ಅರೋಗ್ಯ

ಉಪಯುಕ್ತ ಮಾಹಿತಿ-ನೇರಳೆ ಹಣ್ಣಿನ ಉಪಯೋಗಗಳು

ಸಂಶೋಧನೆಗಳ ಪ್ರಕಾರ, ನೇರಳೆ ಹಣ್ಣಿನಲ್ಲಿ ಕ್ಯಾನ್ಸರನ್ನು ತಡೆಗಟ್ಟಬಲ್ಲ ಅಂಶಗಳು ಹೇರಳವಾಗಿವೆ ಎಂದು ಸಂಶೋದಕರು ಹೇಳಿದ್ದಾರೆ.

 

 

ನೇರಳೆ ಉಪಯೋಗಗಳು :

*ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ ಹಾಗೂ ‘ಸಿ’ ಜೀವಸತ್ವಗಳು ಸಮೃದ್ಧವಾಗಿರುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆಗಳೂ ಬಲಿಷ್ಠಗೊಳ್ಳುತ್ತವೆ.

 

 

*ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡಲು ಉಪಯೋಗವಾಗುತ್ತದೆ.

 

 

*ಮಧುಮೇಹಕ್ಕೆ ನೇರಳೆಹಣ್ಣು ರಾಮಬಾಣ. ಇದರ ಬೀಜಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ಕಡಿಮೆಗೊಳಿಸಬಹುದು.

 

 

*ನೇರಳೆಯ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಗುಣವಾಗುತ್ತವೆ.
ರಕ್ತಹೀನತೆ ಕಾಯಿಲೆಗೆ ಒಳ್ಳೆಯ ಔಷಧಿ ನೇರಳೆ ಹಣ್ಣು.

 

 

*ನೇರಳೆಯಲ್ಲಿ ಶಕ್ತಿಶಾಲಿ ಆಯಂಟಿಆಕ್ಸಿಡೆಂಟ್ಸ್ ಇರುವುದರಿಂದ ಹೃದ್ರೋಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು.

 

 

*ನೇರಳೆ ಎಲೆ, ತೊಗಟೆ, ಬೀಜಗಳನ್ನು ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ಬಳಸಲಾಗುತ್ತದೆ.

 

*ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ.

*ನೇರಳೆ ಹಣ್ಣು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ.

*ಕ್ಯಾನ್ಸರ್ ಬರದಂತೆ ಮಾಡುವಲ್ಲಿ ನೇರಳೆ ಹಣ್ಣು ಮುಖ್ಯ ಪಾತ್ರವಹಿಸುತ್ತದೆ.

*ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

*ನೇರಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿರ್ಮೂಲನೆ ಆಗುತ್ತದೆ. ಹಲ್ಲುಗಳು ಗಟ್ಟಿಗೊಳ್ಳುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top