ದೇವರು

ಗೋವಿನ ಬಾಲದಿಂದ ದೃಷ್ಟಿಯನ್ನು ತೆಗೆಯುವುದು ಹೇಗೆ ಗೋವಿನ ಬಾಲದಲ್ಲಿರುವ ಶಕ್ತಿಯ ಮಹತ್ವದ ಬಗ್ಗೆ ಎಲ್ಲರು ತಿಳ್ಕೊಳ್ಳೆಬೇಕು 

ಗೋವಿನ ಬಾಲದಿಂದ ದೃಷ್ಟಿಯನ್ನು ತೆಗೆಯುವುದು ಹೇಗೆ ಗೋವಿನ ಬಾಲದಲ್ಲಿರುವ ಶಕ್ತಿಯ ಮಹತ್ವದ ಬಗ್ಗೆ ಎಲ್ಲರು ತಿಳ್ಕೊಳ್ಳೆಬೇಕು 

ಗೋಮಾತೆಯ ಬಾಲದ ಕೂದಲಿನ ಮಹತ್ವ.

ಪ್ರಕೃತಿಯನ್ನು ಪಶು, ಪ್ರಾಣಿ, ಪಕ್ಷಿಗಳನ್ನು ಆರಾಧಿಸುವ ದೇಶ ನಮ್ಮ ಭಾರತ ದೇಶ.ಹಾಗೆ ಗೋಮಾತೆಯನ್ನು ಪೂಜೆ ಮಾಡುವ ಸಂಪ್ರದಾಯ ಕೂಡ ನಮ್ಮ ಭಾರತದಲ್ಲಿದೆ. ಅದಕ್ಕೆ ನಾವು ಅನಾದಿ ಕಾಲದಿಂದಲೂ ಗೋ ಮಾತೆಯನ್ನು ಸಾಂಪ್ರದಾಯಿಕವಾಗಿ , ಆಚಾರವಾಗಿ ಪೂಜೆ ಮಾಡಿಕೊಂಡು ಬಂದಿದ್ದೇವೆ. ಗೋವಿಗೆ ಕಾಮಧೇನು ಎಂದು ಸಹ ಕರೆಯುವುದುಂಟು.
ಗೋವನ್ನು ಪೂಜಿಸಿ ಅದಕ್ಕೆ ಸೇವಿಸಲು ಆಹಾರವನ್ನು ನೀಡಿ, ನಮಸ್ಕರಿಸಿ, ನಾವು ಪೂಜಿಸುತ್ತೇವೆ.ಇದು ನಾವು ಸನಾತನ ಕಾಲದಿಂದಲೂ ಸಹ ಆಚರಿಸಿಕೊಂಡು ಬಂದಿರುವಂತಹ ಒಂದು ಪದ್ಧತಿಯಾಗಿದೆ. ಸಕಲ ದೇವಾನುದೇವತೆಗಳು ಸಹ ಈ ಕಾಮಧೇನುವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಸಾರಿ ಹೇಳುತ್ತವೆ.

 

ಇನ್ನೂ ಗೋವು ಹಿಂದೂಗಳಿಗೆ ಎಲ್ಲಿಯಾದರೂ ಕಾಣಿಸಿದರೂ ಸಹ ನಮಗೆ ಎಲ್ಲಿಲ್ಲದ ಆನಂದ. ಅಂದರೆ ಗೋವಿನ ಆಗಮನ ಮತ್ತು ಗೋವಿನ ದರ್ಶನ ಎರಡೂ ಕೂಡ ಶುಭ ಸೂಚಕ ಮತ್ತು ಮಂಗಳ ಪ್ರದಾಯಕ ಎಂದು ನಮ್ಮ ಶಾಸ್ತ್ರದಲ್ಲಿ ಹೇಳಿದ್ದಾರೆ. ಹಾಗೆಯೇ ಪಂಡಿತರು ಸಹ ಭಾವಿಸುತ್ತಾರೆ.

 

 

ಅದಕ್ಕೆ ಅದು ಎಲ್ಲೇ ಕಂಡರೂ ಸಹ ನಮಸ್ಕರಿಸುವುದೂ, ಅದರ ಕಾಲು ಮುಟ್ಟಿ ಬೆನ್ನು ಸವರಿ ಪ್ರಾರ್ಥಿಸುವುದು. ನಮಗೇ ಗೊತ್ತಿಲ್ಲದೆ ಮಾಡುತ್ತಾ ಬಂದಿರುವಂತಹ ಪದ್ಧತಿಯಾಗಿದೆ. ನಾವು ಗೊತ್ತಿಲ್ಲದೆ ಈ ರೀತಿ ಮಾಡಿದರೂ ಸಹ ನಮ್ಮ ಸಕಲ ಇಷ್ಟಾರ್ಥಗಳನ್ನು ಗೋಮಾತೆ ನೆರವೇರಿಸಿ ಕೊಡುತ್ತಾಳೆ. ಹಾಗೆ ಗೋವಿಗೆ ಆಹಾರವನ್ನು ನೀಡುತ್ತಾ.. ನಮ್ಮ ಇಷ್ಟಾರ್ಥಗಳನ್ನು ಕಿವಿಯಲ್ಲಿ ಹೇಳುತ್ತಿದ್ದರೆ ಸಾಕು. ಅದು ತಕ್ಷಣವೇ ನಮ್ಮ ಇಷ್ಟಾರ್ಥಗಳು ನೆರವೇರುವಂತೆ ಮಾಡುತ್ತದೆ. ಇದು ಕಾಮಧೇನುವಿನ ಎಲ್ಲರಿಗೂ ತಿಳಿದಿರುವ ವಿಷಯವೆ.
ಇಂದು ನಾವು ಗೋವಿನ ಬಾಲದಲ್ಲಿರುವ ಶಕ್ತಿಯ ಬಗ್ಗೆ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳೋಣ…

 

 

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು…. ಗೋಮಾತೆಯ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಅದನ್ನು ಅಂದರೆ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಹೊತ್ತಬೇಕು. ಹೀಗೆ ಮೂರು ಬಾರಿ ಮಾಡಬೇಕು. ಕ್ರಮೇಣ ಆ ನೋವು ಕಡಿಮೆಯಾಗಿ ಉಪಶಮನವಾಗುತ್ತದೆ . ಒಂದು ವೇಳೆ ಇನ್ನೂ ಅಲ್ಪ ಸ್ವಲ್ಪ ನೋವು ಇದೆ ಎಂದರೆ ಎರಡನೇ ದಿನ ಹಾಗೂ ಮೂರನೇ ದಿನ ಹೀಗೆ ಮಾಡಿದಲ್ಲಿ ಎಂತಹದ್ದೇ ನೋವಾಗಿದ್ದರೂ ಸಹ ಕಡಿಮೆಯಾಗುತ್ತದೆ.
ಅಷ್ಟೇ ಅಲ್ಲ ನಾವು ನೋಡಿರಬಹುದು ಕೆಲವು ಸ್ವಾಮೀಜಿಗಳ ಬಳಿಯಲ್ಲಿ ಸಾಧು, ಸಂತರ ಬಳಿಯಲ್ಲಿ ಈ ಗೋವಿನ ಕೂದಲಿನಿಂದ ಮಾಡಿರುವ ದಾರಗಳನ್ನು ಕೈಗಳಿಗೆ ಸುತ್ತಿ ಕೊಂಡಿರುತ್ತಾರೆ. ಆದ್ದರಿಂದ ಅವರ ಬಳಿ ಯಾರೇ ಹೋಗಲಿ ಅವರು ನಮಸ್ಕರಿಸಿದರೆ ಆಶೀರ್ವಾದಕ್ಕೆ ತಲೆಯ ಮೇಲೆ ಅಥವಾ ಬೆನ್ನ ಮೇಲೆ ಕೈ ಇಡುವಾಗ ನಮಗೆ ಗೊತ್ತಿಲ್ಲದಂತೆಯೇ… ಆ ಕೂದಲಿನ ಶಕ್ತಿಯಿಂದ ಆ ಮನುಷ್ಯನಲ್ಲಿ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆದ್ದರಿಂದ ಯಾವುದೇ ರೀತಿಯ ಸಮಸ್ಯೆಗಳಾದರೂ ಸಹ ಬಗೆಹರಿಯುತ್ತವೆ ಹಾಗೆ ನಿವಾರಣೆಯಾಗುತ್ತವೆ.

 

 

ಹಿರಿಯರು ಮಕ್ಕಳಿಗಾಗಲಿ, ಹಿರಿಯರಿಗಾಗಲಿ ಮತ್ತು ಹುಡುಗರಿಗಾಗಲಿ ದೃಷ್ಟಿ ತಗುಲಿದರೆ ಗೋವಿನ ಬಾಲದಿಂದ ದೃಷ್ಟಿಯನ್ನು ತೆಗೆಯುವುದು ನಮ್ಮ ಸಂಪ್ರದಾಯದಲ್ಲಿದೆ. ನಮ್ಮಲ್ಲಿ ಕೆಲವರಿಗೆ ಇದು ಗೊತ್ತಿರಬಹುದು. ಅಷ್ಟೇ ಅಲ್ಲ ಬಾಲದ ಕೂದಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕುಂಕುಮ ಸೇರಿಸಿ ಚಿಕ್ಕ ಯಂತ್ರವೊಂದರಲ್ಲಿ ಹಾಕಿ ಅದನ್ನು ಶರೀರದಲ್ಲಿ ನಾವು ಧರಿಸಿದರೆ ಜನ್ಮದಲ್ಲಿ ಯಾವುದೇ ರೀತಿಯ ದೃಷ್ಟಿ ತಗುಲುವುದಿಲ್ಲ ಎಂದು ಹೇಳುತ್ತಾರೆ ನಮ್ಮ ಹಿರಿಯರು. ಹೀಗೆ ಗೋ ಮಾತೆಯಲ್ಲಿ ಮಾತ್ರವಲ್ಲ ಗೋ ಮಾತೆಯ ಬಾಲದಲ್ಲಿಯೂ ಸಹ ಬಾಲದ ಕೂದಲಿನಲ್ಲಿಯೂ ಸಹ ಬಹಳಷ್ಟು ಶಕ್ತಿ ಅಡಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top