಲಿ. ಶ್ರೀ ಮಳಲಿ ಲಕ್ಷ್ಮೀ ದೇವಿ ಎಂಬ ದೇವಾಲಯವಿದೆ.

 

 

ಇಲ್ಲಿ ದೇವಾಲಯದ ಸ್ವಲ್ಪ ದೂರದಲ್ಲಿ ಬಲಿಯನ್ನು ಕೊಟ್ಟು ನೈವೇದ್ಯವನ್ನು ತಂದು ಸಮರ್ಪಿಸಿ, ನಂತರ ದೇವಿಗೆ ಹರಕೆ ಹೊತ್ತ ಭಕ್ತಾದಿಗಳು ಈ ರೀತಿ ಹರಕೆ ಹೊತ್ತ ಭಕ್ತಾದಿಗಳು ಈ ರೀತಿ ಹರಕೆ ನೆರವೇರಿಸುವುದು ಸಾಮಾನ್ಯವಾಗಿದೆ. ಈ ದೇವಿಯನ್ನು ಸ್ಥಳೀಯರು ಮಳಲಿ ಘಡ್ದಮ್ಮ,  ಮಳಲಿಯಮ್ಮ ಅಂತಲೂ ಕರೆಯುತ್ತಾರೆ.

ಮಂಗಳವಾರ ಮತ್ತು ಶುಕ್ರವಾರ ಅತ್ಯಂತ ಮಂಗಳಕರವಾದ ದಿನವೆಂದು ವಾರದಲ್ಲಿ   ಆ ಎರಡು  ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

 

 

ಬೆಂಗಳೂರಿನಿಂದ 175 ಕಿಲೋ ಮೀಟರ್ , ಹೊಳೆ ನರಸೀಪುರದಿಂದ  ಹದಿನೆಂಟು ಕಿಲೋಮೀಟರ್, ಹಾಸನದಿಂದ 28 ಕಿಲೋಮೀಟರ್ ದೂರ ಇದೆ. ನೀವು ಒಂದು ಸಾರಿ ಇಡೀ ಕ್ಷೇತ್ರಕ್ಕೆ ಬೇಡಿ ನೀಡಿ ದೇವಿ ಕೃಪೆಗೆ  ಪಾತ್ರರಾಗಿ ಭರ್ಜರಿಯಾಗಿ ಊಟ ಮಾಡಿ ಬನ್ನಿ. ಶ್ರೀ ಮಳಲಿ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸಲಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top