ಭವಿಷ್ಯ

ವಾರ ಭವಿಷ್ಯ ಡಿಸೆಂಬರ್ 25ನೇ ತಾರೀಖಿನಿಂದ  31ನೇ ತಾರೀಖಿನವರೆಗೆ.

ವಾರ ಭವಿಷ್ಯ ಡಿಸೆಂಬರ್ 25ನೇ ತಾರೀಖಿನಂದು  31ನೇ ತಾರೀಖಿನವರೆಗೆ.

 

ಮೇಷ (Mesha)

 

ಈ ವಾರ ಆದಾಯ ಮತ್ತು ವೆಚ್ಚ ಎರಡು ಕ್ರಮವಾಗಿ ಹಿಡಿತದಲ್ಲಿ ಇರುತ್ತದೆ. ಹೊಸ ವಾಹನ ಹಾಗೂ ವಸ್ತ್ರಾಭರಣಗಳ ಖರೀದಿಸುವ ಸಾಧ್ಯತೆ ಇದೆ. ಬಂಧು ಮಿತ್ರರ ಸಹಾಯದಿಂದ ಹೆಚ್ಚಿನ ಅವಕಾಶಗಳನ್ನು ಹೊಂದುವಿರಿ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ತೋರಿ ಬಂದರು. ಅಭಿವೃದ್ಧಿದಾಯಕ ಬೆಳವಣಿಗೆಯಿಂದ ಮನಸ್ಸಿಗೆ ಹರ್ಷ ತರುವುದು.ದೈವಾನುಗ್ರಹದಿಂದ ಈ ವಾರ ಹೆಚ್ಚಿನ ಸೌಕರ್ಯಗಳನ್ನು ಹೊಂದುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಹಾಗೂ ಗೌರವ ಪಡೆಯುವಿರಿ. ಶ್ರೀಸಿದ್ಧಿ ವಿನಾಯಕನನ್ನು ಪೂಜಿಸಿದರೆ ನಿಮ್ಮ ಮನಸ್ಸಿನ ಆಸೆಗಳು ಈಡೇರುತ್ತವೆ.ನಿಮಗೆ ಶುಭ ದಿನಗಳು ಸೋಮವಾರ , ಮಂಗಳವಾರ ಹಾಗೂ ಗುರುವಾರ.

 

ವೃಷಭ (Vrushabha)

 

ಈ ವಾರ ಖರ್ಚಿನ ಬಗ್ಗೆ ಹಿಡಿತವಿರಲಿ. ಹಾಗೆ ಸಾಮಾಜಿಕ ಸ್ಥಾನಮಾನ, ವ್ಯವಹಾರ, ಗೌರವಕ್ಕೆ ಪಾತ್ರರಾಗುವಿರಿ. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿದ್ದು. ಆರೋಗ್ಯ  ಸ್ಥಿತಿಗೆ ಹೆಚ್ಚಿನ ಗಮನದ  ಅಗತ್ಯವಿದೆ. ಮನೆಯಲ್ಲಿ ಶುಭ ಹಾಗೂ ಮಂಗಳ ಕಾರ್ಯಗಳ ಚಟುವಟಿಕೆ ತೋರಿಬರುವುದು. ಕಾರ್ಯ ಪ್ರಗತಿಯಲ್ಲಿ ಆಗಾಗ್ಗೆ ತೋರಿ ಬರುತ್ತಿದ್ದ ಅಡ್ಡಿ ಆತಂಕಗಳು ದೂರವಾಗಲಿವೆ. ಸಿಮೆಂಟ್ ವ್ಯಾಪಾರಿಗಳು ಹಾಗೂ ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚಿನ ಅವಕಾಶಗಳು ಒದಗಿ ಬರಲಿದೆ. ನಿಮ್ಮ ಇಷ್ಟದ  ಪ್ರಕಾರ ಎಲ್ಲಾ ಕಾರ್ಯಗಳು ಕೈಗೂಡುವವು. ಶುಭ ದಿನಗಳು ಮಂಗಳವಾರ, ಗುರುವಾರ ಹಾಗೂ ಶನಿವಾರ.

 

ಮಿಥುನ (Mithuna)

 

ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸ ಬಲದಿಂದ, ಶ್ರದ್ಧೆ ಹಾಗೂ ಬುದ್ಧಿ ಬಲದಿಂದ ಯಾವುದೇ ಕೆಲಸಕ್ಕೆ ಚ್ಯುತಿ ಬರುವುದಿಲ್ಲ. ಕಾರ್ಯಕ್ಷೇತ್ರದಲ್ಲಿ ಜಯ ಕಾಣುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಈ ವಾರ ಹೆಚ್ಚಿನ ಆದಾಯ ವೃದ್ಧಿಯಾಗಲಿದೆ ಹಾಗೂ ಕುಟುಂಬದಲ್ಲಿ ಸುಖ, ಸಂತೋಷ ಹಾಗೂ ನೆಮ್ಮದಿಯನ್ನು ಕಾಣುವಿರಿ. ಉದ್ಯೋಗಶೀಲರಿಗೆ ಮುಂಬಡ್ತಿಯ ಜೊತೆಗೆ ಅಧಿಕಾರ ಪ್ರಾಪ್ತಿಯಾಗುವುದು. ಅನಿರೀಕ್ಷಿತವಾಗಿ ತೋರಿಬಂದ ಅವಕಾಶಗಳಿಂದ ಮನೆಯಲ್ಲಿ ಸಂತಸದ ವಾತಾವರಣ ಮೂಡುವುದು. ರಾಜಕೀಯ ವರ್ಗದವರಿಗೆ ಸ್ಥಾನಮಾನ ಗೌರವಗಳು ಲಭಿಸುತ್ತವೆ. ಶುಭವಾರ ಬುಧವಾರ, ಶುಕ್ರವಾರ ಮತ್ತು ಭಾನುವಾರ.

 

ಕರ್ಕ (Karka)

 

ಈ ವಾರ ಕೃಷಿ ಕಾರ್ಖಾನೆ ವೃತ್ತಿಯಲ್ಲಿರುವವರು ಹರ್ಷದಾಯಕ ಫಲಗಳನ್ನು ಹೊಂದುವರು .ಕಲಹಗಳು ದೂರವಾಗಿ ಹೆಜ್ಜೆ ಇಟ್ಟಲೆಲ್ಲ ಉತ್ತಮ ಫಲಗಳು  ದೊರೆಯುವವು . ದಾಂಪತ್ಯದಲ್ಲಿನ ತೊಂದರೆಗಳು ನಿಮ್ಮ ಚಾಣಾಕ್ಷತನದಿಂದ ಪರಿಹರಿಸಿಕೊಳ್ಳುವಿರಿ. ದೂರ ಸಂಚಾರದಿಂದ ಆದಾಯ ಉತ್ತಮವಾಗಿದ್ದು, ಹೆಚ್ಚು ಅವಕಾಶಗಳನ್ನು ಹೊಂದುವಿರಿ. ಬರಹಗಾರರಿಗೆ ಹೆಚ್ಚಿನ ಆವಕಾಶಗಳೊಂದಿಗೆ ಉತ್ತಮ ಆದಾಯ  ದೊರೆಯಲಿದೆ. ದೇವರ ಆರಾಧನೆಯಿಂದ ಹೆಚ್ಚು ಫಲ ಪಡೆಯುವಿರಿ. ಶುಭವಾರಗಳು ಬುಧವಾರ, ಶನಿವಾರ ಹಾಗೂ ಭಾನುವಾರ.

 

ಸಿಂಹ (Simha)

 

 

ನಿಮ್ಮ ವೃತ್ತಿ ಪ್ರವೃತ್ತಿಗಳಲ್ಲಿ ಸೌಹಾರ್ದತೆ ಕಾಯ್ದುಕೊಳ್ಳುವಿರಿ. ಕೆಲಸ ಕಾರ್ಯಗಳು  ಎಂದಿನಂತೆ ನಡೆಯುವುದು. ಒತ್ತಡಗಳಿಗೆ ಸಿಲುಕಬೇಡಿ, ಗುಣಾತ್ಮಕ ಕಾರ್ಯಗಳಿಗೆ ಮಾತ್ರ ಮಹತ್ವ ಕೊಡಿ. ಸಹೋದ್ಯೋಗಿಗಳೊಂದಿಗೆ ಪ್ರೀತಿಯಿಂದ ವರ್ತಿಸುವುದರಿಂದ ನಿಮ್ಮ ಕೆಲಸಗಳು ಸರಾಗವಾಗಿ ನೆಡೆಯಲಿವೆ. ಕೈಗೊಂಡ ಪ್ರವಾಸ ಸುಖಮಯವಾಗಿರುವುದು. ಹಿರಿಯರ ಮತ್ತು ದೇವರ ಆಶೀರ್ವಾದದಿಂದ ಮಕ್ಕಳ ವಿದ್ಯಾಭ್ಯಾಸವು ಒಳ್ಳೆಯ  ಹಂತವನ್ನು ತಲುಪಬಹುದು. ಶುಭ ದಿನಗಳು ಮಂಗಳವಾರ, ಗುರುವಾರ ಹಾಗೂ ಶುಕ್ರವಾರ .

 

ಕನ್ಯಾರಾಶಿ (Kanya)

 

ವ್ಯಾಪಾರ ,ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ಮತ್ತು ಆದಾಯವನ್ನು ಪಡೆಯಲಿದ್ದೀರಿ. ಪ್ರಯತ್ನಿಸಿದ  ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ಸಫಲರಾಗುವಿರಿ . ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆ ಇದ್ದರೂ ಸಂಪೂರ್ಣವಾಗಿ ಪೂರ್ಣವಾಗುವವು. ಸಾಮಾಜಿಕ ಕ್ಷೇತ್ರದಲ್ಲಿ ಜನರ ಮನ್ನಣೆ ಸ್ಥಾನಮಾನ ಹೆಚ್ಚುವುದರಿಂದ, ಮಾನಸಿಕ ಸಮಾಧಾನ ದೊರೆಯುವುದು. ದೂರ ಸಂಚಾರದಿಂದ ನಿಮಗೆ ಉತ್ತಮ ಅವಕಾಶಗಳು ದೊರೆಯುವವು. ವಿದ್ಯಾರ್ಥಿಗಳು ಶುಭಫಲವನ್ನು ಪಡೆಯಲಿದ್ದಾರೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಭಾಗ್ಯ ಒದಗಿ ಬರಲಿದೆ. ಶುಭ ದಿನಗಳು ಬುಧವಾರ, ಭಾನುವಾರ ಹಾಗೂ ಗುರುವಾರ .

 

ತುಲಾ (Tula)

 

 

ವಾಹನ  ಖರೀದಿಯಿಂದ ಆದಾಯ ವೃದ್ಧಿಯಾಗುವುದು. ಹೊಸ ವಾಹನ ಖರೀದಿಗೆ  ಹಿರಿಯರ ಸಹಾಯ ಸಹಕಾರ ಸಿಗುವುದು. ವೃತ್ತಿಯಲ್ಲಿ ಒಳ್ಳೆಯ ಯಶಸ್ಸು ಕಂಡುಬರುವುದು. ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆಯಲ್ಲಿ ತಮ್ಮ ಸಾಧನೆಯನ್ನು ಬಹುಮಾನ ಗಳಿಸುವ ಮೂಲಕ ತೋರಿಸುವರು. ಸಗಟು ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ , ವಹಿವಾಟುಗಳಿಂದ ಉತ್ತಮ ಲಾಭವಿದ್ದು, ಆದಾಯದಲ್ಲಿ ಹೆಚ್ಚಿನ ಕೊರತೆ ಕಂಡು ಬರುವುದು, ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರು ಆದಾಯ ಉತ್ತಮವಾಗಿರುವುದು. ಆಕಸ್ಮಿಕ ಧನಲಾಭ ಈ ವಾರ ಒಲಿದು ಬರಲಿದೆ. ಶುಭ  ದಿನಗಳು ಮಂಗಳವಾರ, ಗುರುವಾರ ಹಾಗೂ ಶನಿವಾರ.

 

ವೃಶ್ಚಿಕ (Vrushchika)

 

 

ದೂರ ಸಂಚಾರ ಮತ್ತು ಪ್ರಯಾಣದಿಂದ ಕಾರ್ಯಗಳಿಗೆ ಅನುಕೂಲವಾಗುವುದು. ಇದರಿಂದ ಮಾನಸಿಕ ನೆಮ್ಮದಿ ಸಿಗುವುದು. ಮನೆಯಲ್ಲಿ ಶುಭ ಮಂಗಳ ಕಾರ್ಯಗಳು ನಡೆದು ಇದರಿಂದ ಮನೆಯವರಿಗೆ ಮತ್ತು ಬಂಧು ಮಿತ್ರರಿಗೆ ಶ್ರೇಯಸ್ಸು, ಅಭಿವೃದ್ಧಿ ಹೆಚ್ಚುವುದರ ಜತೆಗೆ ಧನ ಲಾಭವಾಗುವುದು. ರಾಜಕಾರಣಿಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ಮುಂಬಡ್ತಿಯ ಯೋಗವಿದೆ. ಆರೋಗ್ಯವೂ ಉತ್ತಮ ಸ್ಥಿತಿಗೆ ಬರುವುದು. ದಾಂಪತ್ಯ ಜೀವನ ಸುಖಮಯವಾಗಿರುವುದು. ಆರ್ಥಿಕವಾಗಿ ಹೆಚ್ಚಿನ ಹಿಡಿತವಿದ್ದು, ಅನವಶ್ಯಕ ಧನ ವ್ಯಯವನ್ನು ತಡೆಯುವುದು. ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಶುಭ ದಿನಗಳು ಸೋಮವಾರ, ಗುರುವಾರ ಹಾಗೂ ಶನಿವಾರ.

 

ಧನು ರಾಶಿ (Dhanu)

 

 

ಈ ವಾರ ಹೆಚ್ಚಿನ ಅನುಕೂಲ ಮತ್ತು ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಬಹುದಿನಗಳಿಂದ ನಿಮ್ಮ ಮನಸ್ಸಿನಲ್ಲಿ ಯೋಜನೆ ರೂಪಿಸಿ ಇಟ್ಟುಕೊಂಡಿದ್ದ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದಲ್ಲಿ ಲಾಭ ಕಾಣುವಿರಿ . ದಂಪತಿಗಳಿಗೆ ಸಂತಾನ ಭಾಗ್ಯದ ಫಲ ಕಾಣುವಲ್ಲಿ ಅವಿವಾಹಿತರಿಗೆ ಕಂಕಣ ಬಲದಿಂದ ಸಂತಸ ತರಲಿದೆ. ಲೇಖಕರಿಗೆ ಉತ್ತಮವಾದ ಆದಾಯ ಗೃಹ ನಿರ್ಮಾಣ ಕಾರ್ಯಗಳಿಗೆ ಚಿಂತನೆಗೆ ಕಾರ್ಯಗತವಾಗಲಿದೆ. ಶುಭದಿನಗಳು ಮಂಗಳವಾರ, ಗುರುವಾರ ಹಾಗೂ ಶುಕ್ರವಾರ.

 

ಮಕರ (Makara)

 

 

ಉದ್ಯೋಗದ ವಿಚಾರದಲ್ಲಿ ಸಮಾಧಾನಕರವಾದ ವಾತಾವರಣ ಇರುತ್ತದೆ. ಹೊಸ ಬಂಡವಾಳ ಹೂಡಿಕೆಗೆ ಇದು ಸರಿಯಾದ ಸಮಯವಾಗಿದೆ. ಕಾರ್ಯಕ್ಷೇತ್ರದಲ್ಲಿ ವಿಸ್ತರಣೆಗೆ ಅನುಕೂಲ ತೋರಿ ಬರುವುದು. ದೇವರ ಕೃಪೆಯಿಂದ ನಿಮ್ಮ ಕೆಲಸಗಳು ನಿರೀಕ್ಷೆಗೂ ಮೀರಿದ ಫಲವನ್ನು ಕಾಣುವಿರಿ ಮತ್ತು ಕೆಲಸಗಳಲ್ಲಿ ಜಯ ಸಿಗುತ್ತದೆ. ಶುಭ ದಿನಗಳು ಬುಧವಾರ, ಗುರುವಾರ ಹಾಗೂ ಶನಿವಾರ.

 

ಕುಂಭರಾಶಿ (Kumbha)

 

ಸಂತಾನ ಭಾಗ್ಯದಿಂದ ಹೆಚ್ಚಿನ ಸಂತಸ, ಆರೋಗ್ಯ ಉತ್ತಮವಾಗಿದ್ದು ಹೊಸ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಈ ವಾರ ಸಕಾಲವಾಗಿದೆ. ಇದು ನಿಮ್ಮ ಅದೃಷ್ಟದ ವಾರವಾಗಿದೆ ಕಾರಣ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಲ್ಲಿ ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭವನ್ನು ಕಾಣಬಹುದು. ಶುಭದಿನಗಳು ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ .

 

ಮೀನರಾಶಿ (Meena)

 

ಮೇಲಾಧಿಕಾರಿಗಳ ವರ್ತನೆಯಿಂದ ನಿಮಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೃಪ್ತಿ ಉಂಟಾಗುವುದು. ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಿರುತ್ತವೆ. ಕೋರ್ಟಿನಲ್ಲಿರುವ ಹಳೆಯ ವ್ಯಾಜ್ಯಗಳು ಈ ವಾರ ಮುಕ್ತಾಯಗೊಳ್ಳುವ ಸಂಭವವಿದೆ. ಶುಭ ದಿನಗಳು ಸೋಮವಾರ, ಗುರುವಾರ ಹಾಗೂ ಶನಿವಾರ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top