ಭವಿಷ್ಯ

ನ್ಯಾಯಾಂಗ ನಿಂದನೆ ತಕರಾರು: ಅಂಜನೀಪುತ್ರನಿಗೆ ಎದುರಾಯ್ತು ಮತ್ತೊಂದು ದೊಡ್ಡ ಕಂಟಕ.

ನ್ಯಾಯಾಂಗ ನಿಂದನೆ ತಕರಾರು: ಅಂಜನೀಪುತ್ರನಿಗೆ ಎದುರಾಯ್ತು ಮತ್ತೊಂದು ದೊಡ್ಡ ಕಂಟಕ.

 

 

 

 

ಚಿತ್ರ ಪ್ರದರ್ಶನವನ್ನು ನಿಲ್ಲಿಸಿ ಎಂದು ನೀಡಿದ್ದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಚಿತ್ರ ಪ್ರದರ್ಶನವನ್ನು ಮುಂದುವರಿಸಿದ್ದ ಅಂಜನಿಪುತ್ರ ಚಿತ್ರ ತಂಡಕ್ಕೆ ಮತ್ತೊಂದೂ ದೊಡ್ಡ ಕಂಟಕ ಎದುರಾಗಿದ್ದು, ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಬೆಂಗಳೂರು ಸಿಟಿ ಸಿವಿಲ್​ ಕೋರ್ಟ್​ ಆದೇಶಿಸಿದೆ.

 

 

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನೀಪುತ್ರ ಚಿತ್ರ ಕಳೆದವಾರ ತೆರೆಕಂಡು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಚಿತ್ರಕ್ಕೆ ಕಂಟಕ ಎದುರಾಗಿತ್ತು. ವಕೀಲ ನಾರಾಯಣಸ್ವಾಮಿ ಎಂಬುವವರು ‘ಅಂಜನಿಪುತ್ರ’ ಸಿನಿಮಾದ ಪ್ರದರ್ಶನವನ್ನು ತಡೆಯಬೇಕು ಎಂದು ಜಿ.ನಾರಾಯಣ ಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿ ಮನವಿ ಮಾಡಿರುವುದರಿಂದ ಚಿತ್ರವನ್ನು ಪ್ರದರ್ಶಿಸದಂತೆ ಸಿವಿಲ್ ಕೋರ್ಟ್ ತಡೆ ನೀಡಿದ್ದರು. ಚಿತ್ರದಲ್ಲಿ ಲಾಯರ್ ಗಳ ವಿರುದ್ಧ ಅವಹೇಳನಕಾರಿ ಸಂಭಾಷಣೆ ಇರುವ ಕಾರಣ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು 40ನೇ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಕೋರ್ಟು ಮುಂದಿನ ವಿಚಾರಣೆ ನಡೆಸುವವರೆಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರ್ಟ್ ತಿಳಿಸಿತ್ತು.

ಆದರೆ ಚಿತ್ರತಂಡ ಎಂದಿನಂತೆ ತನ್ನ ಪ್ರದರ್ಶನವನ್ನು ಮುಂದುವರೆಸಿತ್ತು, ಇದರಿಂದ ಕೋಪಗೊಂಡ ನಾರಾಯಣಸ್ವಾಮಿ ” ಈ ಹಿಂದೆಯೆ ಪ್ರದರ್ಶನ ನಿಲ್ಲಿಸುವಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ನ್ಯಾಯಾಲಯದ ಮಾತಿಗೆ ಬೆಲೆ ಕೊಡದೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆದಿದೆ”. ಎಂದು ಚಿತ್ರತಂಡದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ವಕೀಲ ಜಿ. ನಾರಾಯಣಸ್ವಾಮಿ ಮತ್ತೊಮ್ಮೆ ದೂರು ದಾಖಲಿಸಿದ್ದರು.

 

 

ಜಿ ನಾರಾಯಣ ಸ್ವಾಮಿಯವರ ದೂರಿನ ಅನ್ವಯ ಕೋರ್ಟ್ ಆದೇಶವನ್ನು ಜಾರಿಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಿಟಿ ಸಿವಿಲ್ ಕೋರ್ಟ್ ಸೂಚನೆ ನೀಡಿದ್ದು, ಕೂಡಲೇ ರಾಜ್ಯದಾದ್ಯಂತ ಚಿತ್ರ ಸ್ಥಗಿತಕ್ಕೆ ಕ್ರಮಕೈಗೊಳ್ಳುವಂತೆ ಡಿಜಿ, ಐಜಿಗೆ ಆದೇಶಿಸಲಾಗಿದೆ. ಪ್ರದರ್ಶನಕ್ಕೆ ಕೋರ್ಟ್ ತಡೆ ನೀಡಿದ್ದರೂ ನ್ಯಾಯಾಲಯದ ಆದೇಶವನ್ನು ಪಾಲಿಸದ ನಿರ್ಮಾಪಕರ ಮೇಲೆ ಕೂಡ ಕೋರ್ಟ್ ಗರಂ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top