ಭವಿಷ್ಯ

ಡಿಸೆಂಬರ್ 30 : ನಿತ್ಯಭವಿಷ್ಯ ಮತ್ತೆ ಪಂಚಾಂಗ.

ಶನಿವಾರ, ೩೦ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೪೪
ಸೂರ್ಯಾಸ್ತ : ೧೭:೫೯
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ದ್ವಾದಶೀ
ನಕ್ಷತ್ರ : ಕೃತ್ತಿಕ
ಯೋಗ : ಸಾಧ್ಯ
ಪ್ರಥಮ ಕರಣ : ಬವ –
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೧:೫೯ – ೧೨:೪೪
ಅಮೃತಕಾಲ : ೧೮:೨೮ – ೧೯:೫೫
ರಾಹು ಕಾಲ: ೦೯:೩೩ – ೧೦:೫೭
ಗುಳಿಕ ಕಾಲ: ೦೬:೪೪ – ೦೮:೦೯
ಯಮಗಂಡ: ೧೩:೪೬ – ೧೫:೧೧

 

ಮೇಷ (Mesha)

ಇತರರು ಏನು ತಿಳಿದುಕೊಳ್ಳುತ್ತಾರೆ ಎಂದು ಸತ್ಯದ ಹಾದಿಯಿಂದ ವಿಮುಖರಾಗುವುದು ಒಳ್ಳೆಯದಲ್ಲ. ನಿಮಗೆ ಸರಿ ಎನಿಸಿದ್ದನ್ನು ಮಾಡುವ, ಇಲ್ಲವೆ ಹೇಳುವ ಹಕ್ಕು ನಿಮ್ಮದಾಗಿರುತ್ತದೆ. ನಿಮ್ಮ ನಿಲುವಿನಿಂದ ಹಿಂದೆ ಸರಿಯದಿರಿ.

 

ವೃಷಭ (Vrushabha)

ಮಾನಸಿಕವಾಗಿ ಸಣ್ಣಪುಟ್ಟ ಕಿರಿಕಿರಿಗಳು ಕಾಡುವ ಸಾಧ್ಯತೆ. ವಾಹನ ಚಾಲನೆ ವೇಳೆ ರಸ್ತೆಯ ಕಡೆಗೆ ನಿಗಾ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಆಹಾರ-ವಿಹಾರದಲ್ಲಿ ಎಚ್ಚರ. ಕೆಲವರಿಗೆ ಉದರ ಶೂಲೆ ಕಾಡುವ ಸಾಧ್ಯತೆ.

 

ಮಿಥುನ (Mithuna)

ದಿಢೀರನೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚಾಗುವವು. ಹಣಕಾಸಿನ ವಿಚಾರದಲ್ಲಿ ಕೈಗಡ ಪಡೆಯಬೇಕಾಗುವುದು. ನಿಮ್ಮ ಆತ್ಮೀಯ ಸ್ನೇಹಿತರು ಈ ಸಂದರ್ಭದಲ್ಲಿ ಸಹಕಾರ ನೀಡುವರು.

 

ಕರ್ಕ (Karka)

ನಿಮ್ಮ ಕರ್ತವ್ಯಪರತೆ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು. ಸ್ವಾಭಾವಿಕವಾಗಿ ಆ ಕಾರಣದಿಂದ ಆನಂದ ನಿಮ್ಮ ಕೆಲಸದಲ್ಲಿ ಪ್ರಕಟಗೊಳ್ಳುವುದು. ಶತ್ರುಗಳು ಸಹ ನಿಮ್ಮ ವಿಚಾರಧಾರಗೆ ಶರಣಾಗುವರು.

 

ಸಿಂಹ (Simha)

ಕುಟುಂಬದಲ್ಲಿ ಶಾಂತಿಯ ವಾತಾವರಣ. ಸಾಮಾಜಿಕ ಮತ್ತು ರಾಜಕೀಯದಲ್ಲಿ ನಿಮ್ಮ ಪ್ರತಿಷ್ಟೆ ಹೆಚ್ಚಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣವಾಗಿ ಕೈಗೂಡುವುದು. ಆರ್ಥಿಕ ಸ್ಥಿತಿಯಲ್ಲಿ ಅಲ್ಪ ಹಿನ್ನಡೆ ತೋರುವುದು.

 

ಕನ್ಯಾರಾಶಿ (Kanya)

ಸಂಗಾತಿಯೊಂದಿಗೆ ವಿರಸ ಉಂಟಾಗುವ ಸಾಧ್ಯತೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ಮಕ್ಕಳು ನಿಮ್ಮ ಹಿತವಚನವನ್ನು ಪಾಲಿಸದಿರುವುದು ಮನಸ್ಸಿಗೆ ಬೇಸರ ಉಂಟು ಮಾಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ತುಲಾ (Tula)

ದಿಢೀರನೇ ಪ್ರಯಾಣ ಬೆಳೆಸಬೇಕಾಗುವುದು. ಇದರಿಂದ ನಿಮ್ಮ ವೃತ್ತಿರಂಗದಲ್ಲಿ ಒಳಿತಾಗುವುದು. ಸಹೋದರನಿಂದ ಹಣಕಾಸಿನ ನೆರವು ದೊರೆಯುವುದು. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ತಾಳ್ಮೆಯೇ ಇಂದಿನ ಮಂತ್ರವಾಗಿರಲಿ

 

ವೃಶ್ಚಿಕ (Vrushchika)

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವಿರಿ. ಇದರಿಂದ ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ನಾಲ್ಕಾರು ಜನರ ಮುಂದೆ ಗುರುತಿಸಿಕೊಳ್ಳುವಿರಿ. ನಿಮ್ಮ ದೃಷ್ಟಿ ಪತ್ರಿಕಾರಂಗದ ಕಡೆ ವಾಲುವ ಸಾಧ್ಯತೆ ಇದೆ.

 

ಧನು ರಾಶಿ (Dhanu)

ಸಂಕಲ್ಪಿತ ಯೋಜನೆಗಳಿಗೆ ಕೊಂಚ ಅಡೆತಡೆ ಕಂಡುಬರುವುದು. ಆದರೆ ಹಿಂದೆ ಹಮ್ಮಿಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಕೊಂಡು ಹೋಗುವವು. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿ.

 

ಮಕರ (Makara)

ನಿಮ್ಮ ಕಾರ್ಯಯೋಜನೆಯಲ್ಲಿ ಮಹತ್ತರ ಬದಲಾವಣೆ ಕಂಡುಬರುವುದು. ನಿಮ್ಮ ಅನುಭವದ ಹಿನ್ನಲೆಯಲ್ಲಿ ಈಗಿರುವ ಕೆಲಸವನ್ನು ಬಿಡಬೇಕೆಂದು ಯೋಚಿಸುವಿರಿ. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಕುಂಭರಾಶಿ (Kumbha)

ನಿಮ್ಮ ಅದೃಷ್ಟ ನಿಮ್ಮ ಬಾಗಿಲಿಗೆ ಬಂದಿರುವಾಗ ಅದನ್ನು ಹೊರ ತಳ್ಳುವುದು ಸೂಕ್ತವಲ್ಲ. ಬರಬೇಕಾಗಿದ್ದ ಹಣಕಾಸು ನಿಮ್ಮ ಕೈಸೇರುವುದು. ಕುಟುಂಬ ಸದಸ್ಯರ ಭಿನ್ನಾಭಿಪ್ರಾಯ ಬಗೆಹರಿಯುವುದು.

 

ಮೀನರಾಶಿ (Meena)

ಆತ್ಮೀಯರೊಡನೆ ಸಂತೋಷಕೂಟದಲ್ಲಿ ಭಾಗವಹಿಸುವಿರಿ. ಎಲ್ಲರೂ ನಿಮ್ಮನ್ನು ಮುಖಂಡರನ್ನಾಗಿಸಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುವರು. ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುವುದು. ಗುರುವಿನ ಸ್ತೋತ್ರ ಪಠಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top