ದೇವರು

ಮಹಾಶಿವನಿಗೆ ಹೇಗೆ ಪೂಜೆ ಮಾಡಿದರೆ ಮನೆಗೆ ಬಹಳ ಒಳ್ಳೆಯದು , ಪೂಜಾ ಪರಿಕರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ತಿಳ್ಕೊಳ್ಳಿ

ಮಹಾಶಿವನಿಗೆ ಹೇಗೆ ಪೂಜೆ ಮಾಡಿದರೆ ಜನ್ಮ ಜನ್ಮದ ಪುಣ್ಯ ಸಿಗುತ್ತದೆ.

 

 

ಪ್ರತಿ ಸೋಮವಾರ ಮಹಾ ಶಿವನನ್ನು ಭಕ್ತಿ,ಶ್ರದ್ಧೆಯಿಂದ ಪೂಜಿಸುತ್ತೇವೆ, ಶಿವನಿಗೆ ತಾಮ್ರದ ಚೊಂಬಿನಲ್ಲಿ ನೀರನ್ನು ತುಂಬಿ ಅಭಿಷೇಕ ಮಾಡಿದರೆ ಆ ಶಂಕರ ನಮ್ಮ ಇಷ್ಟಾರ್ಥವನ್ನು ಪೂರೈಸುತ್ತಾರೆ.ಆದರೆ ಶಿವನ ಪೂಜೆಯನ್ನು ಮಾಡುವಾಗ ಮಾತ್ರ ಕೆಲವು ನಿಯಮಗಳನ್ನು ಖಚಿತವಾಗಿ ಪಾಲಿಸಬೇಕು. ಅದು ಏನು ಎಂಬುದನ್ನು  ಈಗ ನಾವು ತಿಳಿಯೋಣ.

ಪತ್ರೆ:- ಶಿವನಿಗೆ ಬಿಲ್ವ ಪತ್ರೆಯನ್ನು ಸಮರ್ಪಿಸುವುದು ತುಂಬಾ ಮುಖ್ಯವಾದದ್ದು.  ಮೂರು ಎಲೆಗಳು ಇರುವ ಈ ಬಿಲ್ವಪತ್ರೆ ಶಿವನ ಮೂರು ಕಣ್ಣುಗಳು ಎಂದು  ಅರ್ಥ. ಆದರೆ ಈ ಪತ್ರೆಗಳನ್ನು ಮರದಿಂದ ತೆಗೆದುಕೊಳ್ಳುವಾಗ ತುಂಬಾ ಜಾಗ್ರತೆಯನ್ನು ವಹಿಸಬೇಕು.

ಬಿಲ್ವಪತ್ರೆಯನ್ನು ಸೋಮವಾರ,ಅಮಾವಾಸ್ಯೆ,ಮಕರ ಸಂಕ್ರಾಂತಿ, ಹುಣ್ಣಿಮೆ,ಅಷ್ಠಮಿ, ನವಮಿ, ಈ ದಿನಗಳಲ್ಲಿ ಮರದಿಂದ ಬೇರೆ ಮಾಡಬಾರದು(ಅಂದರೆ ಕೀಳಬಾರದು) .ಹಾಗೆಯೇ ಒಣಗಿ ಹೋಗಿರುವ ಪತ್ರೆಯನ್ನು ದೇವರಿಗೆ ಸಮರ್ಪಿಸಬಾರದು.ಅಷ್ಟೇ ಅಲ್ಲದೆ ಪತ್ರೆಯನ್ನು ಶುಭ್ರವಾದ ನೀರಿನಿಂದ ತೊಳೆದ ನಂತರವಷ್ಟೇ ದೇವರಿಗೆ ಸಮರ್ಪಿಸಬೇಕು.

 

 

ಗಂಧ:- ಶಿವಲಿಂಗಕ್ಕೆ ಎಂದಿಗೂ ಸಹ ಕುಂಕುಮವನ್ನು ಸಮರ್ಪಿಸಬಾರದು.ಕೇವಲ ಗಂಧ ಮತ್ತು ವಿಭೂತಿಯನ್ನು ಮಾತ್ರವೇ ಉಪಯೋಗಿಸಬೇಕು. ಏಕೆಂದರೆ ಶಿವ ದೇವರು ತುಂಬಾ ಏಕಾಗ್ರತೆಯಿಂದ ಧ್ಯಾನ ಮಾಡುತ್ತಿರುತ್ತಾರೆ.

ಕೆಂಪಾಗಿರುವ ಈ  ಕುಂಕುಮವನ್ನು ಸಮರ್ಪಿಸುವುದರಿಂದ,ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅದ್ದರಿಂದಲೇ ಕುಂಕುಮದ ಬದಲಿಗೆ ತಂಪನ್ನು ನೀಡುವ ಗಂಧವನ್ನು ಉಪಯೋಗಿಸಬೇಕು.

ಹಣ್ಣು:- ಶಿವನಿಗೆ ಎಲ್ಲಾ ಹಣ್ಣನ್ನು ಸಮರ್ಪಿಸಬಹುದು. ಆದರಲ್ಲೂ  ಬೇಲದ ಹಣ್ಣು ಅಂದರೆ ಶಿವನಿಗೆ ತುಂಬಾ ಇಷ್ಟ.ಇದನ್ನು ಸಮರ್ಪಿಸುವುದರಿಂದ ನಮಗೆ ದೀರ್ಘ ಆಯುಷ್ಯ ಸಿಗುತ್ತದೆ.

ಹೂ:-ಸಂಪಿಗೆ ಹೂವನ್ನು ಎಂತಹ ಪರಿಸ್ಥಿತಿಯಲ್ಲಿಯೂ  ಪೂಜೆಯಲ್ಲಿ ಉಪಯೋಗಿಸಬಾರದು.ಶಿವನು ಈ ಹೂವಿಗೆ ಶಾಪವನ್ನು ಕೊಟ್ಟಿದ್ದಾರೆ ಎಂದು ಪುರಾಣಗಳು  ಹೇಳುತ್ತವೆ.

 

 

ಸೃಷ್ಟಿಕರ್ತ ಬ್ರಹ್ಮನು ಸಂಪಿಗೆ ಹೂವನ್ನು ಒಂದು ಸಾರಿ ತಪ್ಪು ಸಾಕ್ಷಿ ಹೇಳು ಎಂದು ಕೇಳುತ್ತಾರೆ.ಅದು ಶಿವನಿಗೆ ಗೊತ್ತಾದ ನಂತರ,ಬ್ರಹ್ಮ ಮತ್ತು ಸಂಪಿಗೆ ಹೂವಿಗೆ ಪೂಜೆಗೆ ಅರ್ಹತೆ ಇಲ್ಲದಂತೆ ಶಿವನು ಶಾಪವನ್ನು ಕೊಡುತ್ತಾರೆ.

ಶಿವನಿಗೆ ಉಕ್ಕಿನ ಮೇಜಿನ ಮೇಲೆ ಇಟ್ಟು ಅಭಿಷೇಕ ಮಾಡಬಾರದು. ಒಂದು ವೇಳೆ ಮನೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡರೆ ಜಲಧಾರೆ ಖಂಡಿತವಾಗಿಯೂ ಇರಬೇಕು.ಜಲಧಾರೆ ಇಲ್ಲದ ಶಿವಲಿಂಗವನ್ನು ಇಟ್ಟುಕೊಂಡಲ್ಲಿ ನಕಾರಾತ್ಮಕ ಶಕ್ತಿ ಮನೆಯಲ್ಲಿ ಉತ್ಪತ್ತಿಯಾಗುತ್ತದೆ.

ಶಿವನಿಗೆ ಪೂಜೆ ಮಾಡುವ ಮೊದಲು ವಿನಾಯಕನಿಗೆ ಪೂಜೆ ಮಾಡಬೇಕು ಅಂದರೆ ನೀರು,ಹಾಲು,ಅಂತದನ್ನು ಮೊದಲಿಗೆ   ಗಣೇಶನಿಗೆ ಸಮರ್ಪಿಸಿದ ನಂತರ ಬೇರೆ ದೇವರಿಗೆ ಸಮರ್ಪಿಸಬೇಕು.

 

 

ಶಿವ ಪುರಾಣದ ಪ್ರಕಾರ ಶಿವನು ತುಳಸಿ ಪತಿಯಾದ ಜಲಂಧರನನ್ನು ಕೊಂದರು. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಶಿವನಿಗೆ ತುಳಸಿ ಪತ್ರೆಯನ್ನು ಸಮರ್ಪಿಸಬಾರದು.

ಸೂರ್ಯೋದಯದ ಸಮಯದಲ್ಲಿ ಈಗ ಹೇಳಿರುವ ನಿಯಮವನ್ನು ಅನುಸರಿಸಿ ಶಿವನಿಗೆ ಶ್ರದ್ದೆ ಭಕ್ತಿಯಿಂದ ಪೂಜೆಯನ್ನು ಮಾಡಿದರೆ ಮನಸ್ಸಿನಲ್ಲಿರುವ ಇಷ್ಟಾರ್ಥಗಳು ಬೇಗನೇ ಈಡೇರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top