ಅರೋಗ್ಯ

ಜಾಜಿ ಮಲ್ಲಿಗೆ ಬರಿ ಪೂಜೆಗೆ ಅಲ್ಲ ಅದರ ಔಷಧಿಯ ಗುಣಗಳ ಬಗ್ಗೆ ತಿಳಿಯಿರಿ ..

ಜಾಜಿ ಮಲ್ಲಿಗೆ ಎಂದ ಕೂಡಲೇ ಮಹಿಳೆಯರ ಮನಸ್ಸು ಮುದಗೊಳ್ಳುವುದು. ಅದರ ಸುಂಗಂಧಕ್ಕೆ ಮನ ಅರಳುವುದು. ಮನೆಯಂಗಳದಲ್ಲಿ, ತೋಟದಲ್ಲಿ ಸುಲಭವಾಗಿ ಬೆಳೆಯುವ ಬೆಳೆಯುವ ಈ ಬಳ್ಳಿಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

 

ಔಷಧೀಯ ಗುಣಗಳು:
೧) ಮೊಲೆ ಹಾಲೂಡಿಸುವುದನ್ನು ಬಿಡಿಸಲು: ಜಾಜಿ ಮಲ್ಲಿಗೆ ಹೂವನ್ನು ಅರೆದು ಸ್ತನಗಳಿಗೆ ಲೇಪಿಸಿದ್ದಲ್ಲಿ ಹಾಲು ಇಂಗುತ್ತದೆ.

 

Image result for mallige

 

೨) ಕಜ್ಜಿ ತುರಿ: ಮಕ್ಕಳಲ್ಲಿ ಕಜ್ಜಿ, ತುರಿಯ ತೊಂದರೆಗಳಿರುವಾಗ ಜಾಜಿ ಹೂವಿನಿಂದ ಅಥವಾ ಎಲೆಯ ರಸದಿಂದ ತಯಾರಿಸಿದ ತೈಲವನ್ನು ಲೇಪಿಸಬೇಕು.

 

೩) ಬಾಯಿಹುಣ್ಣು: ಜಾಜಿ ಮಲ್ಲಿಗೆ ಎಲೆಯನ್ನು ಅಗಿದು ತಿನ್ನುವುದರಿಂದ ಬಾಯಿಹುಣ್ಣು ದೂರವಾಗುತ್ತದೆ.

 

Image result for mallige

 

೪) ತಲೆಯಲ್ಲಿ ಹುಳುಕಡ್ಡಿ ನಾಣ್ಯಾಕಾರದಲ್ಲಿ ಕೂದಲು ಉದರುತ್ತಿದ್ದಲ್ಲಿ ಜಾಜಿಯ ಎಲೆಯ ರಸ ಆ ಭಾಗಕ್ಕೆ ಹಚ್ಚಬೇಕು.

 

೫) ಗಾಯಗಳಾಗಿರುವಾಗ ಜಾಜಿ ಎಲೆಯ ರಸ ಅಥವಾ ಜಾಜಿ ಎಲೆ ಮತ್ತು ಹೂವಿನಿಂದ ತಯಾರಿಸಿದ ಎಣ್ಣೆಯನ್ನು ಹಚ್ಚಬೇಕು.

 

೬) ಮುಟ್ಟು ಅನಿಯಮಿತವಾಗಿದ್ದರೆ ಜಾಜಿ ಎಲೆಯ ರಸವನ್ನು ಒಂದು ಚಿಟಿಕೆ ಕಾಲು ಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬೇಕು.

Image result for mallige

 

೭) ಕಣ್ಣುರಿ ಉಂಟಾದಾಗ ಜಾಜಿ ಹೂವಿನ ರಸದಲ್ಲಿ ಸ್ವಚ್ಛವಾದ ಬಿಳಿಯ ಬಟ್ಟೆಯನ್ನು ನೆನೆಸಿ, ಆ ಬಟ್ಟೆಯನ್ನು ಕಣ್ಣಿನ ಮೇಲೆ ಕೆಲ ಹೊತ್ತು ಹಾಕಿಕೊಳ್ಳುವುದರಿಂದ ಉರಿ ಕಡಿಮೆ ಆಗುತ್ತದೆ.

 

೮) ಜಾಜಿಯ ಎಲೆಯನ್ನು ಪ್ರತಿದಿದ್ನ ಅಗೆದು ತಿನ್ನುತ್ತಿದ್ದಲ್ಲಿ ವಸಡಿನಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.

 

೯) ಸುಟ್ಟ ಗಾಯಗಳಿಗೆ ಜಾಜಿ ಎಲೆಯಿಂದ ತಯಾರಿಸಿದ ತುಪ್ಪ ಅಥವಾ ಎಣ್ಣೆಯನ್ನು ಲೇಪಿಸಬೇಕು.

 

೧೦) ಧೀರ್ಘ ಕಾಲಿನ ಜ್ವರದಿಂದ ನರಳುತ್ತಿದ್ದಲ್ಲಿ ಜಾಜಿ ಬೇರಿನ ಕಷಾಯವನ್ನು ಕುಡಿಯಲು ಕೊಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top