ಭವಿಷ್ಯ

ಪ್ರೇಮ್ ಚಿತ್ರಕ್ಕಾಗಿ ತನ್ನ ಹಳೆ ನಿಯಮವನ್ನೇ ಬದಲಿಸಿದ ಚಾಲೆಂಜಿಂಗ್ ಸ್ಟಾರ್.

ಪ್ರೇಮ್ ಚಿತ್ರಕ್ಕಾಗಿ ತನ್ನ ಹಳೆ ನಿಯಮವನ್ನೇ ಬದಲಿಸಿದ ಚಾಲೆಂಜಿಂಗ್ ಸ್ಟಾರ್.

 

 

ಈಗ ತಂತ್ರಜ್ಞಾನ ಮುಂದುವರಿದಿರುವುದರಿಂದ ಒಂದು ಚಿತ್ರದ ಚಿತ್ರೀಕರಣ 30-40 ದಿನಗಳಲ್ಲಿ ಮುಗಿಯುತ್ತವೆ. ಆದರೆ ಕೆಲವು ಸ್ಟಾರ್ ನಂತರ ಸಿನಿಮಾಗಳೂ 6 ತಿಂಗಳಾದರೂ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾ ಅಂದ್ರೆ ದೊಡ್ಡ ಶೆಡ್ನೂಲ್‌. ಹೀರೋ ಡೇಟ್ಸ್‌ ನೂರು ದಿನ ಬೇಕು. ವಿದೇಶ ಚಿತ್ರೀಕರಣ ಮಾಡಲೇಬೇಕು ಎಂಬ ಮೈಂಡ್‌ಸೆಟ್‌ನಿಂದಲೇ ಬರುವ ನಿರ್ಮಾಪಕ, ನಿರ್ದೇಶಕರಿದ್ದಾರೆ. ಹೀಗೆ ಹೆಚ್ಚು ದಿನಗಳನ್ನು ಒಂದೇ ಚಿತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಟಾರ್ ಗಳು ಬೇರೆ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗೋದಿಲ್ಲ ಹಾಗಾಗಿ ಈ ಸಮಸ್ಯೆಯಿಂದ ಪಾರಾಗಲು ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ತಾರಕ್ ಚಿತ್ರದ ಸಂಧರ್ಭದಲ್ಲಿ ಒಂದು ಹೊಸ ತೀರ್ಮಾನಕ್ಕೆ ಬಂದಿದ್ದರು.

 

 

ಇನ್ನು ಮುಂದೆ ಒಂದು ಚಿತ್ರಕ್ಕೆ 65 ದಿನಕ್ಕಿಂತ ಹೆಚ್ಚಾಗಿ ಕಾಲ್‍ಶೀಟ್ ಕೊಡಬಾರದು ಎಂದು ದರ್ಶನ್ ತೀರ್ಮಾನಿಸಿದ್ದರು. ಒಂದು ವೇಳೆ ಹೆಚ್ಚು ಕಡಿಮೆಯಾದರೆ ಐದು ದಿನಗಾಲ ಹೆಚ್ಚುವರಿ ಡೇಟ್ಸ್ ಕೊಡುತ್ತಾರಂತೆ. ಅಲ್ಲಿಗೆ 70 ದಿನಗಳಿಗಿಂತ ಹೆಚ್ಚಾಗಿ ಡೇಟ್ಸ್ ಕೊಡಬಾರದು ಎಂಬ ನಿರ್ಧಾರ ಮಾಡಿದ್ದರು ದರ್ಶನ ಅವರ ಈ ನಿರ್ಧಾರಕ್ಕೆ ದರ್ಶನ್ ಅಭಿಮಾನಿಗಳು ಮೂರು ತಿಂಗಳಿಗೊಮ್ಮ ಹೊಸ ಸಿನಿಮಾ ನೋಡಬಹುದು ಎಂದು ಫುಲ್ ಹ್ಯಾಪಿಯಾಗಿದ್ದರು.

 

 

ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಈ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ, ಯಾಕೆಂದರೆ ಸ್ಟಾರ್ ಡೈರೆಕ್ಟಾರ್ ಪ್ರೇಮ್ ಜೊತೆ ಸಿನಿಮಾ ಮಾಡಲಿರುವ ದರ್ಶನ್ ಆ ಚಿತ್ರಕ್ಕೆ ಬರೋಬ್ಬರಿ 85 ದಿನಗಳ ಕಾಲ ಕಾಲ್ ಶೀಟ್ ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 15 ವರ್ಷಗಳ ಹಿಂದೆ ‘ಕರಿಯ’ ಸಿನಿಮಾ ಮಾಡಿದ್ದ ಈ ಜೋಡಿ ಈಗ ಮತ್ತೆ ಒಂದಾಗುತ್ತಿದೆ. ಪ್ರೇಮ್-ದರ್ಶನ್ ಕಾಂಬಿನೇಷನ್ ನ ಈ ಚಿತ್ರಕ್ಕೆ ಆಂಜನೇಯ ಎಂಬ ಟೈಟಲ್ ಇಡಲಾಗಿದ್ದು ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top