ಸಮಾಚಾರ

ಸೌತ್ ಆಫ್ರಿಕಾ ರಸ್ತೆ ಬೀದಿಯಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ-ಧವನ್: ವಿಡಿಯೋ ವೈರಲ್.

ಸೌತ್ ಆಫ್ರಿಕಾ ರಸ್ತೆ ಬೀದಿಯಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ-ಧವನ್: ವಿಡಿಯೋ ವೈರಲ್.

 

 

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರರು ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಸೇರಿಕೊಂಡಿದ್ದು ಪತ್ನಿ ಅನುಷ್ಕಾ ಜತೆ ಹೊಸ ವರ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸುತ್ತಿದ್ದಾರೆ. ತಮ್ಮ ಪತ್ನಿಯೊಂದಿಗೆ ಅಲ್ಲಿನ ಮಾಲ್ ವೊಂದಕ್ಕೆ ತೆರಳಿ ಶಾಪಿಂಗ್ ಮಾಡಿದ್ದಾರೆ.

 

 

ನಂತರ ಸಹ ಆಟಗಾರ ಶಿಖರ್ ಧವನ್ ಜೊತೆ ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡಿದ್ದು ರೋಡ್ ಸೈಡಿನಲ್ಲೇ ಕುಣಿದು ಕುಪ್ಪಳಿಸಿದರು. ಕೊಹ್ಲಿ ಧವನ್ ಸ್ಟೆಪ್ ಹಾಕುತ್ತಿದ್ದಾರೆ ಅಲ್ಲಿನ ಜನ ಅವರ ಕುಣಿತವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ವಿರಾಟ್‌ ಮತ್ತು ಧವನ್‌ ಡ್ಯಾನ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಧವನ್ ಕೊಹ್ಲಿ ಡ್ಯಾನ್ಸ್ ವಿಡಿಯೋ ಇಲ್ಲಿ ನೋಡಿ.

 

 

ದಕ್ಷಿಣ ಆಫ್ರಿಕಾದಲ್ಲಿ ಭಾರತ 3 ಟೆಸ್ಟ್,6 ಏಕದಿನ ಹಾಗೂ 3 ಟಿ -20 ಸರಣಿ ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಜನವರಿ 6ಕ್ಕೆ ಪ್ರಾರಂಭವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top