ತಿಂಡಿ ತೀರ್ಥ

ಉತ್ತರ ಕರ್ನಾಟಕದ ಬೇಡಿಕೆಯ ರುಚಿ ರುಚಿಯಾದ ಬದನೇಕಾಯಿ ಎಣಗಾಯಿ ಪಲ್ಯ ಮಾಡುವ ವಿಧಾನವನ್ನು ನೋಡಿ ,ಮಾಡಿ ,ತಿನ್ನಿ….

ಬೇಕಾಗುವ ಸಾಮಗ್ರಿಗಳು.

ಚಿಕ್ಕ ಬದನೇಕಾಯಿ ೫-೬
ಈರುಳ್ಳಿ
ಎಣ್ಣೆ
ಅರಿಶಿನ
ಉಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಟೊಮೇಟೊ
ಖಾರದ ಪುಡಿ
ಶೇಂಗಾ ಪುಡಿ ೪-೫ ಟೇಬಲ್ ಚಮಚ (ಕಡಲೇಕಾಯಿ ಬೀಜದ ಪುಡಿ)
ಕೊತ್ತಂಬರಿ ಸೊಪ್ಪು ಸ್ವಲ್ಪ

 

 

ಮಾಡುವ ವಿಧಾನ

೧/೨ ಈರುಳ್ಳಿ ಯನ್ನು ಚಿಕ್ಕದಾಗಿ ಮತ್ತು ಇನ್ನು ಅರ್ಧ ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿಕೊಳ್ಳಿ.

ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಮೇಲಿನ ತೊಟ್ಟು ತೆಗೆದು, ಮೊದಲು ಅರ್ಧ ನಂತರ ಇನ್ನರ್ದ ಭಾಗಗಳನ್ನಾಗಿ ಮಾಡಿ. (ಪೂರ್ತಿಯಾಗಿ ಹೆಚ್ಚದೆ, ಅದರೊಳಗಡೆ ಮಸಾಲೆಯನ್ನು ತುಂಬುವಂತೆ ಕಟ್ ಮಾಡಿ ಕೊಳ್ಳಿ.) ಸೂಚನೆ: ಹೆಚ್ಚಿದ ಬದನೆಕಾಯಿಯನ್ನು ನೀರಿನಲ್ಲಿ ಇಡಿ, ಕಪ್ಪಾಗದೆ ಇರುವುದಕ್ಕೆ.

 

 

ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಗೆ ಚಿಕ್ಕದಾಗಿ ಹೆಚ್ಚಿಕೊಂಡ ಟೊಮೇಟೊ, ಕಡಲೆಬೀಜದ ಪುಡಿ, ಉಪ್ಪು, ಖಾರದ ಪುಡಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಹಾಕಿ ಚೆನ್ನಾಗಿ ಕಲಸಿಡಿ. ಇದನ್ನು ಬದನೆಕಾಯಿಯಲ್ಲಿ ತುಂಬಿಡಿ.

ಒಂದು ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ, ಕಾದ ನಂತರ ಅದಕ್ಕೆ ಸಾಸಿವೆ, ಅರಿಶಿನ ಹಾಗು ಉದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.

ಈಗ ಮಸಾಲೆ ತುಂಬಿದ ಬದನೆಕಾಯಿಯನ್ನು ಹಾಕಿ, ಮೇಲೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಲು ಬಿಡಿ.

ಬೆಂದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಬದನೇಕಾಯಿ ಎಣಗಾಯಿ ಪಲ್ಯ ಸವಿಯಲು ಸಿದ್ದ. ಇದನ್ನು ಜೋಳದ ರೊಟ್ಟಿಯ ಜೊತೆ ತಿನ್ನಿರಿ. ಅದರ ಸವಿಯನ್ನು ಸವಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top