ಇತರೆ

ರಾವಣನ ಸಾವಿಗೆ ನಿಜವಾದ ಕಾರಣ ಏನು ಗೊತ್ತಾ ? ರಾವಣ ಬಗೆಗಿನ ಈ ಕೆಲವು ಸತ್ಯಗಳು ಆಶ್ಚರ್ಯ ಹುಟ್ಟಿಸದೆ ಇರಲ್ಲ

ರಾವಣನ ಸಾವಿಗೆ ನಿಜವಾದ ಕಾರಣ ಏನು ಗೊತ್ತಾ ? ರಾವಣ ಬಗೆಗಿನ ಈ ಕೆಲವು ಸತ್ಯಗಳು ಆಶ್ಚರ್ಯ

ಹುಟ್ಟಿಸದೆ ಇರಲ್ಲ

 

 

ರಾವಣನ ಬಗ್ಗೆ ತಿಳಿಯದ ವಿಷಯಗಳು :
ಈತನ್ನು ಯುದ್ಧ ಭೂಮಿಗೆ ಬಂದರೆ ಸಾಕು ದೇವತೆಗಳೆ ಹೆದರುತಿದ್ದರಂತೆ ಅವನೇ ಲಂಕೆಯ ರಾಜ ರಾವಣ.ಸಾಮಾನ್ಯವಾಗಿ ರಾವಣ ಒಬ್ಬ ರಾಕ್ಷಸ ಎಂದು ನಮಗೆಲ್ಲ ಗೊತ್ತು ಆದರೆ ಅವನ್ನು ಪೂರ್ಣವಾಗಿ ರಾಕ್ಷಸನಲ್ಲ ಅವನ ಅಪ್ಪ ಒಬ್ಬ ಬ್ರಾಹ್ಮಣ ತಾಯಿ ಒಂದು ರಾಕ್ಷಸ ವಂಶಕ್ಕೆ ಸೇರಿದವರು.ಆದರಿಂದ ರಾವಣನನ್ನು ಬ್ರಾಹ್ಮಣ ವಂಶದಲ್ಲಿ ರಾಕ್ಷಸ ಅಂಶಗಳಿಂದ ಹುಟ್ಟಿದವನ್ನು ಎಂದು ಹೇಳುತ್ತಾರೆ.

ರಾವಣನ ನಿಜವಾದ ಹೆಸರು ದಶಕಂಠ ಅಥವಾ ದಶಗ್ಗ್ರಿವ.ಒಂದು ಸಲ ತನ್ನ ಬಲದಿಂದ ಶಿವನ್ನು ಇರುವಂತ ಕೈಲಾಶ ಪರ್ವತವನ್ನು ತನ್ನ ಎರಡು ಕೈಗಳಿಂದ ಮೇಲೆ ಎತ್ತಲು ಪ್ರಯತ್ನ ಮಾಡಿದನಂತೆ ಅದೇ ಸಮಯದಲ್ಲಿ ತಪ್ಪಸಿನಲ್ಲಿ ಇದ್ದ ಶಿವ ಕೋಪಗೊಂಡು ರಾವಣನ ಮೇಲಿನ ಕೋಪದಿಂದ ತನ್ನ ಕಾಲುಗಳಿಂದ ಕೈಲಾಶ ಪರ್ವತವನ್ನು ತಳ್ಳುತ್ತಾನೆ.ಇದರಿಂದ ರಾವಣ ಕೈಗಳು ಆ ಪರ್ವತದ ಕೆಳಗೆ ಸಿಕ್ಕಿ ಜಜ್ಜಿ ಹೋಗುತ್ತದೆ ,ಆ ನೋವು ತಾಳಲಾರದೆ ರಾವಣ ತುಂಬಾ ದಿನ ಅರಚುತಿದ್ದನಂತೆ ಆಗ ಶಿವ ಸಾಕು ನಿಲ್ಲಿಸು ನಿನ್ನ ಕಿರುಚಾಟ ರಾವಣ ಎಂದು ಹೇಳುತ್ತಾನಂತೆ,ಸಂಸ್ಕೃತ್ದಲ್ಲಿ ರಾವಣ ಎಂದರೆ ಭಯಂಕರ ವಾಗಿ ಶಬ್ದ ಮಾಡುವವನ್ನು .ಹೀಗೆ ದಶಕಂಠನಿಗೆ ರಾವಣ ಎಂದು ಹೆಸರು ಬಂತು.

 

 

ಎಲ್ಲರಿಗೆ ಗೊತ್ತಿರುವುದು ಲಂಕೆಗೆ ರಾಜ ರಾವಣ ಎಂದು ಆದರೆ ಲಂಕೆಯನ್ನು ಕಟ್ಟಿದು ಮತ್ತು ಪರಿಪಾಲನೆ ಮಾಡಿದ್ದು ಕುಬೇರ.
ರಾವಣ ಬ್ರಹ್ಮನಲ್ಲಿ ತುಂಬಾ ವರ್ಷ ತಪಸ್ಸು ಮಾಡಿ ತುಂಬಾ ವರ ಮತ್ತು ಆಯುಧಗಳನ್ನ ವರವಾಗಿ ಪಡೆದನಂತೆ.
ರಾವಣ ತನ್ನ ತಾತನಾದ ಸುಮಲ್ಲಿ ಎಂಬ ರಾಜನನ್ನು ಅವನ ಪಟ್ಟದಿಂದ ಇಳಿಸಿ,ತಾನೇ ಆ ಸೈನ್ಯಕ್ಕೆ ನಾಯಕತ್ವ ವಹಿಸಿದನಂತೆ.
ನಂತರ ಕುಬೇರನ ಬಳಿ ಹೋಗಿ ಲಂಕೆಯನ್ನು ತನಗೆ ಬಿಟ್ಟು ಕೊಡಬೇಕು ಇಲ್ಲವಾದರೆ ,ಯುದ್ದ ಮಾಡುವುದಾಗಿ ಹೇಳಿದಾಗ ಭಯದಿಂದ ಕುಬೇರ ಲಂಕೆಯನ್ನು ರಾವಣನಿಗೆ ಬಿಟ್ಟುಕೊಡುತ್ತಾನೆ.ರಾವಣ ಲಂಕೆಯನ್ನು ತುಂಬಾ ಚೆನ್ನಾಗಿ ಪರಿಪಾಲನೆ ಮಾಡುತ್ತಾ ಇದ್ದನಂತೆ.

ರಾವಣನ ಬಗ್ಗೆ ಮಾತನಾಡುವಾಗ ಅವನ ಬಳಿ ಇದ್ದ ಪುಷ್ಪಕ ವಿಮಾನದ ಬಗ್ಗೆ ಮಾತನಾಡಲ್ಲೆ ಬೇಕು ,ಈ ಪುಷ್ಪಕ ವಿಮಾನ ಚಿನ್ನದಿಂದ ಮಾಡಿದಿರಂತೆ ಮತ್ತು ಆ ತಾಂತ್ರಿಕತೆ ಇನ್ನು ಯಾರಿದ ಕೂಡ ಕಂಡು ಇಡಿಯಲು ಸಾಧ್ಯವಾಗಲಿಲ್ಲ ,ಈ ಪುಷ್ಪಕ ವಿಮಾನ ಆಕಾಶದ ರೀತಿ ನೀತಿಗೆ ತಕ್ಕಂತೆ ಅದರ ರೂಪವನ್ನು ಬದಲಿಸುತ್ತಿತಂತೆ.

ರಾವಣ ಜೋತಿಶ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬಹಳ ಪರಿಣಿತಿ ಹೊಂದಿದನ್ನು .ರಾವಣ ಶಿವನ ಪರಮಭಕ್ತನಂತೆ ಈ ಕಾರಣದಿಂದ ಸಾಕಷ್ಟು ಶಿವ ದೇವಾಲಯಗಳನ್ನು ಕಟ್ಟಿಸಿದನಂತೆ,ಶ್ರೀಲಂಕಾದಲ್ಲಿ ಕೊನೇಶ್ವರ್ ಎಂಬ ಶಿವನ ದೇವಾಲಯ ಒಂದು ಇದೆ ,ಆ ದೇವಾಲಯವನ್ನು ರಾವಣನೇ ಕಟ್ಟಿಸಿದ್ದಾನೆ ಮತ್ತು ಆ ದೇವಾಲಯಕ್ಕೆ ರಾವಣ ತನ್ನ ತಾಯಿಯ ಜೊತೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದನೆಂದು ಚಾರಿತ್ರಿಕ ಆಧಾರಗಳಿವೆ.

 

 

ರಾವಣ ಸಾಯುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳು ಇದೆ ಎಂದು ಚರಿತ್ರೆ ಹೇಳುತ್ತದೆ.
ರಾವಣ ತನ್ನ ಬಲದಿಂದ ರಾಕ್ಷಸರನ್ನು ,ಮನುಷ್ಯರನ್ನು ಮತ್ತು ದೇವತೆಗಳನ್ನ ಸೋಲಿಸಿ ತನ್ನ ಚಕ್ರವತಿ ಎಂದು ಪ್ರಕಟಣೆ ಮಾಡಿಕೊಳ್ಳುತ್ತಾನಂತೆ,ಇದರಿಂದ ರಾವಣನಿಗೆ ಅಹಂಕಾರದ ಜೊತೆ ಹೆಂಗಸರ ಮೇಲೆ ಆಸೆ ಕೂಡ ಹೆಚ್ಚಾಗುತ್ತೆ,ಚೆನ್ನಾಗಿ ಕಂಡ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳುವುದು ಅವರು ಒಪ್ಪದಿದ್ದರೆ ಬಲವಂತವಾಗಿ ಬಲಾತ್ಕಾರ ಮಾಡುತಿದ್ದನಂತೆ.
ಆ ಕಾಲದಲ್ಲಿ ದೇವಾವತಿ ಎಂಬ ಸನ್ಯಾಸಿನಿ ಇದ್ದಳಂತೆ ಆಕೆ ವಿಷ್ಣುವನ್ನು ಮದುವೆ ಮಾಡಿಕೊಳ್ಳಬೇಕು ಎಂದು ತಪಸ್ಸು ಮಾಡಿಕೊಂಡು ಒಂದು ಆಶ್ರಮದಲ್ಲಿ ಇರುತ್ತಾಳಂತೆ ,ಇಲ್ಲಿಗೆ ಬಂದ ರಾವಣ ಅವಳ ಅಂದವನ್ನು ನೋಡಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳುತ್ತಾನೆ ಅದಕ್ಕೆ ದೇವಾವತಿ ಒಪ್ಪುವುದಿಲ್ಲ ,ಇದರಿಂದ ಕೋಪಗೊಂಡ ರಾವಣ ಅವರನ್ನು ಬಲಾತ್ಕಾರ ಮಾಡಲು ಪ್ರಯತ್ನಮಾಡುತ್ತಾನೆ ಇದರಿಂದ ದೇವಾವತಿ ರಾವಣಗೆ ನಿನ್ನ ಸಾವಿಗೆ ನಾನೇ ಕಾರಣವಾಗುತ್ತೆನೆ ಎಂದು ಶಪಿಸಿ ಅಗ್ನಿಪ್ರವೇಶ ಮಾಡಿ ಮರಣ ಹೊಂದುತ್ತಾಳೆ .
ನಂತರ ದೇವಾವತಿ ಸೀತಾದೇವಿಯ ರೂಪದಲ್ಲಿ ಜನ್ಮ ಪಡೆದು ವಿಷ್ಣುವಿನ ಅವತಾರವಾದ ಶ್ರೀ ಮಹಾ ವಿಷ್ಣುವನ್ನು ಮದುವೆ ಮಾಡಿಕೊಂಡು ರಾವಣನ ಅಂತ್ಯಕ್ಕೆ ಕಾರಣವಾಗುತ್ತಾನೆ .
ಇನ್ನೊಂದು ಕಾರಣ ರಾವಣ ರಂಭ ಬಳಿ ಹೋಗಿ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ,ಅದಕ್ಕೆ ರಂಭ ತಾನು ಕುಬೇರನ ಮಗನನ್ನು ಮದುವೆ ಆಗುವವಳು ರಾವಣನಿಗೆ ಸೊಸೆ ಸಮಾನ ಎಂದು ಎಷ್ಟು ಹೇಳಿದರು ರಾವಣ ಕೇಳುವುದಿಲ್ಲ ಇದರಿಂದ ಕೋಪಗೊಂಡ ರಂಭ ನೀನು ಹೆಂಗಸರನ್ನು ಬಲವಂತವಾಗಿ ಕಿರುಕುಳ ಕೊಟ್ಟ ಮರು ಕ್ಷಣವೇ ನಿನ್ನ ಅಂತ್ಯ ಎಂದು ಶಾಪ ಕೊಡುತ್ತಾಳಂತೆ.
ಈ ಕಾರಣ ದಿನದಿಂದ ರಾವಣ ಸೀತಾದೇವಿಯನ್ನು ಅಪಹರಣ ಮಾಡಿದರು ಅವಳನ್ನು ಮುಟ್ಟಲಿಲ್ಲವಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top