ಜಾಗೃತಿ

ಈ ವಿಚಾರದ ಕುರಿತು ನಾಡಿನ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಿಚ್ಚ ಸುದೀಪ್!

ಈ ವಿಚಾರದ ಕುರಿತು ನಾಡಿನ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಿಚ್ಚ ಸುದೀಪ್!

 

 

ನಟ ಕಿಚ್ಚ ಸುದೀಪ್ ಕೇವಲ ಸಿನಿಮಾ ಕುರಿತಾಗಿ ಮಾತ್ರವಲ್ಲದೆ ಆಗಾಗ್ಗೆ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆ. ಆಗಾಗ್ಗೆ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುವ ಸುದೀಪ್ ಈ ಹಿಂದೆ ಆಧಾರ್ ಏಡ್ಸ್ ಕಾಯಿಲೆ,ಕಾರ್ಡ್ ಮಹತ್ವ ಮತ್ತು ಆಟೋ ಡ್ರೈವರ್ ಗಳು ಅಡ್ಡಾದಿಡ್ಡಿಯಾಗಿ ಓಡಿಸಬಾರದು ಅನ್ನುವ ಸಂದೇಶ ಸಾರಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು. ಈಗ ಅಂಥದ್ದೇ ಮತ್ತೊಂದು ಕೆಲಸದಲ್ಲಿ ಭಾಗಿಯಾಗುತ್ತಿದ್ದರೆ.

 

 

 

ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಸುದೀಪ್ ಮುಂದಾಗಿದ್ದು ಸರ್ಕಾರೇತರ ಸಂಸ್ಥೆಯೊಂದು ನಡೆಸಿರುವ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಯುವಕರಲ್ಲಿ ಮತದಾನದ ಬಗ್ಗೆ ಇರುವ ನಿರಾಸಕ್ತಿ, ಕೇರ್ ಲೆಸ್ ಮನೋಭಾವನೆ ಮತ್ತು ಮತದಾನ ಯಾಕೆ ಮಾಡಬೇಕು ಎಂಬುದರ ಕುರಿತು ಮಾತನಾಡಿರುವ ಸುದೀಪ್ “ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರನೇ ನಿರ್ಣಾಯಕ ಇಂದೇ ಮತದಾರರಾಗಿ ನೊಂದಾಯಿಸಿಕೊಳ್ಳಿ” ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ಈ ವಿಡಿಯೋ ಈಗ ಯೂಟ್ಯೂಬ್’ನಲ್ಲಿ ಲಭ್ಯವಾಗಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ.

 

 

“18 ವರ್ಷ ವಯಸ್ಸಾದ ಮೇಲೆ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವೋಟ್ ಮಾಡುವ ಅಧಿಕಾರವಿರುತ್ತದೆ ಆದರೆ ನಮ್ಮ ಯುವಜನರು ತುಂಬಾ ಕಡಿಮೆ ಸಂಖ್ಯೆಯಲ್ಲಿ ವೋಟರ್ ಐಡಿಗಳನ್ನ ಮಾಡ್ಸಿದ್ದಾರೆ. ತುಂಬಾ ಜನ ವೋಟರ್ ಐಡಿ ಹೊಂದಿಲ್ಲ, ಹೊಂದಿರುವವರು ಕೂಡ ವೋಟ್ ಮಾಡೋಕೆ ಆಸಕ್ತಿ ಹೊಂದಿಲ್ಲ ಮತದಾನದ ಬಗ್ಗೆ ಕೇರ್ ಲೆಸ್ ಮನೋಭಾವನೆಯನ್ನು ಹೊಂದಿದ್ದಾರೆ. ಈ ರೀತಿ ಮಾಡಬಾರದು, ನಾವು ವೋಟ್ ಮಾಡೋರೇ ಮುಂದೆ ನಮ್ಮನ್ನಅಳೋದು ಹಾಗಾಗಿ ನಮ್ಮನ್ನ ಆಳೋರು ಹೇಗಿರಬೇಕು ಎಂಬುದನ್ನ ನಾವೇ ಡಿಸೈಡ್ ಮಾಡಬೇಕು. ಹಾಗಾಗಿ ತಪ್ಪದೆ ಪ್ರತಿಯೊಬ್ಬರೂ ಕೂಡ ತಪ್ಪದೇ ವೋಟ್ ಮಾಡಿ ಮತ್ತು ಸಾದ್ಯವಾದರೆ ಕಡ್ಡಾಯ ಮತದಾನದ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಿ. ಮತದಾನದ ದಿನವನ್ನು ರಜಾದಿನದ ರೀತಿಯಲ್ಲಿ ಕಾಣಬೇಡಿ ಹತ್ತು ನಿಮಿಷ ಬಿಡುವು ಮಾಡಿಕೊಂಡು ನಿಮ್ಮ ಅಧಿಕಾರವನ್ನು ಚಲಾಯಿಸಿ” ಎಂದು ಸುದೀಪ್ ವಿಡಿಯೋದಲ್ಲಿ ಹೇಳಿದ್ದಾರೆ.

ಸುದೀಪ್ ಅವ್ರು ಮತದಾನದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಇಲ್ಲಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top