ಭವಿಷ್ಯ

ಡಿಸೆಂಬರ್ 21 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೨೧ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೪೦
ಸೂರ್ಯಾಸ್ತ : ೧೭:೫೫
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ತದಿಗೆ
ನಕ್ಷತ್ರ : ಉತ್ತರ ಆಷಾಢ
ಯೋಗ : ವ್ಯಾಘಾತ
ಪ್ರಥಮ ಕರಣ : ಗರಜ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ೧೧:೫೫ – ೧೨:೪೦
ಅಮೃತಕಾಲ : ೦೯:೦೬ – ೧೦:೫೪
ರಾಹು ಕಾಲ: ೧೩:೪೨ – ೧೫:೦೬
ಗುಳಿಕ ಕಾಲ: ೦೯:೨೯ – ೧೦:೫೩
ಯಮಗಂಡ: ೦೬:೪೦ – ೦೮:೦೪

 

ಮೇಷ (Mesha)

ಮನೆಯಿಂದ ಹೊರಡುವ ಸಂದರ್ಭದಲ್ಲಿ ಕುಲದೇವರ ಸ್ಮರಣೆ ಮಾಡಿಕೊಂಡು ಹೊರಡಿ ಇಲ್ಲವೆ ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿ ಹೊರಟಲ್ಲಿ ನಿಮ್ಮ ಕಾರ್ಯಗಳು ಸುಲಲಿತವಾಗಿ ಆಗುವುದು. ಹಣಕಾಸಿನ ಪರಿಸ್ಥಿತಿಯು ಸುಧಾರಿಸುವುದು.

 

ವೃಷಭ (Vrushabha)

ಆರೋಗ್ಯ ಸಮಸ್ಯೆಗಳು ಬಗೆಹರಿಯುವವು. ಉತ್ತಮ ತೀರ್ಮಾನ ಮತ್ತು ಕ್ಲಿಷ್ಟಕರ ಸನ್ನಿವೇಶಗಳನ್ನು ನೀವು ನಿಭಾಯಿಸುವಿರಿ. ಕಚೇರಿಯಲ್ಲಿಯೂ ನಿಮಗೆ ಒಳ್ಳೆಯ ಗೌರವ ಸಿಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವುದು.

 

ಮಿಥುನ (Mithuna)

ಮನೆಯಲ್ಲಿನ ಶುಭ ಕಾರ್ಯಗಳಿಗೆ ಹಲವು ವಿಘ್ನಗಳು ಬಂದು ತೊಂದರೆ ನೀಡುವುದು. ಗಣಪತಿ ಪ್ರಾರ್ಥನೆಯೊಂದಿಗೆ ಪುನಃ ಕಾರ್ಯಾರಂಭ ಮಾಡಿರಿ. ಅನುಕೂಲವಾಗುವುದು. ನಿಮ್ಮ ಗುರುಗಳ ಸೇವೆ ಮಾಡಿ ಆಶೀರ್ವಾದ ಪಡೆಯಿರಿ.

 

ಕರ್ಕ (Karka)

ನಿಮ್ಮ ಕಾರ್ಯಗಳಿಗೆ ಸ್ನೇಹಿತರ ಬಳಗ ಬೆನ್ನಿಗೆ ನಿಲ್ಲುವುದು ಮಾತ್ರವಲ್ಲ ಅಗತ್ಯ ಮಾರ್ಗದರ್ಶನವನ್ನು ನೀಡುವರು. ಹೀಗಾಗಿ ಈ ದಿನ ಸಂತೋಷದಾಯಕ ದಿನವನ್ನಾಗಿ ಆಚರಿಸುವಿರಿ. ನಿಮ್ಮ ನಿಜವಾದ ಸಾಮರ್ಥ್ಯ‌ ಏನು ಎಂಬುದು ಮೇಲಧಿಕಾರಿಗಳಿಗೆ ಗೊತ್ತಾಗುವುದು.

 

ಸಿಂಹ (Simha)

ಕಾರ್ಯನಿಮಿತ್ತ ದೂರ ಪ್ರವಾಸ ಮಾಡುವ ಸಾಧ್ಯತೆ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಬರುವುದು. ಕೌಟುಂಬಿಕವಾಗಿ ನೆಮ್ಮದಿ ದಿನ. ಕೆಲವರಿಗೆ ಪುತ್ರೋತ್ಸವ ಸಂದರ್ಭ, ಸಂತೋಷ, ಸಂಭ್ರಮದ ದಿನ.

 

ಕನ್ಯಾರಾಶಿ (Kanya)

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೆಲವರಿಗೆ ಮಗನಿಗೆ ನೌಕರಿ ದೊರೆತ ಸಂತೋಷ ಉಂಟಾಗುವುದು. ವಿದ್ಯಾಬುದ್ಧಿಯಲ್ಲಿ ಯಶಸ್ಸು, ಸಾಮಾಜಿಕವಾಗಿ ಮಾನ ಸನ್ಮಾನಗಳು ಆಗುವವು. ಗುರುಹಿರಿಯರ ಮತ್ತು ಮಿತ್ರರಿಂದ ಸಕಾಲಿಕ ನೆರವು ದೊರೆಯುವುದು.

 

ತುಲಾ (Tula)

ನೋಕಾಮನೆಗಳು ಪೂರ್ಣಗೊಳ್ಳುವವು. ಸಾಮಾಜಿಕ ಮತ್ತು ರಾಜಕೀಯವಾಗಿ ಗೆಲುವನ್ನು ಸಾಧಿಸುವಿರಿ. ಸರ್ಕಾರದ ವತಿಯಿಂದ ಬರಬೇಕಾಗಿದ್ದ ಹಣ ಬರುವುದು. ಇದರಿಂದ ಮಾನಸಿಕ ನೆಮ್ಮದಿ. ಬೆಲೆಬಾಳುವ ವಸ್ತು ಖರೀದಿಗೆ ದಾರಿಯಾಗುವುದು.

 

ವೃಶ್ಚಿಕ (Vrushchika)

ಸಹೋದರರಿಂದ ಸಹಾಯವನ್ನು ನಿರೀಕ್ಷಿಸುವಂತಿಲ್ಲ. ನಂಬಿದ ಸ್ನೇಹಿತರೇ ಹಣಕಾಸಿನ ವಿಷಯದಲ್ಲಿ ಮೋಸ ಮಾಡುವರು. ಹಣವನ್ನು ಹಿತ-ಮಿತವಾಗಿ ಬಳಸಿರಿ. ಕೌಟುಂಬಿಕ ಜೀವನ ಸಾಮಾನ್ಯಮಟ್ಟದ್ದಾಗಿರುತ್ತದೆ.

 

ಧನು ರಾಶಿ (Dhanu)

ಮಾಡುವ ಕೆಲಸಗಳಲ್ಲಿ ಹೆಚ್ಚಿನ ಗಮನ ಕೊಡುವುದು ಒಳಿತು. ಗ್ರಹಗತಿಗಳ ಅಶುಭ ಸಂಚಾರದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಮತ್ತು ಈ ಬಗ್ಗೆ ಮೇಲಧಿಕಾರಿಗಳಿಂದ ಟೀಕೆಗೆ ಒಳಗಾಗುವಿರಿ. ಗುರುಧ್ಯಾನ ಮಾಡಿರಿ.

 

ಮಕರ (Makara)

ನಿಮ್ಮ ಕೆಲಸ ಕಾರ್ಯಗಳಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳುವಿರಿ. ನೀವು ಕೊಳ್ಳಲು ಬಯಸಿದ ವಸ್ತುಗಳನ್ನು ಪಡೆಯಲು ಅನೇಕ ಅಡೆತಡೆಗಳು ಎದುರಾಗುವುದು. ಕಾಗದ ಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ ಮೋಸ ಹೋಗುವ ಸಾಧ್ಯತೆ. ಈ ಬಗ್ಗೆ ಎಚ್ಚರ ಅಗತ್ಯ.

 

ಕುಂಭರಾಶಿ (Kumbha)

ಬಹು ದಿನಗಳ ಯೋಜನೆ ಸಾಕಾರಗೊಳ್ಳಲಿದೆ. ಭವಿಷ್ಯದ ಬಗ್ಗೆ ಒಳ್ಳೆಯ ನಿರ್ಧಾರ ಕೈಗೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷ ಣದ ಕುರಿತು ಚಿಂತಿಸುವರು. ಕೆಲವರು ಹೊಸ ವಿಷಯ ಕಲಿಯಲು ಹಣ ಖರ್ಚು ಮಾಡುವರು.

 

ಮೀನರಾಶಿ (Meena)

ಕಚೇರಿಯಲ್ಲಿ ಹೆಚ್ಚಿನ ಸೌಲಭ್ಯ ದೊರೆಯುವುದು. ಜೊತೆಯಲ್ಲಿ ಹೆಚ್ಚಿನ ಜವಾಬ್ದಾರಿ ಕೂಡಾ ಹೆಗಲೇರುವುದು. ಧೈರ್ಯಗೆಡದೆ ಮುನ್ನುಗ್ಗಿರಿ. ಕೆಲಸಗಳು ಉತ್ತಮ ರೀತಿಯಲ್ಲಿ ಮಾಡಿ ಮುಗಿಸುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top