ಮನೋರಂಜನೆ

ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಗಿಫ್ಟ್: ಒಂದೇ ಚಿತ್ರದಲ್ಲಿ ಜಗ್ಗೇಶ್ -ಗಣೇಶ್ ನಟನೆ.

ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಗಿಫ್ಟ್: ಒಂದೇ ಚಿತ್ರದಲ್ಲಿ ಜಗ್ಗೇಶ್ -ಗಣೇಶ್ ನಟನೆ.

 

 

ಸ್ಯಾಂಡಲ್’ವುಡ್ ನಲ್ಲಿ ಈಗ ಬಹುತಾರಾಗಣದ ಚಿತ್ರಗಳು ಜೋರಾಗಿ ಸದ್ದು ಮಾಡುತ್ತಿವೆ. ಮುನಿರತ್ನ ಕುರುಕ್ಷೇತ್ರ, ದಿ ವಿಲನ್, ಟಗರು ಸೇರಿದಂತೆ ಅನೇಕ ಚಿತ್ರಗಳಲ್ಲಿ ಸ್ಟಾರ್ ನಟರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಮಲ್ಟಿ ಸ್ಟಾರ್ ಕಾಸ್ಟ್ ಚಿತ್ರಗಳ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರಿಕೊಳ್ಳುತ್ತಿದ್ದು ಈ ಚಿತ್ರದಲ್ಲಿ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನವರಸನಾಯಕ ಜಗ್ಗೇಶ್ ಒಟ್ಟಾಗಿ ಅಭಿನಯಿಸುತ್ತಿದ್ದಾರೆ.

 

 

ಕೆಲವು ದಿನಗಳ ಹಿಂದೆ ಜಗ್ಗೇಶ್ ಅವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಒಬ್ಬ ಸ್ಟಾರ್ ನಟನ ಜೊತೆ ಪರದೆ ಹಂಚಿಕೊಳ್ಳುತ್ತಿದ್ದೇನೆ, ಆದಷ್ಟು ಬೇಗ ಈ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದು ಬರೆದುಕೊಂಡಿದ್ದರು ಈಗ ಆ ಸುದ್ದಿ ಬಹಿರಂಗವಾಗಿದ್ದು ತಾವು ನಟಿಸುತ್ತೇನೆ ಎಂದು ಹೇಳಿಕೊಂಡಿದ್ದ ಆ ಸ್ಟಾರ್ ಗಣೇಶ್ ಎಂದು ತಿಳಿದುಬಂದಿದೆ. ಕಾಮಿಡಿ ಕಲಾವಿದರಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಎತ್ತರಕ್ಕೆ ಬೆಳೆದ ಈ ಇಬ್ಬರು ನಟರು ಒಂದೇ ಚಿತ್ರದಲ್ಲಿ ಸೇರುತ್ತಿರುವುದು ಅಭಿಮಾನಿಗಳಿಗಂತೂ ಹೊಸ ವರ್ಷಕ್ಕೆ ದೊಡ್ಡ ಗಿಫ್ಟ್ ಸಿಕ್ಕಂತಾಗಿದೆ.

 

 

ಆಪ್ತಮಿತ್ರ, ದೃಶ್ಯ, ಶಿವಲಿಂಗದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪಿ.ವಾಸು ಗಣೇಶ್ ಜಗ್ಗೇಶ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗಣೇಶ್ ರ ಸೂಪರ್ ಹಿಟ್ ಚಿತ್ರವಾದ ‘ಶ್ರಾವಣಿ ಶುಬ್ರಮಣ್ಯ’ ಮತ್ತು ಬಿಡುಗಡೆಗೆ ಸಿದ್ಧವಿರುವ ರಾಜು ಕನ್ನಡ ಮೀಡಿಯಂ ಚಿತ್ರವನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್;ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರಕ್ಕೆ ನಾಯಕಿ, ತಾರಾಗಣ ಮತ್ತು ತಾಂತ್ರಿಕ ವರ್ಗವನ್ನು ಇನ್ನಷ್ಟೇ ಫೈನಲ್ ಮಾಡಬೇಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top