ತಿಂಡಿ ತೀರ್ಥ

ಪಾನಿ ಪೂರಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ ?ಪ್ರತಿ ಒಬ್ಬರು ಇಷ್ಟ ಪಟ್ಟು ತಿನ್ನೋ ಪಾನಿ ಪೂರಿ ಯಾಕೆ ಹೊರಗಡೆ ಹೋಗಿ ತಿಂತಿರಾ ನೀವೇ ಮನೆಯಲ್ಲಿ ಮಾಡ್ಕೋದು ತಿನ್ನಬಹುದಲ್ಲಾ!!ಹೇಗೆ ಪಾನಿ ಪೂರಿ ಮಾಡದು ಅಂತ ಇಲ್ಲಿ ನೋಡಿ …

ಬೇಕಾಗುವ ಸಾಮನು:

ಬೆಲ್ಲ, ಹುಣಸೆ, ಖರ್ಜುರ, ಜೀರಿಗೆ, ಜಲಜೀರ ಪುಡಿ, ಬೆಳ್ಳುಳ್ಳಿ, ಹಸಿರು ಮೆಣಸು, ಕೊತ್ತಂಬರಿ ಸೊಪ್ಪು, ಕಾಳು ಮೆಣಸು, ಲಿಂಬೆ, ಉಪ್ಪು, ಕಾರೆಟ್, ನೀರುಳ್ಳಿ, ಆಲೂ ಗೆಡ್ಡೆ, ಬಟಾಣಿ, ಅಂಗಡಿಯಿಂದ ತಂದ ಪೂರಿ.

 

 

ಸ್ವೀಟ್ ಮಾಡುವುದು ಹೇಗೆ?

೧ ಕಪ್ ಬೆಲ್ಲ ಹಾಗು ೧/೨ ಕಪ್ ಹುಣಸೆ, ಸ್ವಲ್ಪ ಖರ್ಜುರ ಮೂರನ್ನು ಸೇರಿಸಿ, ತಕ್ಕ ಮಟ್ಟಿಗೆ ನೀರು ಹಾಕಿ ಕುದಿಸಿ. ಅದನ್ನು ಸೋಸಬೇಕು.
೨. ಪಾನಿ ಮಾಡುವುದು ಹೇಗೆ?
1 ೧/2 ಚಮಚ ಜಲಜೀರ ಪುಡಿ( ಮನೆಯಲ್ಲಿ ತಯರಿಸಿದ್ದಾದರೆ ಉತ್ತಮ)
1 ಚಮಚ ಜೀರಿಗೆ
೪ ಹಸಿರು ಮೆಣಸು
೧ ಕೊತ್ತಂಬರಿ ಸೊಪ್ಪು
೫ ಬೆಳ್ಳುಳ್ಳಿ
೧ ಚಮಚ ನಿಂಬೆ ರಸ
೧/೨ ಚಮಚ ಕಾಳು ಮೆಣಸು
ಉಪ್ಪು ರುಚಿಗೆ ತಕ್ಕಷ್ಟು.

ಈ ಮೇಲಿನವುಗಳನ್ನು mixerನಲ್ಲಿ ತಿರುವಿ, ೭-೮ ಕಪ್ ನೀರು ಸೇರಿಸಿ, ಬಡಿಸುವ ೩ ಗಂಟೆ ಮುಂಚಿತವಾಗಿ ತಯಾರಿಸಬೇಕು.

೨ ದೊಡ್ಡ ಗಾತ್ರದ ಆಲೂ ಗೆಡ್ಡೆ ಹಾಗು ೧ ಕಪ್ ಬಟಾಣಿ – ಇವುಗಳನ್ನು cookerನಲ್ಲಿ ಬೇಯಿಸುವುದು.

೨ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚಿಕೊಂಡಿರಬೇಕು.

ಬೇಯಿಸಿರುವ ಆಲೂ ಗೆಡ್ಡೆ ಹಾಗು ಬಟಾಣಿಯನ್ನು ಪೋರಿಯನ್ನು ಸ್ವಲ್ಪ ಒಡೆದು ಅದರಲ್ಲಿ ಹಾಕಿ ಹೆಚ್ಚಿದ ಈರುಳ್ಳಿ , ಕೊತ್ತಂಬರಿ ಮತ್ತು ಸ್ವಲ್ಪ ಚಾಟ್ ಮಸಾಲಾ ಮತ್ತು ಉಪ್ಪುನ್ನು ಹಾಕಿ ಪಾನಿಯನ್ನು ಬೆರೆಸಿ ತಿನ್ನಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top