ತಿಂಡಿ ತೀರ್ಥ

ಸಿಹಿ ಹಾಗೂ ಉಪ್ಪಿನ ಬೆಟ್ಟದ ನೆಲ್ಲಿಕಾಯಿ ಅಡಕೆಯನ್ನು ತಯಾರಿಸುವ ವಿಧಾನ

ಬೆಟ್ಟದ ನೆಲ್ಲಿಕಾಯಿ ವೈವಿಧ್ಯಗಳು!!!!

ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿ ‘ಸಿ’ ಜೀವಸತ್ವದ ಆಗರವಾಗಿದ್ದು ವಿಟಮಿನ್ ಸಿ ಕೊರತೆ ನೀಗಿಸಲು ಇದರ ಸೇವನೆ ಅಗತ್ಯವಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ “ವಿಟಮಿನ್ ಸಿ” ಮಹತ್ತರ ಪಾತ್ರವಹಿಸುತ್ತದೆ. 150 ಗ್ರಾಂ ನೆಲ್ಲಿಕಾಯಿಯಲ್ಲಿ 69% ವಿಟಮಿನ್ ಸಿ, ಹಾಗೂ 1 ಗ್ರಾಂ ಪ್ರೋಟೀನ್ಸ್ 9% ಎ ಜೀವಸತ್ವ, 4% ಕ್ಯಾಲ್ಸಿಯಂ, 3% ಕಬ್ಬಿಣಾಂಶ 2.5% ಮೆಗ್ನೀಷಿಯಂ ಹಾಗೂ 4% ಪೊಟೇಷಿಯಂ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.

88822-660x344

ಬೆಟ್ಟದ ನೆಲ್ಲಿಕಾಯಿಯಿಂದ ಅನೇಕ ತಿನಿಸುಗಳನ್ನು ಮಾಡಬಹುದು ಅದರಲ್ಲಿ ಮುಖ್ಯವಾಗಿ ನೆಲ್ಲಿ ಅಡಕೆ  ನೆನಿಸಿಕೊಂಡರೆ ಬಯಲೆಲ್ಲ ನೀರು.

ಬನ್ನಿ ಸಿಹಿ ಹಾಗೂ ಉಪ್ಪಿನ ನೆಲ್ಲಿ ಅಡಕೆಯನ್ನು ತಯಾರಿಸುವ ವಿಧಾನವನ್ನು ತಿಳಿಯೋಣ

ನೆಲ್ಲಿ ಅಡಕೆ:

ಇದರಲ್ಲಿ 2 ವಿಧವಿದ್ದು ಸಿಹಿ ಹಾಗೂ ಉಪ್ಪಿನ ನೆಲ್ಲಿ ಅಡಕೆಯನ್ನು ತಯಾರಿಸಬಹುದು.

ಉಪ್ಪಿನ ನೆಲ್ಲಿ ಅಡಕೆ ಮಾಡುವ ವಿಧಾನ:ಬೆಟ್ಟದ ನೆಲ್ಲಿಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ ಅದಕ್ಕೆ ಸ್ವಲ್ಪ ಸೈಂದವ ಲವಣ, ಓಂ ಕಾಳಿನ ಪುಡಿ ಒಣಶುಂಠಿ ಪುಡಿ, ಕರಿಮೆಣಸಿನಕಾಳಿನ ಪುಡಿ ಹಾಗೂ ಸ್ವಲ್ಪ ಇಂಗಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲೆಸಿ ಒಂದು ರಾತ್ರಿ ನೆನಸಿಡಿ. ನಂತರ ಅದನ್ನು ನೆರಳಿನಲ್ಲಿ ಒಣಗಿಸಿ ತೆಗೆದಿಟ್ಟುಕೊಂಡರೆ ಊಟದ ನಂತರ ದಿನಾಲೂ ಎರಡು ಮೂರು ತುಂಡುಗಳನ್ನು ಅಡಕೆ ತರಹ ಸೇವಿಸಬಹುದು. ಇದು ದೇಹದಲ್ಲಿ ಸಿ ಜೀವಸತ್ವದ ಕೊರತೆಯನ್ನು ನೀಗಿಸುತ್ತದ್ದಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಿಹಿನೆಲ್ಲಿ ಅಡಕೆ ಮಾಡುವ ವಿಧಾನ:

ಬೇಕಾಗುವ ಸಾಮಗ್ರಿ: ನೆಲ್ಲಿ ಕಾಯಿ ಅರ್ಧ ಕೆಜಿ ಸಕ್ಕರೆ ಕಾಲು ಕೆಜಿ ಏಲಕ್ಕಿ 2-3.

ಮಾಡುವ ವಿಧಾನ: ನೆಲ್ಲಿಕಾಯಿಯನ್ನು ಸಣ್ಣ ಹೋಳುಗಳಾಗಿ ಮಾಡಿಟ್ಟುಕೊಳ್ಳಿರಿ, ಇದಕ್ಕೆ ಸಕ್ಕರೆಯನ್ನು ಹಾಕಿ ಇದು ನೆಲ್ಲಿ ರಸದೊಂದಿಗೆ ಬೆರೆತು ನೀರಾಗಿ ಅದರಲ್ಲೇ ಚೆನ್ನಾಗಿ ಕುದ್ದು ಕುದಿಯಲು ಪ್ರಾರಂಭವಾದಾಗ 10 ನಿಮಿಷ ಕುದಿಸಿರಿ ನಂತರ ಏಲಕ್ಕಿ ಪುಡಿ ಹಾಕಿ ತಣ್ಣಗಾಗಲು ಬಿಡಿ ನಂತರ ಬಸಿದು ಹೋಳುಗಳನ್ನು ಬಿಸಿಲಿನಲ್ಲಿ 4-5 ದಿನ ಚೆನ್ನಗಿ ಒಣಗಿಸಿದರೆ ನೆಲ್ಲಿ ಸಿಹಿ ಅಡಕೆ ರೆಡಿ ವಿಟಮಿನ್ ಸಿ ಕೊರತೆಯಿದ್ದಾಗ ಮಕ್ಕಳಿಗೆ ಇದನ್ನು ನೀಡಬಹುದು ಎಷ್ಟು ದಿನ ಇಟ್ಟರು ಕೆಡುವುದಿಲ್ಲ!

ಪ್ರಕಾಶ್ ಕೆ.ನಾಡಿಗ್, ಶಿವಮೊಗ್ಗ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top